ಬಿಜೆಪಿ ಅವಧಿಯಲ್ಲಿ 385 ಕ್ರಿಮಿನಲ್‌ ಕೇಸ್‌ ರದ್ದು, 2,361 ರೌಡಿಶೀಟರ್‌ಗಳ ಬಿಡುಗಡೆ: ಡಿ.ಕೆ. ಶಿವಕುಮಾರ್ ಮಾಹಿತಿ

By Sathish Kumar KHFirst Published Oct 4, 2023, 1:44 PM IST
Highlights

ಬಿಜೆಪಿ ಸರ್ಕಾರದ ಅವಧಿಯಲ್ಲಿ 385 ಕ್ರಿಮಿನಲ್‌ ಕೇಸ್‌ ರದ್ದುಗೊಳಿಸಲಾಗಿದ್ದು, 2,361 ರೌಡಿಶೀಟರ್‌ಗಳ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು (ಅ.04): ಬಿಜೆಪಿ ಅಧಿಕಾರ ಅವಧಿಯಲ್ಲಿ ಏನೇನು ಮಾಡಿದ್ರು ಅದೆಲ್ಲ ಜನಕ್ಕೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರ 2019ರಲ್ಲಿ ರಾಜ್ಯದ ಹಿಂಸಾಚಾರದ ಮತ್ತೊಂದು ಪ್ರಕರಣಗಳಲ್ಲಿ 385 ಕ್ರಿಮಿನಲ್ ಕೇಸ್ ಗಳನ್ನು ಹಿಂದೆ ಪಡೆದಿದ್ದಾರೆ. 2361 ರೌಡಿಶೀಟರ್ ಗಳನ್ನು ಕೈಬಿಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಏನು ಕೆಲಸ ಇಲ್ಲ. ತಮ್ಮ ಮನೆ ಹುಳುಕು, ಅವರ ಮನೆ ದೋಸೆ ತೂತು ಇವೆಲ್ಲರಿಗೆ ಕಾಣಿಸುತ್ತಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಏನೇನು ಮಾಡಿದ್ರು ಅದೆಲ್ಲ ಜನಕ್ಕೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಬಿಜೆಪಿ ಅವರನ್ನ ಜನ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ. ಇವರು ನನಗೆ ಹೇಳುತ್ತಾರಲ್ಲ, ಬಿಜೆಪಿ ಸರ್ಕಾರ 2019ರಲ್ಲಿ ಇದೇ ಹಿಂಸಾಚಾರ ಮತ್ತೊಂದು ಪ್ರಕರಣದಲ್ಲಿ 385 ಕ್ರಿಮಿನಲ್ ಕೇಸ್ ಗಳನ್ನು ಹಿಂದೆ ಪಡೆದಿದ್ದಾರೆ. 2361 ರೌಡಿಶೀಟರ್ ಗಳನ್ನು ಕೈಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ: ಸರ್ಕಾರ ಕೆಣಕಿದ ಸಂಸದ ಪ್ರತಾಪ್‌ ಸಿಂಹ

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ, ಆರಗ ಜ್ಞಾನೇಂದ್ರ ಮಾಧಸ್ವಾಮಿ,‌ಅಂಗಾರ, ಅರುಣ್ ಕುಮಾರ್, ದೊಡ್ಡನ ಗೌಡ್ರು, ವೀರಣ್ಣ ಚರಂತಿಮಠ, ಎಸ್.ಆರ್. ವಿಶ್ವನಾಥ್, ವಿ.ಎಸ್. ಪಾಟೀಲ್, ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್, ರವೀಂದ್ರನಾಥ್,  ಮಾಡಾಳ್ ವಿರೂಪಾಕ್ಷಪ್ಪ, ಆನಂದ ಮಾಮನಿ, ಅರವಿಂದ ಬೆಲ್ಲದ್, ಎಸ್ ಕೆ ಬೆಳ್ಳುಬ್ಬಿ, ಎನ್.ರವಿ ಕುಮಾರ್ ಇವರೆಲ್ಲರೂ ಕೂಡ ಕೇಸ್ ವಾಪಸ್ ಗೆ ಮನವಿ ಮಾಡಿದ್ದಾರೆ. ಅವರು ಮನವಿ ಮಾಡಿರುವ ದಾಖಲೆಗಳು ಇದೆ, ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಸರ್ಕಾರದವಿದ್ದಾಗ ಕೇವಲ ಪಕ್ಷದ ಕಾರ್ಯಕರ್ತರು ಎನ್ನುವ ಕಾರಣಕ್ಕೆ ಬಿಡುಗಡೆ ಮಾಡಿದ್ದಾರೆ. ನಾವು ಯಾರು ಅಮಾಯಕರಿದ್ದಾರೆ ಅವರಿಗೆ ಅನ್ಯಾಯ ಮಾಡಬಾರದು ಎನ್ನುವ ಉದ್ದೇಶ ಹೊಂದಿದ್ದೇವೆ. ಅಲ್ಲದೇ ಸ್ಥಳೀಯವಾಗಿ ಸಲಹೆಗಳಿತ್ತು. ಅಧಿಕಾರಿಗಳು ಕೇಸ್ ವಾಪಸ್ ಮಾಡಬಹುದು ಅನ್ನೋದಾದ್ರೆ ಮಾಡುತ್ತೇವೆ. ಅದಕ್ಕೆ ಸಬ್ ಕಮಿಟಿ ಇದೆ. ನನ್ನ ಮೇಲೆ ಸಾಕಷ್ಟು ಕೇಸ್ ಹಾಕಿದ್ದಾರೆ. ರಾಜಕೀಯ ಉದ್ದೇಶದ ಕೇಸ್ಗಳು ನಡೆಯುತ್ತಿದೆ. ಈಗ ನಾನು ಹೇಳಿರುವ ಹೆಸರುಗಳ ಶಾಸಕರು ನಾನು ಪತ್ರ ಕೊಟ್ಟಿಲ್ಲ ಅಂತ ಹೇಳಲಿ. ಆಗ ನಾನು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಬೆಂಗಳೂರು 2.79 ಲಕ್ಷ ಬೀದಿ ನಾಯಿಗಳ ಸಮೀಕ್ಷಾ ವರದಿ ಕೊಟ್ಟ ಬಿಬಿಎಂಪಿ: ಮಹದೇಪುರದಲ್ಲಿವೆ 60,000 ನಾಯಿಗಳು

ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಹಿರಂಗಕ್ಕೆ ಒತ್ತಾಯ ವಿಚಾರವಾಗಿ ಮಾತನಾಡಿ, ನಾವು ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಕಾಂತರಾಜು ಸಮಿತಿಯನ್ನು ಮಾಡಿದ್ದೆವು. ಅದು ಪೂರ್ಣವಾಗಿ ಆಗಲಿಲ್ಲ ಎಂಬುದು ಇದೆ. ಅದರ ಬಗ್ಗೆ ಮತ್ತೆ ಬೇಡಿಕೆ ಇದೆ. ನಮ್ಮ ಪಾರ್ಟಿಯಲ್ಲೂ ಒಂದು ಸ್ಟ್ಯಾಂಡ್ ಇದೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ರಾಷ್ಟ್ರಮಟ್ಟದಲ್ಲಿ ಒಂದು ನಿರ್ಧಾರ ಕೈಗೊಂಡಿದ್ದೇವೆ. ಅದರ ಪ್ರಕಾರ ನಮ್ಮ ಪಕ್ಷ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

click me!