
ಬೆಂಗಳೂರು (ಆ.27): ಸಾಹಿತಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸುವ ಮೂಲಕ ಬಿಜೆಪಿಯವರ ಮನಸ್ಥಿತಿ ಬಹಿರಂಗವಾಗಿದೆ. ಮೈಸೂರು ದಸರಾ ಆಚರಣೆ ಸರ್ಕಾರದ ಕಾರ್ಯಕ್ರಮ, ಅದು ಮೈಸೂರು ಮಹಾರಾಜರ ವಂಶದವರ ಕಾರ್ಯಕ್ರಮವಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಮೈಸೂರು ಮಹಾರಾಜರು ಪ್ರಗತಿಪರರು. 1918ರಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು ಎಂದವರು. ಇದು ಮಹಾರಾಜರ ವಂಶದ ಕಾರ್ಯಕ್ರಮ ಅಲ್ಲ, ಸರ್ಕಾರದ ಕಾರ್ಯಕ್ರಮ. ಮಹಾರಾಜರ ಮನೆಯಲ್ಲಿ ನಡೆಯುವ ಪೂಜೆ, ಕೈಂಕರ್ಯದಲ್ಲಿ ಭಾಗಿಯಾಗಿದ್ದರೆ ಏನಾದರೂ ಹೇಳಬಹುದು. ಆದರೆ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಯಾರೂ ವಿರೋಧಿಸಲಾಗದು ಎಂದು ಹೇಳಿದರು.
ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿ, ನಾಗ್ಪುರ ಯುನಿವರ್ಸಿಟಿಯಲ್ಲಿ ಬುಕರ್ ಪ್ರಶಸ್ತಿ ಬಂದವರು ಯಾರೂ ಇಲ್ಲ. ಅವರು ಸಾಮಾಜಿಕ ಹೋರಾಟಗಾರ್ತಿ. ಅಂತಹವರು ಉದ್ಘಾಟನೆ ಮಾಡುವುದು ಸ್ವಾಗತಾರ್ಹ. ಇದನ್ನೂ ವಿರೋಧಿಸುವ ಬಿಜೆಪಿಯವರ ಮನಸ್ಥಿತಿ ಬಹಿರಂಗವಾಗಿದೆ. ಮಹಿಳೆಯರನ್ನು ಬಿಜೆಪಿಯವರು ಒಪ್ಪುವುದೇ ಇಲ್ಲ. ಅವರು ಎಂದೂ ಪ್ರಗತಿಪರ ಚಿಂತಕರು, ಹೋರಾಟಗಾರ್ತಿಯರನ್ನು ಒಪ್ಪುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