ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ ಎಂದು ತಿಮರೋಡಿ ಆರೋಪ, 24 ಗುಂಡಿ ಅಗೆಯುತ್ತೀರಾ? ಸತೀಶ್ ರೆಡ್ಡಿ ಪ್ರಶ್ನೆ

Published : Aug 18, 2025, 04:24 PM IST
siddaramaiah

ಸಾರಾಂಶ

ಧರ್ಮಸ್ಥಳ ಪ್ರಕರಣ ಸದನದಲ್ಲಿ ಕಾವು ಪಡೆದಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ವಿಚಾರವನ್ನು ಮುಂದಿಟ್ಟ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ತಿಮರೋಡಿ ಹೇಳಿದಂತೆ 24 ಗುಂಡಿ ಅಗೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. 

ಧರ್ಮಸ್ಥಳ (ಆ.18) ಧರ್ಮಸ್ಥಳ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಅನಾಮಿಕ ದೂರುದಾರ ಹೇಳಿಕೆ ಪಡೆದು ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ 16ಕ್ಕೂ ಹೆಚ್ಚು ಗುಂಡಿ ಅಗೆದು ಶವ ಶೋಧ ನಡೆಸಿದೆ. ಇತ್ತ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ವಿರುದ್ಧ ಬಿಜೆಪಿ ನಾಯಕರು ಜಾಥ ನಡೆಸುತ್ತಿದ್ದಾರೆ. ಇತ್ತ ಗೃಹ ಸಚಿವ ಡಾ.ಜಿ ಪರಮೇಶ್ವರ್, ಎಸ್ಐಟಿ ಶವ ಶೋಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ತನಿಖೆ, ಅಪಪ್ರಚಾರ ವಿರುದ್ದ ಬಿಜೆಪಿ ಧ್ವನಿ ಎತ್ತಿದೆ. ಪ್ರಮುಖವಾಗಿ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ನೀಡಿದ ಹೇಳಿಕೆಯನ್ನು ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರಕ್ಕೆ ಹಲವು ಪ್ರಶ್ನೆ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ. ಇದೀಗ 24 ಕಡೆ ಗುಂಡಿ ಅಗೆಯುತ್ತೀರಾ ಎಂದು ಸತೀಶ್ ರೆಡ್ಡಿ ಪ್ರಶ್ನಿಸಿದ್ದಾರೆ.

ಹೇಳಿದ ತಕ್ಷಣ ಗುಂಡಿ ಅಗೆಯಲು ಏನಿದು?

ಯಾರೋ ದೂರುದಾರ ಹೇಳಿದ ಎಂದು ಸಿಕ್ಕ ಸಿಕ್ಕ ಕಡೆ ಗುಂಡಿ ಅಗೆದಿದ್ದೀರಿ. ಮೊದಲು ಆತನ ವಿಚಾರಣೆಯಾಗಬೇಕಿತ್ತು. ಆದರೆ ಆತ ಹೇಳಿದ ಹಾಗೆ ಗುಂಡಿ ಅಗೆಯಲು ಹೋಗಿದ್ದೀರಿ. ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಕೂಡ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಇದೀಗ ಗುಂಡಿ ಅಗೆಯುತ್ತೀರಾ? ಇದಕ್ಕೆ ಅರ್ಥವಿದೆಯಾ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ವಿಧಾನಸೌಧ, ಹೈಕೋರ್ಟ್ ಎಲ್ಲೆಂದರಲ್ಲಿ ಹೆಣ ಹೂತಿದ್ದೇನೆ ಎಂದರೆ ಅದಕ್ಕೆ ಗುಂಡಿ ತೆಗೆದು ತನಿಖೆ ಮಾಡೋಕೆ ಆಗುತ್ತಾ ಎಂದು ಸತೀಶ್ ರೆಡ್ಡಿ ಪ್ರಶ್ನಿಸಿದ್ದಾರೆ. ಧರ್ಮಸ್ಥಳದ ಮೇಲೆ ತನಿಖೆಗೆ ಆಗ್ರಹ ಮಾಡಿದ್ದೇ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ. ನಾವು ಧರ್ಮಸ್ಥಳ ಚಲೋ ಮಾಡುತ್ತೇವೆ. ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.

ಧರ್ಮಸ್ಥಳದ ಶವ ಶೋಧಕ್ಕೆ ತಾತ್ಕಾಲಿಕ ಬ್ರೇಕ್

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿಯ ಶವ ಶೋಧಕ್ಕೆ ಗೃಹ ಸಚಿವ ಪರಮೇಶ್ವರ್ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಧರ್ಮಸ್ಥಳದಲ್ಲಿ ಇದುವರೆಗೆ 16ಕ್ಕೂ ಹೆಚ್ಚು ಗುಂಡಿ ಅಗೆದು ಶವ ಶೋಧನೆ ನಡೆಸಲಾಗಿದೆ. ಈ ಪೈಕಿ 6ನೇ ಗುಂಡಿಯಲ್ಲಿ ಕಳೇಬರ ಸಿಕ್ಕಿದೆ. ಈ ಕಳೇಬರ, ಇಲ್ಲಿನ ಮಣ್ಣು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಬಂದ ಬಳಿಕ ಮತ್ತಷ್ಟು ಗುಂಡಿ ಅಗೆಯಬೇಕಾ, ಶವ ಶೋಧನೆ ಮುಂದುವರಿಸಬೇಕಾ ಅನ್ನೋದು ನಿರ್ಧಾರವಾಗಲಿದೆ. ಸದ್ಯಕ್ಕೆ ಶವ ಶೋಧನೆಗೆ ಬ್ರೇಕ್ ಹಾಕಲಾಗಿದೆ.

ಧರ್ಮಸ್ಥಳದ ಮುಸುಕುದಾರಿ ದೂರುದಾರನ ಹೈಡ್ರಾಮ

ಧರ್ಮಸ್ಥಳದ ಮುಕುಸುದಾರಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ. ಇದೇ ಧರ್ಮಸ್ಥಳದ ಸುತ್ತ ಮುತ್ತಲಿನಲ್ಲಿ ಹೂತಿಟ್ಟ ಒಂದು ಕಳೇಬರವನ್ನು ತೆಗೆದುಕೊಂಡು ಬಂದಿದ್ದಾನೆ. ಇದೀಗ ಈ ಕಳೇಬರ ಎಲ್ಲಿಂದ ತರಲಾಗಿದೆ ಅನ್ನೋದಕ್ಕೆ ದೂರುದಾರ ಸ್ಪಷ್ಟ ಉತ್ತರ ನೀಡಲು ವಿಫಲನಾಗಿದ್ದಾನೆ. ಎಸ್ಐಟಿ ವಿಚಾರಣೆ ವೇಳೆ ಬುರುಡೆ ತಂದಿರುವುದು ಬೋಳಿಯಾರ್, ಬಂಗ್ಲಗುಡ್ಡೆ, ನೇತ್ರಾವತಿ ಸ್ನಾಘಟ್ಟ ಎಂದು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾನೆ.

ಇದೀಗ ಧರ್ಮಸ್ಥಳ ಪರ ಕಾಂಗ್ರೆಸ್ ನಾಯಕರು ಜಾಥ ನಡೆಸಲು ಸಜ್ಜಾಗಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಅಪಪ್ರಚಾರ ಖಂಡಿಸಿ ಜಾಥ ನಡೆಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್