ದೇವಾನು ದೇವತೆಗಳ ಕಾಲದಿಂದಲೂ ವಿರೋಧಿಸುವವರು ಇದ್ದಾರೆ. ದೇವತೆಗಳಿಗೆ ರಾಕ್ಷಸರು, ಅಸುರ ಶಕ್ತಿಗಳಿದ್ದವು. ಹಾಗೆ ಎಲ್ಲ ಕಾಲದಲ್ಲೂ ಇದು ಇದ್ದದ್ದೆ. ಅದರ ನಿಗ್ರಹಕ್ಕೆ ದೈವೀಶಕ್ತಿ ಇರೋದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು (ಅ.24): ದೇವಾನು ದೇವತೆಗಳ ಕಾಲದಿಂದಲೂ ವಿರೋಧಿಸುವವರು ಇದ್ದಾರೆ. ದೇವತೆಗಳಿಗೆ ರಾಕ್ಷಸರು, ಅಸುರ ಶಕ್ತಿಗಳಿದ್ದವು. ಹಾಗೆ ಎಲ್ಲ ಕಾಲದಲ್ಲೂ ಇದು ಇದ್ದದ್ದೆ. ಅದರ ನಿಗ್ರಹಕ್ಕೆ ದೈವೀಶಕ್ತಿ ಇರೋದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
‘ಕಾಂತಾರ’ ಚಿತ್ರ ವಿರೋಧ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂತಾರ’ ತುಳುನಾಡು, ಮಲೆನಾಡಿನ ಭಾಗದ ಜಾನಪದ ದೇವತೆಯ ಸಂಬಂಧಿಸಿದ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಚಿತ್ರವಾಗಿದೆ. ಕಥೆ ಹಿನ್ನೆಲೆ, ನಟ ರಿಷಬ್ ಶೆಟ್ಟಿ ಅವರು ಆ ಪಾತ್ರಕ್ಕೆ ಜೀವ-ಭಾವ ತುಂಬಿ ಅಭಿನಯಿಸಿರುವುದು ಹಾಗೂ ಸಹಜವಾಗಿ ನಮಗಿರುವ ನಂಬಿಕೆ ಕಾರಣಕ್ಕೂ ಕೂಡ ಚಿತ್ರ ಜನಾಕರ್ಷಣೆ ಮಾಡಿದೆ. ಈ ಮೂಲಕ ದೇವರ ಮೇಲಿನ ಶ್ರದ್ಧೆ , ಭಕ್ತಿ ಭಾವವನ್ನು ಗಟ್ಟಿಗೊಳಿಸಿದೆ ಎಂದರು.
undefined
ಇಷ್ಟು ಸಾಕಾಗುವುದಿಲ್ಲ, ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೆಕು: ಸಿ.ಟಿ.ರವಿ
ದುಷ್ಟರಿಲ್ಲದಿದ್ದರೆ ದೇವರು ತನ್ನ ಪವಾಡವನ್ನು ತೋರಿಸಲು ಹೇಗೆ ಸಾಧ್ಯ? ದುಷ್ಟರಿರುವ ಕಾರಣಕ್ಕೆ ಶ್ರೀ ಕೃಷ್ಣನ ನೆನಪಾಗೋದು, ಕುರುಕ್ಷೇತ್ರದ ಯುದ್ಧ ನಡೆದದ್ದು. ಈ ಕಾರಣಕ್ಕಾಗಿಯೇ ಜಗತ್ತಿನಲ್ಲಿ ದುಷ್ಟರ ನಿಗ್ರಹಕ್ಕಾಗಿಯೇ ಜಗತ್ತಿನಲ್ಲಿ ಕಥೆ ಪುರಾಣ ನಡೆದಿರುವುದು. ತನ್ನ ಲೀಲೆಯನ್ನು ಪ್ರಕಟಗೊಳಿಸುವುದಕ್ಕಾಗಿ ಆದರೂ ದುಷ್ಟ ಶಕ್ತಿಗಳು ಇರಬೇಕಲ್ಲಾ. ಹಿಂದೂ ಭಾವನೆಗೆ ಬೆಲೆ ಕೊಡುವ, ಶಕ್ತಿ ತುಂಬುವ ಮತ್ತು ಕುಂಕುಮ ಕಂಡರೆ ಭಕ್ತಿ, ಪ್ರೀತಿಯಿಂದ ಧರಿಸಿಕೊಂಡು ಭಾರತ್ ಮಾತಾಕಿ ಜೈ ಎನ್ನುವ ಸರ್ಕಾರ ಮತ್ತೆ ಬರಬೇಕು ಎಂದರು.
