ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಈವರೆಗೆ 100 ಕೋಟಿ ಜನರ ಸಂಚಾರ!

By Kannadaprabha News  |  First Published Jan 24, 2024, 4:31 AM IST

ಬೆಂಗಳೂರು ಮೆಟ್ರೋ ನಿಗಮ ಕಳೆದ ಡಿಸೆಂಬರ್‌ನಲ್ಲಿ ಒಟ್ಟಾರೆ ನೂರು ಕೋಟಿ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದ ಮೈಲುಗಲ್ಲು ಸ್ಥಾಪಿಸಿದೆ. ಸದ್ಯ ಪ್ರತಿದಿನ 7 ಲಕ್ಷ ಸರಾಸರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.


ಬೆಂಗಳೂರು (ಜ.24) ಬೆಂಗಳೂರು ಮೆಟ್ರೋ ನಿಗಮ ಕಳೆದ ಡಿಸೆಂಬರ್‌ನಲ್ಲಿ ಒಟ್ಟಾರೆ ನೂರು ಕೋಟಿ ಪ್ರಯಾಣಿಕರಿಗೆ ಸೇವೆ ಕಲ್ಪಿಸಿದ ಮೈಲುಗಲ್ಲು ಸ್ಥಾಪಿಸಿದೆ. ಸದ್ಯ ಪ್ರತಿದಿನ 7 ಲಕ್ಷ ಸರಾಸರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

2011ರ ಅಕ್ಟೋಬರ್‌ 20ರಿಂದ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಿದ್ದು, ಕಳೆದ ಡಿಸೆಂಬರ್‌ 29ರಂದು ನೂರು ಕೋಟಿ ಪ್ರಯಾಣಿಕರ ಸಂಖ್ಯೆಯನ್ನು ದಾಟಿದೆ. ಜನವರಿಯಲ್ಲಿ ಈವರೆಗೆ ಸರಿಸುಮಾರು 1.40 ಕೋಟಿಗೂ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

 

ಇಂಡೋ-ಆಫ್ಘನ್ ಬೆಂಗಳೂರಿನ ಟಿ20 ಪಂದ್ಯಕ್ಕೆ ಮೆಟ್ರೋ ಅವಧಿ ವಿಸ್ತರಣೆ

ಡಿಸೆಂಬರ್‌ನಲ್ಲಿ ಒಟ್ಟು 1.73 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಡಿ.13ರಂದು ಗರಿಷ್ಠ 7.48ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದರಲ್ಲಿ ಶೇ. 51ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌, ಶೇ.31ರಷ್ಟು ಟೋಕನ್‌ ಬಳಕೆದಾರರು ಸೇರಿದ್ದಾರೆ. ಜೊತೆಗೆ ಶೇ. 14ರಷ್ಟು ಕ್ಯೂ ಆರ್‌ ಟಿಕೆಟ್ ಬಳಕೆದಾರರಿದ್ದಾರೆ.2023ರ ಜನವರಿಯಲ್ಲಿ 5.11 ಲಕ್ಷವಿದ್ದ ಕ್ಯೂ ಆರ್‌ ಟಿಕೆಟ್‌ ಬಳಕೆದಾರರ ಸಂಖ್ಯೆ ಡಿಸೆಂಬರ್‌ಗೆ 25.9 ಲಕ್ಷ ದಾಟಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.

ಬೆಂಗಳೂರು ನಮ್ಮ ಮೆಟ್ರೋಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಎಮ್.ಮಹೇಶ್ವರ ರಾವ್ ನೇಮಕ

click me!