ಅಧಿಕಾರಕ್ಕಾಗಿ ಜನರಲ್ಲಿ ಜಾತಿ, ಧರ್ಮದ ಹೆಸರಲ್ಲಿ ಕೋಮುಭಾವನೆ ಕೆರಳಿಸಿ ಕೋಮುದಳ್ಳುರಿ ನಡೆಸುವ ಬಿಜೆಪಿ, ಸಂಘ ಪರಿವಾರ ರಾಷ್ಟಕ್ಕೆ ಆಪತ್ತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪರಿವಾರದ ವಿರುದ್ದ ತೀವ್ರ ವಾಗ್ದಾಳಿ
ಚಿಕ್ಕಬಳ್ಳಾಪುರ (ಸೆ.19) : ಅಧಿಕಾರಕ್ಕಾಗಿ ಜನರಲ್ಲಿ ಜಾತಿ, ಧರ್ಮದ ಹೆಸರಲ್ಲಿ ಕೋಮುಭಾವನೆ ಕೆರಳಿಸಿ ಕೋಮುದಳ್ಳುರಿ ನಡೆಸುವ ಬಿಜೆಪಿ, ಸಂಘ ಪರಿವಾರ ರಾಷ್ಟಕ್ಕೆ ಆಪತ್ತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪರಿವಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಡೀಪೋ ಬಳಿ ಭಾನುವಾರ ಸಿಪಿಎಂ ಆಯೋಜಿಸಿದ್ದ ರಾಜ್ಯ ಮಟ್ಟದ ಬೃಹತ್ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪಿಣರಾಯಿ ವಿಜಯನ್ ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ, ಸಂಘ ಪರಿವಾರ ಹಾಗೂ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ದ ನೇರ ವಾಗ್ದಾಳಿ ನಡೆಸಿ ಕೋಮುವಾದಿ ರಾಜಕಾರಣದ ವಿರುದ್ದ ಪ್ರಗತಿಪರರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಸಿಪಿಎಂ ಸಮಾವೇಶ: ಕೇರಳ ಸಿಎಂ ಪಿಣರಾಯಿ ವಿಜಯನ್ ಇಂದು ರಾಜ್ಯಕ್ಕೆ ಭೇಟಿ
undefined
ದೇಶಭಕ್ತಿ ಎಂದರೆ ಹಿಂದುತ್ವವೇ?
ದೇಶದ ಸ್ವಾತಂತ್ರ್ಯ ಚಳವಳಿ ಭಾಗವಾಗಿರದ ಶಕ್ತಿಗಳು ಇಂದು ಅಧಿಕಾರದಲ್ಲಿ ವಿಜೃಂಭಿಸುತ್ತಿರುವುದು ದೊಡ್ಡ ದುರಂತ, ದೇಶ ಪ್ರೇಮ, ದೇಶ ಭಕ್ತಿಯೆಂದರೆ ಹಿಂದುತ್ವ ಎನ್ನುವ ರೀತಿಯಲ್ಲಿ ಸಂಘ, ಪರಿವಾರ ವರ್ತಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ. ರೈತ, ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಬಿಜೆಪಿಯನ್ನು ಸೈದ್ದಾಂತಿಕವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಅದು ಕೇವಲ ಎಡಪಕ್ಷಗಳಿಗೆ ಮಾತ್ರ ಸಾಧ್ಯ ಎಂದರು.
ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ವೇಳೆಯೆ ಗೋವಾ 8 ಮಂದಿ ಕಾಂಗ್ರೆಸ್ ಶಾಸಕರು, ಮಾಜಿ ಸಿಎಂ ಬಿಜೆಪಿ ಸೇರಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ಒಂದೇ, ಕೇರಳ ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ಸೇರುವ ಬಗ್ಗೆ ಮಾತನಾಡಿದ್ದಾರೆ. ಇತಿಹಾಸವನ್ನು ತಿರುಚುವ ಮೂಲಕ ಸಹಿಷ್ಣುತೆಯ ಕರುನಾಡು ಕರ್ನಾಟಕವನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ಕೋಮುವಾದಿಗಳ ಪ್ರಯೋಗ ಶಾಲೆಯಾಗಿ ಬಿಜೆಪಿ, ಸಂಘ ಪರಿವಾರ ಮಾಡಿಕೊಂಡಿದೆಯೆಂದ ಪಿಣರಾಯಿ ವಿಜಯನ್, ಕರ್ನಾಟಕದಲ್ಲಿ ರೆಸಾರ್ಚ್ ರಾಜಕಾರಣಕ್ಕೆ ನಾಂದಿ ಆಡಿದ್ದೆ ಬಿಜೆಪಿ. ಚುನಾವಣೆಗಳನ್ನು ಭ್ರಷ್ಟಗೊಳಿಸಿ ಹಣ, ತೋಲ್ಬಳದ ಮೂಲಕ ಅಧಿಕಾರಕ್ಕೆ ಬರುವ ಬಿಜೆಪಿ ಜನ ಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸದೇ ದೇಶದ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುತ್ತಿದೆಯೆಂದರು.
