ಶ್ರೀಕಾಂತ್ ಪೂಜಾರಿ ಜೊತೆ ಪ್ರತಿಯೊಬ್ಬ ರಾಮಭಕ್ತನೂ ಇದ್ದಾನೆ; ಬಿಡುಗಡೆ ಮಾಡೋವರೆಗೆ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

By Ravi Janekal  |  First Published Jan 4, 2024, 2:41 PM IST

ಗೋಧ್ರಾದಂತಹ ಘಟನೆ ಕರ್ನಾಟಕದಲ್ಲಿ ನಡೆದರೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರ ನೇರ ಹೊಣೆಯಾಗಿರ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.


ಕಾರವಾರ, ಉತ್ತರಕನ್ನಡ (ಜ.4): ಗೋಧ್ರಾದಂತಹ ಘಟನೆ ಕರ್ನಾಟಕದಲ್ಲಿ ನಡೆದರೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರ ನೇರ ಹೊಣೆಯಾಗಿರ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದು ಗೋಧ್ರಾ ಹತ್ಯಾಕಾಂಡ ನಡೆಯುತ್ತೆ ಎಂಬ ಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಕೆ ಹರಿಪ್ರಸಾದ್ ಬೇರೆಯಲ್ಲ, ಕಾಂಗ್ರೆಸ್ ಬೇರೆಯಲ್ಲ. ಅವರು ಕಾಂಗ್ರೆಸ್‌ನ ಮುಖಂಡರು ಹಾಗೂ ರಾಷ್ಟ್ರಮಟ್ಟದಲ್ಲಿ ಪದಾಧಿಕಾರಿಯಾಗಿದ್ದವರು. ಅವರು ನನ್ನ ಹೇಳಿಕೆ ಬೇರೆ, ಕಾಂಗ್ರೆಸ್ ಹೇಳಿಕೆ ಬೇರೆ ಅಂದ್ರೆ ನಡೀಯಲ್ಲ. ಕಾಂಗ್ರೆಸ್ಸಿನ ಒಳ ಮಾನಸಿಕ ತುಮುಲವನ್ನು ಬಿಕೆ ಹರಿಪ್ರಸಾದ್ ಬಹಿರಂಗವಾಗಿ ಹೇಳಿದ್ದಾರೆ. ಗೋಧ್ರಾದಂಥ ಕೃತ್ಯ ನಡೆಯುತ್ತೆ ಎಂಬ ಬಗ್ಗೆ ಇವರಿಗೆ ಮೊದಲೇ ಮಾಹಿತಿ ಇದೆ ಹೀಗಾಗಿ ಬಿಕೆ ಹರಿಪ್ರಸಾದರನ್ನ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಕರಸೇವಕ ಶ್ರೀಕಾಂತ್ ಪೂಜಾರಿ ಬಂಧಿಸಿದ್ದ ಇನ್ಸ್‌ಪೆಕ್ಟರ್‌ ಮಹಮದ್ ರಫೀಕ್‌ಗೆ ಕಡ್ಡಾಯ ರಜೆ ಶಿಕ್ಷೆ!

ಗೋಧ್ರಾದಂತಹ ಕೃತ್ಯ ನಡೆಯುತ್ತೆ ಅನ್ನೋದು ರಾಮಭಕ್ತರನ್ನು ಹೆದರಿಸುವ, ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ ಕೆಲಸವಿದು. ಪ್ರಜಾಪ್ರಭುತ್ವದಲ್ಲಿ ಕಾನೂನು ವಿರೋಧಿ ಚಟುವಟಿಕೆ ನಡೆದರೂ ಅದನ್ನು ಮುಚ್ಚುವುದೇ ಅಪರಾಧ. ಏನಿದ್ರೂ ಮುಖ್ಯಮಂತ್ರಿ, ಗೃಹಮಂತ್ರಿಗಳ ಜತೆ ಅವರು ವಿಚಾರ ಹಂಚಿಕೊಳ್ಳಬೇಕು. ಪರಿಸ್ಥಿತಿ ನಿಭಾಯಿಸಲು ಅವರು ಸರಕಾರಕ್ಕೆ ನೆರವಾಗಬೇಕು. ರಾಜ್ಯ ಸರಕಾರದ ಏಜೆನ್ಸಿಗಳ ಮೂಲಕ ಗೃಹ ಸಚಿವರ ನೇತೃತ್ವದಲ್ಲಿ ಈ ಬಗ್ಗೆ ತನಿಖೆಯಾಗಬೇಕು. ಯಾವಾಗ ರಾಜ್ಯ ಸರಕಾರ ವಿಫಲವಾಗ್ತದೆ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡ್ತದೆ. ಇದು ಗಂಭೀರವಾದ ವಿಚಾರವಾಗಿದ್ದು, ಕಾಂಗ್ರೆಸ್‌ನತ್ರ ತಾಕತ್ತಿದ್ರೆ ತನಿಖೆ ಮಾಡಲಿ, ಇಲ್ಲಾಂದ್ರೆ ಕೇಂದ್ರ ತನಿಖೆ ಮಾಡ್ತದೆ. ಅಗತ್ಯಬಿದ್ದರೆ ಎನ್‌ಐಎ ಮೂಲಕವೂ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತದೆ ಎಂದರು.

ನಾನೂ ಕರಸೇವಕ; ನನ್ನನ್ನು ಬಂಧಿಸಿ: ಪ್ರತಿಭಟನೆಗಿಳಿದ ಶಾಸಕ ವಿ.ಸುನಿಲ್ ಕುಮಾರ್ ಪೊಲೀಸರ ವಶಕ್ಕೆ

ಶ್ರೀಕಾಂತ್ ಪೂಜಾರಿ ಬಂಧನಕ್ಕೆ ಕೋಟ ಗರಂ:
 
ಶ್ರೀಕಾಂತ್ ಪೂಜಾರಿ ಕಾನೂನುಬಾಹಿರವಾಗಿ ಬಂಧಿಸಿದೆ. ಬಿಡುಗಡೆ ಮಾಡದಿದ್ರೆ 9ರಂದು ಠಾಣೆಗೆ ಮುತ್ತಿಗೆ ಹಾಕೋದಾಗಿ ರಾಜ್ಯಾಧ್ಯಕ್ಷರು, ಕೆಳಮನೆ ವಿಪಕ್ಷ ನಾಯಕರು ಹೇಳಿದ್ದಾರೆ. ಶ್ರೀಕಾಂತ್ ಪೂಜಾರಿ ಜತೆ ಪ್ರತಿಯೊಬ್ಬ ರಾಮಭಕ್ತನೂ ಇದ್ದಾನೆ. ಪ್ರತೀ ಕರಸೇವಕನೂ ಇದ್ದಾನೆ, ಬಿಜೆಪಿಯ ಕಾರ್ಯಕರ್ಯನೂ ಇದ್ದಾನೆ. ಶ್ರೀಕಾಂತ್ ಪೂಜಾರಿ ಕುಟುಂಬಕ್ಕೆ ರಕ್ಷಣೆ ಕೊಡ್ತೇವೆ, ಅವರನ್ನು ಹೊರಕ್ಕೆ ತರುವವರೆಗೂ ಹೋರಾಟ  ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

click me!