ಸದಾ ಒಂದಿಲ್ಲೊಂದು ಮಾತನಾಡುತ್ತಾ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುದ್ದಿಯಾಗುತ್ತಾರೆ. ಇದೀಗ ಅವರ ಆಪ್ತ ಸಹಾಯಕ (PA) ಸುದ್ದಿಯಾಗಿದ್ದಾರೆ.
ಬೆಂಗಳೂರು, (ಮಾ.10): ವಿಧಾನಸೌಧದಲ್ಲಿ ಆಕಸ್ಮಿಕವಾಗಿ ಸಿಕ್ಕಿರುವ ಚಿನ್ನದ ಸರವನ್ನು ನಿಮಗೆ ಒಪ್ಪಿಸಿದ್ದೇನೆ. ಅದು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಮಾಡಿ ಒಪ್ಪಿಸಿ ಎಂದು ಹೀಗೆ ಪೊಲೀಸರಿಗೆ ಮನವಿ ಮಾಡಿಕೊಂಡವರು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತ ಸಹಾಯಕ (PA)ಸದಾಶಿವ ತೇರದಾಳ್.
ಹೌದು.... ವಿಧಾನಸೌಧದ ಉತ್ತರ ದ್ವಾರದಲ್ಲಿ ಸಿಕ್ಕಿದ್ದ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಆಪ್ತ ಸಹಾಯಕ ಸದಾಶಿವ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
undefined
ಸದನಲ್ಲಿ ಸಿಎಂ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್, ಕೆರಳಿದ ರೇಣುಕಾಚಾರ್ಯ
ವಿಧಾನಸೌಧದಲ್ಲಿ ಸಿಕ್ಕ 1.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಿಧಾನಸೌಧ ಪೊಲೀಸರಿಗೆ ನೀಡಿದ್ದು, ಇದರ ವಾರಸುದಾರರನ್ನು ಪತ್ತೆಹಚ್ಚಿ ನೀಡುವಂತೆ ಮನವಿ ಮಾಡಿದ್ದಾರೆ. ವಿಧಾನಸೌಧ ಪೊಲೀಸರು ಸಹ ಸದಾಶಿವ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇನ್ನು ಮಾರ್ಚ್ 5 ರಂದು ವಿಧಾನಸೌಧದ ಬಳಿ ಸಿಕ್ಕ ಚಿನ್ನದ ಸರವನ್ನು ನಾಲ್ಕು ದಿನವಾದ ಬಳಿಕ ಏಕೆ ಪೊಲೀಸರಿಗೆ ಕೊಟ್ಟಿದ್ದಾರೆ ಎನ್ನುವುದಕ್ಕೆ ಲಿಖಿತ ರೂಪದಲ್ಲಿ ಸ್ಪಷ್ಟನೆಯನ್ನೂ ಸಹ ಕೊಟ್ಟಿದ್ದಾರೆ.
ಮಾರ್ಚ್ 5 ರಂದು ಬೆಳಗ್ಗೆ ವಿಧಾನಸೌಧದ ಉತ್ತರ ದ್ವಾರದಿಂದ ಪ್ರವೇಶಿಸುತ್ತಿರುವಾಗ ಆ ಚಿನ್ನದ ಸರ ನನಗೆ ಸಿಕ್ಕಿತ್ತು. ಆದರೆ ಅದಾದ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ನಾನು ವಿಧಾನಸೌಧದಿಂದ ಹೊರಗೆ ತೆರಳಿದ್ದೆ ಎಂದು ಶಾಸಕರ ಪಿಎ ಸದಾಶಿವ ತೇರದಾಳ್ ವಿವರಿಸಿದ್ದಾರೆ.