ರಾಜ್ಯಗಳ ಕತ್ತು ಹಿಸುಕುವ ಕೆಲಸ: ದೇಶದ ಒಕ್ಕೂಟದ ವ್ಯವಸ್ಥೆಯ ವಿರುದ್ದವಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಬಿಜೆಪಿ, ಸಂಘ ಪರಿವಾರದ ಎಲ್ಲಾ ಕುತಂತ್ರಗಳನ್ನು ಸೈದ್ದಾಂತಿಕವಾಗಿ ಎದುರಿಸುವ ತಾಕತ್ತು ಎಡಪಕ್ಷಗಳಿಗೆ ಮಾತ್ರ ಇದೆ. ರಾಷ್ಟ್ರದಲ್ಲಿ ನವ ಉದಾರೀಕರಣ ನೀತಿಗಳು ಶರವೇಗದಲ್ಲಿ ಜಾರಿ ಆಗುತ್ತಿವೆ. ಬಿಜೆಪಿ, ಸಂಘ ಪರಿವಾರ ದೇಶವನ್ನು ವಿಭಜಿಸವ ಅಜೆಂಡಾ ಹೊಂದಿವೆ. ಇದು ಅತ್ಯಂತ ಅಪಾಯಕಾರಿ, ಕೋಮುವಾದಿ ಶಕ್ತಿಗಳಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ತೀವ್ರ ಅಪಾಯ ಇದೆ ಎಂದರು.
ಸಮಾವೇಶದ ವೇದಿಕೆಯಲ್ಲಿ ಸಿಪಿಎಂ ಪೊಲಿಟ್ ಬ್ಯುರೊ ಸದಸ್ಯರಾದ ಎಂ.ಎ. ಬೇಬಿ, ಬಿ.ವಿ. ರಾಘವಲು, ರಾಜ್ಯ ಕಾರ್ಯದರ್ಶಿ ಯು. ಬಸವರಾಜ. ಮುಖಂಡರಾದ ಕೆ.ಎನ….ಉಮೇಶ…, ಎಸ…. ವರಲಕ್ಷ್ಮಿ, ಕೆ.ನೀಲಾ, ಜಿ.ಎನ್.ನಾಗರಾಜ, ಮೀನಾಕ್ಷಿ ಸುಂದರಂ, ಗೋಪಾಲಕೃಷ್ಣ ಅರಳಹಳ್ಳಿ, ಎಂ.ಪಿ.ಮುನಿವೆಂಕಟಪ್ಪ. ಜಿ.ಸಿ.ಬಯ್ಯಾರೆಡ್ಡಿ, ಡಾ. ಕೆ.ಪ್ರಕಾಶ…, ಸಯ್ಯದ್ ಮುಜೀಬ…, ಯಾಧವ ಶೆಟ್ಟಿ, ಡಾ. ಅನೀಲ್ ಕುಮಾರ್, ಮಹಮ್ಮದ್ ಅಕ್ರಂ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.
'ಭಾರತ್ ಜೋಡೋ ಅಲ್ಲ ಇದು ಸೀಟ್ ಜೋಡೋ..' ಕಾರ್ಟೂನ್ ಮೂಲಕ ಕಾಂಗ್ರೆಸ್‌ಗೆ ತಿವಿದ ಕಮ್ಯುನಿಸ್ಟರು!
ಕರ್ನಾಟಕಕ್ಕೆ ಬಿಜೆಪಿಯಿಂದ ಕಳಂಕ
ಉಡುಪಿ, ಮಂಗಳೂರು, ಕರಾವಳಿ ಭಾಗಗಳಲ್ಲಿ ಕೋಮು ಪ್ರಚೋಧನೆ ಮೂಲಕ ಕರ್ನಾಟಕದ ಪರಂಪರೆಗೆ ಬಿಜೆಪಿ, ಸಂಘ ಪರಿವಾರ ಕಳಂಕ ತರುತ್ತಿದೆ. ಶಾಲಾ ಪಠ್ಯ ಪುಸ್ತಕಗಳನ್ನು ಕೇಸರಿಕರಣಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಮುಗ್ಧ ಮಕ್ಕಳಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಸಮಾನತೆಗಾಗಿ ಹೋರಾಡಿದ ಪೆರಿಯರ್. ನಾರಾಯಣ ಗುರುಮ ಭಗತ್‌ಸಿಂಗ್ ರವರ ಪಠ್ಯಗಳನ್ನು ನಿರ್ಲಕ್ಷಿಸಲಾಗಿದೆ.
-- ಪಿಣರಾಯಿ ವಿಜಯನ್, ಕೇರಳ ಸಿಎಂ.