
ಬೆಂಗಳೂರು(ಡಿ.16): ರಾಹುಲ್ ಗಾಂಧಿ ಹೇಳಿಕೆ ಗಂಭೀರವಾಗಿ ಪರಿಗಣಿಸಿದಲ್ಲಿ ಸಿದ್ದರಾಮಯ್ಯ ಶರಣಾದ ನಕ್ಸಲರಿಗೆ ನೀಡಿರುವ ಪ್ಯಾಕೇಜ್ ಕಾಂಗ್ರೆಸ್ ಕಾರ್ಯಕರ್ತರಿಗೂ ನೀಡಬೇಕಾದೀತು ಎಂದು ಬಿಜೆಪಿ ಸಂಸದ ಲೆಹರ್‌ಸಿಂಗ್ ಸಿರೋಯಾ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಹಿಂತಿರುಗಿ ಬಂದು, ಕಾಂಗ್ರೆಸ್ ಪಕ್ಷ ಭಾರತದ ಗಣರಾಜ್ಯದ ವಿರುದ್ಧವೇ ಹೋರಾಡುತ್ತಿದೆ ಎಂದಿದ್ದಾರೆ. ಅನುಮಾನ ದೃಢಪಡಿಸಿದ್ದಕ್ಕಾಗಿ ಧನ್ಯವಾದ ಹೇಳಬೇಕು. ಇಲ್ಲಿಯವರೆಗೆ ನಕ್ಸಲರು ಮಾತ್ರ ಭಾರತ ದೇಶದ ವಿರುದ್ದ ಹೋರಾಡುತ್ತಿದ್ದಾರೆ ಎಂದು ಭಾವಿಸಿದ್ದೆವು. ರಾಹುಲ್ ಇಂದಿನ ಹೇಳಿಕೆಯಿಂದ ಪರೋಕ್ಷವಾಗಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಮಾವೋವಾದಿಯಾಗಿ ಅಥವಾ ನಗರ ನಕ್ಸಲರನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ 'ಉದಾರ'ನಕ್ಸಲ್ ಪ್ಯಾಕೇಜ್ ಅನ್ನು ಬಳಸಿಕೊಂಡು ನಾವು ಈಗ ಅವರೆಲ್ಲರನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಭಾಗವತ್‌ರದ್ದು ದೇಶದ್ರೋಹದ ಹೇಳಿಕೆ, ಇದು ಭಾರತೀಯರಿಗೆ ಮಾಡಿದ ಅವಮಾನ: ರಾಹುಲ್ ಗಾಂಧಿ
ಇತ್ತೀಚೆಗೆ, ಶರಣಾದ ನಕ್ಸಲರನ್ನು ಕರ್ನಾಟಕದ ಸಿಎಂ ಕಚೇರಿಯಲ್ಲಿ 'ಅತಿಗಣ್ಯ 'ವ್ಯಕ್ತಿಗಳಂತೆ ನಡೆಸಿಕೊಳ್ಳಲಾಯಿತು. ಗಂಭೀರವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಭಾರತದ ವಿರುದ್ಧವೇ ಹೋರಾಡುತ್ತಿದ್ದರೆ, ಉಳಿದಿರುವ ಎಲ್ಲಾ ಕಾಂಗ್ರೆಸ್ ರಾಜ್ಯ ಸರ್ಕಾರಗಳನ್ನು ಅದೆಷ್ಟೇ ಉಳಿದಿರಲಿ ವಜಾಗೊಳಿಸಬೇಕಲ್ಲವೇ? ಸರ್ಕಾರದಲ್ಲೂ ಮುಂದುವರಿದು, ಇತ್ತ ಭಾರತ ಗಣರಾಜ್ಯದ ವಿರುದ್ಧ ಹೋರಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇಂದು ಭಾರತದ ವಿರುದ್ಧವೇ ಕಾಂಗ್ರೆಸ್ ಹೋರಾಡುವ ಪರಿಸ್ಥಿತಿ: ರಾಹುಲ್ ಗಾಂಧಿ ವಿವಾದ
ನವದೆಹಲಿ: ಕಾಂಗ್ರೆಸ್ ಈಗ ಕೇವಲ ಬಿಜೆಪಿ ಹಾಗೂ ಆರ್ ಎಸ್ಎಸ್ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ ಅದು ಭಾರ ತ ದೇಶದ ವಿರುದ ಹೋರಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪಕ್ಷದ ನೂತನ ಕಚೇರಿ ಉದ್ಘಾಟನೆ ವೇಳೆ ಬಿಜೆಪಿ ಮತ್ತು ಆರ್‌ಎಸ್ಎಸ್ ಅನ್ನು ಟೀಕಿಸುವ ಭರದಲ್ಲಿ ರಾಹುಲ್ ಆಡಿದ ಮಾತುಗಳಿಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಹುಲ್ ಹೇಳಿದ್ದೇನು?:
