
ಭರತ್ ರಾಜ್, ಮಂಗಳೂರು
ಮಂಗಳೂರು(ಮಾ.19):ಬಿಹಾರ ಮೂಲದ ಯುವಕನ ಜೊತೆ ಮಂಗಳೂರಿನ ಮಿಜಾರಿನ ಹಿಂದೂ ವಿವಾಹಿತ ಮಹಿಳೆಯೋರ್ವಳು ಪ್ರಯಾಣಿಸುತ್ತಿದ್ದ ವೇಳೆ ಯುವಕ ಅನ್ಯಕೋಮಿಗೆ ಸೇರಿದವನೆಂಬ ಅನುಮಾನದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ಜೋಡಿಗಳನ್ನು ಕೆಳಗಿಸಿದ ಘಟನೆ ಮಂಗಳೂರಿನ ಗುರುಪುರ ಬಳಿ ನಡೆದಿದೆ.
ಖಾಸಗಿ ಬಸ್ಸೊಂದರಲ್ಲಿ ಮೂಡಬಿದ್ರಿಯಿಂದ ಮಂಗಳೂರಿನತ್ತ ಸಂಶಯಾಸ್ಪದ ರೀತಿಯಲ್ಲಿ ಯುವಕ ಮತ್ತು ವಿವಾಹಿತ ಯುವತಿ ಪ್ರಯಾಣಿಸುತ್ತಿರುವ ಬಗ್ಗೆ ಗುರುಪುರದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ರವಾನೆಯಗಿತ್ತು. ಅದರಂತೆ ಗುರುಪುರ ಅಲೈಗುಡ್ಡೆಯಲ್ಲಿ ಬಸ್‍ನಿಂದ ಜೋಡಿಯನ್ನು ಕೆಳಗಿಳಿಸಿದ ಗುರುಪುರದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಯುವಕನ ಪೂರ್ವಾಪರವನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ಸಿಗಲಿಲ್ಲ. ಆತ ವಿಳಾಸ ಕೂಡ ನೀಡದೆ ಅನುಮಾನಾಸ್ಪದವಾಗಿ ವರ್ತಿಸಿದ್ದು, ಈ ಬಗ್ಗೆ ಬಜಪೆ ಪೋಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಮಧ್ಯೆ ಯುವತಿ ನೀಡಿದ ಹೇಳಿಕೆಯಂತೆ ಆಕೆಯ ಪತಿ ಹಾಗೂ ಮನೆಯವರಿಗೆ ಮಾಹಿತಿ ನೀಡಲಾಗಿದೆ.
ಮುಂಬೈಯಲ್ಲಿದ್ದ ಯುವತಿಗೆ ಬಿಹಾರದ ಲವ್!
ಈ ಹಿಂದೆ ಮುಂಬೈನಲ್ಲಿದ್ದ ಯುವತಿಗೆ ಬಿಹಾರದ ಪ್ರಮೋದ್ ಯಾದವ್ ಎಂಬವನೊಂದಿಗೆ ಪ್ರೀತಿ ಬೆಳೆದಿತ್ತು. ಆನಂತರದಲ್ಲಿ ಯುವತಿಗೆ ಬೆಂಗಳೂರಿನ ಯುವಕನೊಂದಿಗೆ ವಿವಾಹವಾಗಿದ್ದು, ಆತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಮಂಗಳೂರು ತಾಲೂಕಿನ ಮಿಜಾರು ಎಂಬಲ್ಲಿಯವಳಾಗಿದ್ದು, ವಿವಾಹದ ಬಳಿಕವೂ ಬಿಹಾರದ ಯುವಕ ಮತ್ತು ಯುವತಿಯ ಪ್ರೇಮ್ ಕಹಾನಿ ಮುಂದುವರಿದಿತ್ತು. ಇದರ ಫಲವಾಗಿ ಯುವಕ ಮೂಡಬಿದ್ರಿಗೆ ಆಗಮಿಸಿ ಯುವತಿಯೊಂದಿಗೆ ಸುತ್ತಾಟಕ್ಕೆ ಮಂಗಳೂರಿನ ಬಸ್ಸನ್ನೇರಿದ್ದ ಎಂದು ಬಜಪೆ ಪೋಲೀಸರು ಮಾಹಿತಿ ನೀಡಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಇವರ ಸುತ್ತಾಟಕ್ಕೆ ಬ್ರೇಕ್ ಹಾಕಿದ್ದು, ಈ ಜೋಡಿ ಮಂಗಳೂರಿಗೆ ಹೋಗುತ್ತೀತ್ತೇ ಅಥವಾ ಮಂಗಳೂರಿನಿಂದ ಬಿಹಾರಕ್ಕೆ ಹೋಗುವ ಯೋಜನೆಯನ್ನು ಹಮ್ಮಿಕೊಂಡಿತ್ತೇ ಎಂದು ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
Colleague ಜೊತೆ ತಾಯಿಯ ಅಕ್ರಮ ಸಂಬಂಧ, ಮಗನ ಮೇಲೆ ತಂದೆಗೆ ಕೋಪ
