ಬುರುಡೆ ಗಿರಾಕಿ ಬಿಜೆಪಿಯ ಕಾರ್ಯಕರ್ತ : ಡಿಕೆ ಬಾಂಬ್‌

Kannadaprabha News   | Kannada Prabha
Published : Sep 08, 2025, 05:18 AM IST
Dk Shivakumar

ಸಾರಾಂಶ

ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಂಡು ಬಲಿಪಶು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.

ಬೆಂಗಳೂರು : ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳವನ್ನು ದುರುಪಯೋಗ ಮಾಡಿಕೊಂಡು ಬಲಿಪಶು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪಾದಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸಿರುವವರು ನಾವು. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು. ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ ಎಂದು ದೂರಿದರು.

ಧರ್ಮಸ್ಥಳದಲ್ಲಿ ಶವ ಹೂಳಲಾಗಿದೆ ಎಂಬ ಆರೋಪ ಸಂಬಂಧ ಎಸ್‌ಐಟಿ ತಂಡ ಉತ್ಖನನ ನಡೆಸುತ್ತಿರುವ ವೇಳೆ ಈ ಆರೋಪದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದ ಡಿಕೆಶಿ ಹೇಳಿದ್ದರು. ಬಳಿಕ ಇದು ಬಿಜೆಪಿಯ ಎರಡು ಗುಂಪುಗಳ ಕಿತ್ತಾಟ ಎಂದೂ ಆರೋಪಿಸಿದ್ದರು.

ಡಿಕೆಶಿ ಹೇಳಿದ್ದೇನು?

- ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳ ಕ್ಷೇತ್ರದ ದುರುಪಯೋಗ

- ಶ್ರೀಕ್ಷೇತ್ರದ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವುದು, ಬಲಿಪಶು ಮಾಡುತ್ತಿರುವುದು ಬಿಜೆಪಿ

- ಬುರುಡೆ ಗಿರಾಕಿ ಯಾರು? ಬಿಜೆಪಿಯ ಕಾರ್ಯಕರ್ತರಲ್ಲವೇ? ಬಿಜೆಪಿಗರಿಂದಲೇ ಅಪಮಾನ

- ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸುತ್ತಿರುವವರು ನಾವು: ಉಪಮುಖ್ಯಮಂತ್ರಿ ಹೇಳಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು