
ಬೀದರ್ (ಜ.19) :ನಗರದಲ್ಲಿ ಹಾಡುಹಗಲೇ ದುಷ್ಕರ್ಮಿಗಳಿಂದ ಎಟಿಎಂ ದರೋಡೆ ಪ್ರಕರಣ ಸಂಬಂಧ ಯಾವುದೇ ಮಾಹಿತಿ ಪಡೆಯದೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದ ಯಡವಟ್ಟು, ಬೇಜವಾಬ್ದಾರಿ ಹೇಳಿಕೆ ನೀಡಿದ ಪೌರಾಡಳಿತ ಸಚಿವ ರಹೀಮ್ ಖಾನ್ ಟೀಕೆಗೆ ಗುರಿಯಾಗಿದ್ದಾರೆ.
ಗುರುವಾರ ಬೆಳಗ್ಗೆ ದರೋಡೆಕೋರರು ಭಾರತೀಯ ಸ್ಟೇಟ್ ಬ್ಯಾಂಕ್ ಬಳಿ ಗುಂಡಿನ ದಾಳಿ ನಡೆಸಿ ಎಟಿಎಂಗಳಿಗೆ ಸಾಗಿಸಬೇಕಿದ್ದ ವಾಹನದಿಂದ 83 ಲಕ್ಷ ರು. ದೋಚಿ ಪರಾರಿಯಾಗಿದ್ದರು. ಈ ವೇಳೆ ದುಷ್ಕರ್ಮಿಗಳ ದಾಳಿಗೆ ಸಿಬ್ಬಂದಿ ಓರ್ವ ಮೃತಪಟ್ಟಿದ್ದರು. ಘಟನೆ ಬಳಿಕ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಸಚಿವ ರಹಿಂ ಖಾನ್ ಸ್ವಕ್ಷೇತ್ರದಲ್ಲೇ ಆಗಿರುವ ರಾಬರಿ ಪ್ರಕರಣದ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯದೇ ಇಬ್ಬರು ಸಾವು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಸ್ಥಳೀಯರು, ಇಬ್ಬರಲ್ಲ, ಒಬ್ಬ ಸಿಬ್ಬಂದಿ ಮೃತ ಎಂದು ತಿಳಿಸಿದ ಬಳಿಕ ಸರಿಪಡಿಸಿಕೊಂಡ ಸಚಿವ ರಹಿಂ ಖಾನ್ ಓರ್ವ ಸಿರಿಯಸ್ ಎಂದರು. ಇಡೀ ರಾಜ್ಯಾದ್ಯಂತ ಸದ್ದು ಮಾಡ್ತಿರೋ ಸುದ್ದಿಯ ಕುರಿತು ಸಾಮಾನ್ಯ ಜ್ಞಾನವು ಇಲ್ಲದೇ ಹೋಯಿತೇ ಸಚಿವರಿಗೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ
ಗ್ರೇಟೆಸ್ಟ್ ಬ್ಯಾಂಕ್ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ
ಮೊನ್ನೆಯಷ್ಟೇ ಸಚಿವ ರಹೀಂ ಖಾನ್ ವಿರುದ್ದ ಆಕ್ರೋಶ ಹೊರಹಾಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ರಹಿಂ ಖಾನ್‌ಗೆ ಸ್ವಕ್ಷೇತ್ರದ ಕುರಿತಾಗಿಯೇ ಸರಿಯಾಗಿ ಮಾಹಿತಿ ಇರಲ್ಲಾ ಎಂದು ಗೇಲಿ ಮಾಡಿದ್ದರು. ಇದೀಗ ವಿಪಕ್ಷ ನಾಯಕರ ಹೇಳಿಕೆಗೆ ಪುಷ್ಟಿ ನೀಡುವಂತೆ ಇಂದು ಸಚಿವ ಎಡವಟ್ಟಿನ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