ಪತಿ -ಪತ್ನಿ ಸಂಬಂಧ ಬೇರೆ,ತಂದೆ ತಾಯಿ ಸಂಬಂಧ ಬೇರೆ. ವ್ಯಕ್ತಿಯೊಬ್ಬ ಈ ಎಲ್ಲ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಅನೇಕ ಬಾರಿ ತಂದೆ-ತಾಯಿ ಮಾಡುವ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸುತ್ತಾರೆ. ಪಾಲಕರ ದೋಷಕ್ಕೆ ಮಕ್ಕಳು ಒಂಟಿಯಾಗ್ತಾರೆ. ಮಕ್ಕಳಿಗೆ ತಂದೆ-ತಾಯಿ ಇಬ್ಬರೂ ಎರಡು ಕಣ್ಣು (eyes)ಗಳಿದ್ದಂತೆ. ಆದ್ರೆ ಅದ್ರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಅವರ ಮಾನಸಿಕ ಸ್ಥಿತಿ ಹದಗೆಡುತ್ತದೆ. ಯುವಕನೊಬ್ಬನಿಗೆ ಇಂಥಹದ್ದೇ ಸಮಸ್ಯೆ ಕಾಡ್ತಿದೆ. ತನ್ನ ಸಮಸ್ಯೆಯನ್ನು ಎಲ್ಲರ ಮುಂದಿಟ್ಟಿದ್ದಾನೆ ಯುವಕ. ತಜ್ಞ ರಿಂದ ಮುಂದೇನು ಮಾಡ್ಬೇಕೆಂದು ಸಲಹೆ ಕೇಳಿದ್ದಾನೆ. 23 ವರ್ಷದ ಯುವಕನಿಗೆ ತಂದೆ-ತಾಯಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಶುರುವಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಆತ ಹೇಳಿದ್ದಾನೆ.
ಯುವಕನ ಕಥೆ (Story)ಯೇನು? : ಹೆಸರು ಹೇಳದ ಯುವಕನ ತಂದೆ ಕಳೆದ 10 ವರ್ಷಗಳಿಂದ ವಿದೇಶ (Abroad)ದಲ್ಲಿ ವಾಸವಾಗಿದ್ದಾನಂತೆ. ವರ್ಷದಲ್ಲಿ ಎರಡು ಬಾರಿ ತಂದೆ ಭಾರತ (India)ಕ್ಕೆ ಬರ್ತಾನಂತೆ. ಮನೆಯ ಎಲ್ಲ ಜವಾಬ್ದಾರಿಯನ್ನು ತಾಯಿ ನಿರ್ವಹಿಸ್ತಾಳಂತೆ. ಕಳೆದ ಎರಡು ವರ್ಷಗಳಿಂದ ತಾಯಿ, ಕಚೇರಿ (Office)ಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನ ಜೊತೆ ಸಂಬಂಧದಲ್ಲಿದ್ದಾಳಂತೆ. ಈ ವಿಷ್ಯ ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿರುವ ತಂದೆಗೆ ಗೊತ್ತಾಗಿದೆಯಂತೆ. ಇದ್ರಿಂದ ಕೋಪಗೊಂಡಿರುವ ತಂದೆ,ಮಗನಿಗೆ ಬೈದಿದ್ದಾನೆ.ತಾಯಿ ಪರ ಮಾತನಾಡುವ ನೀನು,ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೋ ಎಂದಿದ್ದಾನಂತೆ ತಂದೆ.
RELATIONSHIP TIPS: ನೀವು ಹೀಗಿದ್ದರೆ ಗಂಡ ಬೇರೆ ಹೆಣ್ಣನ್ನುಕಣ್ಣೆತ್ತಿ ಸಹ ನೋಡಲ್ಲ !
ತಾಯಿಯ ಸಂಬಂಧದ ವಿಷ್ಯ ಗೊತ್ತಾಗ್ತಿದ್ದಂತೆ ನಾನು ತಾಯಿಗೆ ತಿಳಿಸಿ ಹೇಳುವ ಪ್ರಯತ್ನ ನಡೆಸಿದ್ದೆ. ಆದ್ರೆ ಆಕೆ ಕೇಳಲಿಲ್ಲ. ಆಕೆಗೆ ತಂದೆ ಜೊತೆಗಿನ ಸಂಬಂಧದಲ್ಲಿ ಆಸಕ್ತಿಯಿಲ್ಲ ಎನ್ನುತ್ತಾನೆ ಯುವಕ. ತಂದೆಯ ಪ್ರೀತಿ ,ಅಗತ್ಯ ಸಮಯದಲ್ಲಿ ಆತನ ಆಸರೆ ಸಿಗದ ಕಾರಣ ತಾಯಿ ಮತ್ತೊಂದು ಪ್ರೀತಿ ಅರಸಿದ್ದಳು. ಮನೆಯ ಎಲ್ಲ ಜವಾಬ್ದಾರಿಯನ್ನು ಆಕೆ ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ನನಗೆ ಕಷ್ಟ ಎನ್ನುತ್ತಾನೆ ಆತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