ಕುಂಕುಮ ಕಂಡರೆ ಭೀತಿ, ದ್ವೇಷ ಇರುವ ಜನ ಬೇಡ. ಹಾಗಾಗಿ ನಮ್ಮ ರಾಜ್ಯದಲ್ಲಿ ಪುನಃ ಬಿಜೆಪಿ ಸರ್ಕಾರ ಬರಬೇಕು. ಹಿಂದುತ್ವವೆಂದರೆ ದೇಹದಲ್ಲಿ ರಕ್ತ ಹೇಗೊ ಹಾಗೆಯೇ ನಮ್ಮ ಪಕ್ಷದ ಸಿದ್ಧಾಂತ ಹಿಂದುತ್ವ, ಚುನಾವಣೆ ಸಮಯದ ಹಿಂದುಗಳು ನಾವಲ್ಲ. ಹುಟ್ಟಿನಿಂದ ಸಾಯೋವರೆಗೂ ಹಿಂದೂಗಳೇ. ಹಿಂದುತ್ವ ನಮ್ಮ ಜೀವನದ ಜೀವನಾಡಿ, ಅಭಿವೃದ್ಧಿ ಜನರ ಮುಂದಿಡುತ್ತೇವೆ, ಚುನಾವಣೆ ಎದುರಿಸುತ್ತೇವೆ ಎಂದರು.
Chikkamagaluru: ಕಾಂಗ್ರೆಸ್ಸಿನ ಪೇಸಿಎಂ ಪೇ ಪೋಸ್ಟರ್‌ಗೆ ಸಿ.ಟಿ.ರವಿ ಟಾಂಗ್
ಚುನಾವಣೆಗಾಗಿಯೇ ಕೆಲಸ ಮಾಡುವ ಜನ ಬೇರೆ. ನಾವು ಕೆಲಸ ಮಾಡುತ್ತ ಹೋಗುತ್ತೇವೆ, ಅದು ಖಂಡಿತವಾಗಿಯೂ ಚುನಾವಣೆಗೆ ಸಹಕಾರಿಯಾಗಿದೆ. ಚುನಾವಣೆಗೋಸ್ಕರ ನಾನು ಎಂದೂ ಕೆಲಸ ಮಾಡಿಲ್ಲ. ನಾನು ಮಾಡಿದ ಕೆಲಸ ಚುನಾವಣೆಗೆ ಸಹಾಯ ಮಾಡಿದೆ. ನಿತ್ಯ ಅಂದಿನ ಪಾಠವನ್ನು ಅಂದೇ ಮನದಟ್ಟು ಮಾಡಿಕೊಳ್ಳುವ ವಿದ್ಯಾರ್ಥಿಗೆ ಪರೀಕ್ಷೆ ಸಮಯದಲ್ಲಿ ವಿಶೇಷವಾಗಿ ಓದಬೇಕಾದ ಅವಶ್ಯ ಇರುವುದಿಲ್ಲ. ಯಾರು ಪರೀಕ್ಷೆ ಬಂದಾಗ ಪುಸ್ತಕ ಹಿಡಿಯುತ್ತಾರೋ ಅವರು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ನಾವು ದಿನ ನಿತ್ಯ ಜನರ ನಡುವೆ ಇದ್ದು, ಕೆಲಸ ಮಾಡುತ್ತಿರುವುದರಿಂದ ಚುನಾವಣೆಗಾಗಿಯೇ ವಿಶೇಷವಾದ ಕೆಲಸ, ವಿಶೇಷ ಪ್ರಯತ್ನ ಎಂದೂ ಮಾಡಿಲ್ಲ ಎಂದರು.