'ದೇಶದ್ರೋಹಿ ಹೇಳಿಕೆ ನೀಡುವವರನ್ನ ಕಂಡಲ್ಲಿ ಗುಂಡಿಕ್ಕಿದ್ರೆ ಮಾತ್ರ ನಿಯಂತ್ರಣಕ್ಕೆ ಬರುತ್ತೆ'

By Suvarna News  |  First Published Feb 21, 2020, 6:28 PM IST

ಫ್ರೀಡಂಪಾರ್ಕ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಆಕ್ರೋಶದ ಕಿಡಿ ಹೊತ್ತಿ ಉರೀತಿದೆ.. ಈ ನಡುವೆ ದೇಶದ್ರೋಹಿಗಳ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.


ದಾವಣಗೆರೆ, [ಫೆ.21]:  ದೇಶದ್ರೋಹಿ ಹೇಳಿಕೆ ನೀಡುವವರನ್ನ ಕಂಡಲ್ಲಿ ಗುಂಡಿಕ್ಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿರುವ ಅವರು, ದೇಶ ದ್ರೋಹಿಗಳನ್ನ ನಿರ್ದಾಕ್ಷಿಣ್ಯವಾಗಿ ಗಲ್ಲಿಗೆ ಏರಿಸಬೇಕು ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವುದು ಬಗ್ಗೆ ಸಾಬೀತಾಗಿದೆ: ಸಿಎಂ

ಪ್ರತಿಯೊಬ್ಬರು ಖಂಡಿಸಿದ್ರೆ ಮಾತ್ರ ಭಾರತ ಮಾತೆಯ ಮಕ್ಕಳಾಗಲು ಸಾಧ್ಯ. ಅಮೂಲ್ಯ ಪ್ರಕರಣದ ಹಿಂದೆ ಯಾರ ಷಡ್ಯಂತ್ರ ಇದೆ ತನಿಖೆ ಮಾಡುತ್ತೇವೆ. ಕಠಿಣ ಕಾನೂನು ತರಲು ಮುಂದಾಗುತ್ತೇವೆ ಎಂದು ಹೇಳಿದರು.

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರುದ್ಧದ ಪ್ರತಿಭಟನೆ ರ್ಯಾಲಿಯಲ್ಲಿ ಅಮೂಲ್ಯ ಲಿಯೋನಾ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಳು.

ಈ ಕಿಚ್ಚು ದೇಶ ಭಕ್ತ ಮನಸ್ಸಿನಿಂದ ಮಾಸುವ ಮುನ್ನವೇ ಇಂದು [ಶುಕ್ರವಾರ] ಟೌನ್ ಹಾಲ್ ಬಳಿಕ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ ಅರುದ್ರಾ ಎನ್ನುವ ಅವನಲ್ಲ ಅವಳು ಕೂಡ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಳೆ. 

ಇದೀಗ ಇಬ್ಬರನ್ನ ಸಹ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಅಮೂಲ್ಯಳಿಗೆ ಈಗಾಗಲೇ 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
 

click me!