ನೂತನ ಕಚೇರಿ ಉದ್ಘಾಟನೆ ಬಳಿಕ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ನಾವು ನ್ಯಾಯ ಸಮ್ಮತ ಹೋರಾಟದಲ್ಲಿ ಭಾಗಿಯಾಗಿದ್ದೇವೆ ಎಂದು ಅಂದುಕೊಳ್ಳಬೇಡಿ. ಇದರಲ್ಲಿ ನ್ಯಾಯ ಸಮ್ಮತೆಯೇ ಇಲ ಇಲ್ಲ. ನಾವು ರಾಜಕೀಯ ಸಂಘಟನೆಯಾದ ಬಿಜೆಪಿ ಜೊತೆಗೆ, ರಾಜಕೀಯ ಸಂಘಟನೆಯಾದ ಆರ್ ಎಎಸ್ ಜೊತೆಗೆ ನ್ಯಾಯಸಮ್ಮತ ಹೋರಾಟ ಮಾಡುತ್ತಿದ್ದೇವೆ ಎಂದು ನೀವು ಅಂದುಕೊಂಡಿದ್ದರೆ ಇಲ್ಲಿ ಏನಾಗುತ್ತಿದೆ ಎಂಬುದೇ ನಿಮಗೆ ಗೊತ್ತಿಲ್ಲ' ಎಂದರು.
ಮನಮೋಹನ ಸಿಂಗ್ ಶೋಕಾಚರಣೆ ವೇಳೆ ವಿದೇಶ ಪ್ರವಾಸ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ರಾಹುಲ್ ಫಾರಿನ್ ಟೂರ್!
'ಏಕೆಂದರೆ, ನಾವು ಈ ಸೈದ್ದಾಂತಿಕ ಹೋರಾಟವನ್ನು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಸುತ್ತಿದ್ದೇವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ಪ್ರತಿಯೊಂದು ಸಂಸ್ಥೆಯನ್ನೂ ಕೂಡಾ ಕೈವಶ ಮಾಡಿಕೊಂಡಿದೆ. ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲೇ ಗಂಭೀರ ದೋಷಗಳಿದೆ. ಹೀಗಾಗಿ ನಾವೀಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ದೇಶದ ವಿರುದ್ದವೇ ಹೋರಾಡುತ್ತಿದ್ದೇವೆ' ಎಂದು ಹೇಳಿದರು.
ರಾಹುಲ್ ಹೇಳಿಕೆ ವಿರುದ್ಧ ಕಿಡಿಕಾದಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, 'ರಾಹುಲ್ ಈಗಬಹಿರಂಗವಾಗಿ ಭಾರತದ ವಿರುದ್ಧವೇ ಯದ್ಧ ಸಾರಿದ್ದಾರೆ. ಅವರ ಹೇಳಿಕೆ ಜಾರ್ಜ್ ಸೊರೋಸ್ ಕಪಟ ನಾಟಕದ ಭಾಗದಂತಿದೆ' ಎಂದು ತಿರುಗೇಟು ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಕೂಡ ಪ್ರತಿಕ್ರಿಯಿಸಿ, 'ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದ ವಿಪಕ್ಷ ನಾಯ ಕನೀಗ ಹೀಗೆ ಹೇಳುತ್ತಿದ್ದಾರೆ. ಹಾಗಾದರೆ ಅವರು ಸಂವಿಧಾನದ ಪ್ರತಿಯೊಂದಿಗೆ ತಿರುಗು ವುದಕ್ಕೆ ಅರ್ಥವೇನು?' ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