ಶಾಸಕ ಮುನಿರತ್ನಗೆ ಇನ್ನುಷ್ಟು ಸಂಕಷ್ಟ: ಇಂದು ಮತ್ತೆ ಎರಡು ಸ್ಫೋಟಕ ಆಡಿಯೋ?

By Kannadaprabha News  |  First Published Sep 17, 2024, 8:56 AM IST

ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪಗಳ ಸಂಬಂಧ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈಗ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಮುಗಿದ ಕಾರಣಕ್ಕೆ ನ್ಯಾಯಾಲಯದ ಮುಂದೆ ಮಂಗಳವಾರ ಬೆಳಗ್ಗೆ ಶಾಸಕರನ್ನು ಹಾಜರು ಪಡಿಸಲಿದ್ದಾರೆ.


ಬೆಂಗಳೂರು(ಸೆ.17): ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ಸಂಬಂಧ ಬಂಧಿತರಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಮುನಿರತ್ನ ಅವರನ್ನು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಮುಂದೆ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಜರುಪಡಿಸಲಿದ್ದಾರೆ. ಸದ್ಯ ಜಾತಿ ನಿಂದನೆ ಕೇಸ್‌ನಲ್ಲಿ ಮುನಿರತ್ನ ಬಂಧನ ತೋರಿಸಿರುವ ಪೊಲೀಸರು, ಮಂಗಳವಾರ ಜೀವ ಬೆದರಿಕೆ ಕೇಸ್‌ನಲ್ಲಿ ಬಂಧಿಸುವ ಸಾಧ್ಯತೆ ಇದೆ.

ಪ್ರಕರಣದ ತನಿಖೆಗಾಗಿ ಮುನಿರತ್ನ ಅವರನ್ನು ಮತ್ತೆ ಪೊಲೀಸರು ವಶಕ್ಕೆ `ಕೋರುವ ಸಾಧ್ಯತೆಗಳಿವೆ. ಮತ್ತೊಂದೆಡೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಮುನಿರತ್ನ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪಗಳ ಸಂಬಂಧ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈಗ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಮುಗಿದ ಕಾರಣಕ್ಕೆ ನ್ಯಾಯಾಲಯದ ಮುಂದೆ ಮಂಗಳವಾರ ಬೆಳಗ್ಗೆ ಶಾಸಕರನ್ನು ಹಾಜರುಪಡಿಸಲಿದ್ದಾರೆ. ಆಗ ಜೀವ ಬೆದರಿಕೆ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧನಕ್ಕೊಳಪಡಿಸಿ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಬಹುದು ಎಂದು ತಿಳಿದು ಬಂದಿದೆ. 

Latest Videos

undefined

ಮುನಿರತ್ನ ಬಂಧನದ ಹಿಂದೆ ದ್ವೇಷಕಾರಣವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ನ್ಯಾಯಾಲಯವು ಪೊಲೀಸರ ಮನವಿ ಸಮ್ಮತಿಸಿ ವಶಕ್ಕೆ ನೀಡದಿದ್ದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಆಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮುನಿರತ್ನ ಅವರುಹೋಗಬೇಕಾಗುವ ಸಂಕಷ್ಟಎದುರಾಗ ಲಿದೆ. ಇನ್ನು ಜಾಮೀನು ಕೋರಿ ಸಲ್ಲಿಸಿದರೂ ಆಕ್ಷೇಪಣೆಗೆ ಸರ್ಕಾರಿ ಅಭಿಯೋಜಕರು ಸಮಯ ಕೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ. 2 ದಿನಗಳ ಹಿಂದೆ ಮುನಿರತ್ನ ಅವರನ್ನು ಪೊಲೀ ಸರು ಬಂಧಿಸಿ ವಿಚಾರಣೆ ಗೊಳಪಡಿಸಿದ್ದಾರೆ.

ಶಾಸಕರಿಗೆ ಆರೋಗ್ಯ ತಪಾಸಣೆ: 

ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಮುನಿರತ್ನ ಅವರಿಗೆ ಬೆಂಗಳೂರಿನ ಬೌರಿಂಗ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ಗಳಲ್ಲಿ ಸೋಮವಾರಪೊಲೀ ಸರು ವೈದ್ಯಕೀಯ ತಪಾಸಣೆಗೊಳಪಡಿ ಸಿದ್ದಾರೆ. ವಿಚಾರಣೆ ವೇಳೆ ಶಾಸಕರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಅವರಿಗೆ ಸಾಮಾನ್ಯ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ಇಸಿಜಿಹಾಗೂಎಕೋ ಸೌಲಭ್ಯವಿಲ್ಲದ ಕಾರಣ ಜಯದೇವ ಆಸ್ಪತ್ರೆಯಲ್ಲಿ ಆ ಎರಡು ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆಶಾಸಕರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಧ್ವನಿ ಪರೀಕ್ಷೆಗೆ ಶಾಸಕರ ಧ್ವನಿ ತುಣುಕು ಸಂಗ್ರಹ ಗುತ್ತಿಗೆದಾರನಿಗೆ ನಿಂದಿಸುವ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಧ್ವನಿ ಪರೀಕ್ಷೆಗೊಳಪಡಿಸಿದ್ದಾರೆ. ಗುತ್ತಿದಾರನಿಗೆ ನಿಂದಿಸುವ ಆಡಿಯೋದ ಸಾಚಾತನ ಸಾಬೀತಿಗೆ ಶಾಸಕರ ಧ್ವನಿ ಪರೀಕ್ಷೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕ ನಗರ ಠಾಣೆಯಲ್ಲಿ ಮುನಿರತ್ನ ಅವರಿಂದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ಎಲ್) ತಜ್ಞರು ಸೋಮವಾರ ಧ್ವನಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಮತ್ತೆ ಎರಡು ಸ್ಫೋಟಕ ಆಡಿಯೋ? 

ಬೆಂಗಳೂರು:  ಶಾಸಕ ಮುನಿರತ್ನ ಅವರಿಗೆ ಸಂಬಂಧಿಸಿದ ಇನ್ನೂ ಎರಡು ಆಡಿಯೋ ಇವೆ. ಅದರಲ್ಲಿ 35 ಪರ್ಸೆಂಟ್ ಕಮಿಷನ್ ವಿಚಾರವೂ ಇದೆ. ಮಂಗಳವಾರ ಅವನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ಚಲುವರಾಜು ಈ ಮುನ್ನ ಬಿಡುಗಡೆ ಮಾಡಿದ ಆಡಿಯೋ ಕಾರಣಕ್ಕೆ ಮುನಿರತ್ನ ಬಂಧನವಾಗಿದೆ. ಈಗ ಮತ್ತೆರಡು ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವುದರಿಂದ ಅವರಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 

ಸಚಿವೆ ಲಕ್ಷ್ಮೀ ಹೆಬ್ಬಾಳ್ವ‌ರ್ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ನನಗೆ ಹಣಕ್ಕಾಗಿ ಕಿರುಕುಳ ನೀಡಿ ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಜೀವ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಆಡಿಯೋ ಬಿಡುಗಡೆ ಮಾಡಿದ್ದೇನೆ. 11 ಕೋಟಿ ರು. ಬಿಡುಗಡೆ ಮಾಡಿಸಲು ಶೇ.50 ಕಮೀಷನ್ ಕೇಳಿದ್ದಾರೆ. ಇದಲ್ಲದೆ, 35 ಪರ್ಸೆಂಟೇಜ್ ಕಮೀಷನ್ ವಿಚಾರ ಒಳಗೊಂಡಂತೆ ಇನ್ನೂ ಎರಡು ಆಡಿಯೋಗಳಿದ್ದು ಅವುಗಳನ್ನೂ ಮಂಗಳವಾರ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. 

ಈಗ ಬಿಡುಗಡೆಯಾಗಿರುವ ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ. ನಾನು ಚಲುವರಾಜು ಅವರಿಗೆ ಹೊಡೆದಿಲ್ಲ. ಅವರ ಹೆಂಡತಿ-ಮಕ್ಕಳನ್ನು ಕೇಳಿಲ್ಲ. ದಲಿತರನ್ನು ಅವಹೇಳನ ಮಾಡಿಲ್ಲ ಎಂದು ಮುನಿರತ್ನ ಅವರು ತಿರುಪತಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. 

ನಮ್ಮ ಕುಟುಂಬ ಭಯಗೊಂಡಿದ್ದು, ರಕ್ಷಣೆ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ. ಈಗಾಗಲೇ ಡಾ.ಜಿ.ಪರಮೇಶ್ವರ್ ಅವರ ಬಳಿ ಮಾತನಾಡಿದ್ದು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು. 

ಕಾಕತಾಳೀಯವೋ ಶಾಪವೋ..? 'ಕುರುಕ್ಷೇತ್ರ'ದ ಈ ಇಬ್ಬರೂ ಈಗ ಜೈಲುಪಾಲು!

ಹನುಮಂತರಾಯಪ್ಪ ಅವರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಸಂಬಂಧಸ್ಪಷ್ಟನೆ ನೀಡಿದಚಲುವರಾಜು, 'ಆಡಿಯೋದಲ್ಲಿ ರುವ ಧ್ವನಿ ನನ್ನದೇ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆಗೆ ಸಹಕರಿಸುತ್ತಿದ್ದೇನೆ' ಎಂದು ತಿಳಿಸಿದರು.

ರೇಣುಕಾಸ್ವಾಮಿ ರೀತಿ ನಿನ್ನ ಕೊಲೆ: 

ಚೇಲಾಗಳ ಧಮ್ಮಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಮಾಡಿದ್ದು ಮುನಿರತ್ನ ಅವರಭಾವಮೈ ದುನ. ನಿನಗೂ ಇದೇ ಗತಿ ಬರುತ್ತದೆ' ಎಂದು ಮುನಿರತ್ನ ಅವರ ಬೆಂಬಲಿಗರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ. 'ಹಣ ಕೊಡಲು ಆಗದಿದ್ದರೆ ನಿನ್ನ ಹೆಂಡತಿಯನ್ನು ಕಳುಹಿಸು, ತಾಯಿ ಕಳುಹಿಸು. ಇಲ್ಲದಿದ್ದರೆ ನಿನ್ನ ಮಗಳನ್ನು ಕಳುಹಿಸು. ಅವರ ಫೋಟೋ ಕಳುಹಿಸು. ನೂರು ಪ್ಲಾನ್ ಹಾಕಿ ನಿನ್ನನ್ನು ಹೊಡೆದು ಹಾಕುತ್ತೇವೆ' ಎಂದು ಶಾಸಕರು ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

click me!