ಈ ಪೊಲೀಸರು ಎಷ್ಟು ಕ್ರೂರಿಗಳು ಸಾರ್…!; ಬಿಜೆಪಿ ನಿಯೋಗದ ಮುಂದೆ ಸಚಿನ್ ಕುಟುಂಬಸ್ಥರು ಶಾಕಿಂಗ್ ಹೇಳಿಕೆ!

By Ravi Janekal  |  First Published Dec 29, 2024, 6:53 PM IST

ಬಿಜೆಪಿ ನಿಯೋಗದ ಮುಂದೆ ಗುತ್ತಿಗೆದಾರ ಸಚಿನ್ ಪಂಚಾಳ್ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ತಮ್ಮ ದೂರಿಗೆ ಸ್ಪಂದಿಸದೆ, ಆರೋಪಿಗಳ ಪರವಾಗಿ ನಿಂತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ಬೀದರ್ (ಡಿ.29): ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್  ನಿವಾಸಕ್ಕೆ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರು ನಿಯೋಗದ ಮುಂದೆ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಮೃತ ಗುತ್ತಿಗೆದಾರ ಸಚಿವ ನಿವಾಸ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪ ಸದಸ್ಯ ಎನ್.ರವಿಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Tap to resize

Latest Videos

ಬಿಜೆಪಿ ನಾಯಕರನ್ನ ಬಂಧಿಸಲು ಪೊಲೀಸರಿಗೆ ಉತ್ಸಾಹ, ಗುತ್ತಿಗೆದಾರರ ಸಾವಿಗೆ ಕಾರಣರಾದ ಆರೋಪಿಗಳ ಬಂಧನಕ್ಕೆ ಏಕಿಲ್ಲ? : ಶೆಟ್ಟರ್ ಕಿಡಿ

ಪೊಲೀಸರು ಎಷ್ಟು ಕ್ರೂರಿ ಇದ್ದಾರೆ ಸರ್..!

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಕುಟುಂಬಸ್ಥರಿಂದ ಬಿಜೆಪಿ ನಿಯೋಗ ಮಾಹಿತಿ ಪಡೆಯಿತು. ಈ ವೇಳೆ ಕುಟುಂಬಸ್ಥರೊಂದಿಗೆ ಪೊಲೀಸರು ವರ್ತಿಸಿದ ರೀತಿ ಆಘಾತಕಾರಿಯಾಗಿದೆ. ಆ ಕುಟುಂಬಸ್ಥರ ಮಾತಲ್ಲೇ ಕೇಳಿ,'ಸಾರ್, ಪೊಲೀಸರಿಗೆ ದೂರು ನೀಡಿದ್ರು ಯಾರೂ ತೆಗೆದುಕೊಳ್ಳಲಿಲ್ಲಾ, ರೈಲ್ವೆ ಹಳಿ ಮೇಲೆ ಕುಳಿತು ಆರೋಪಿಗಳನ್ನ ಬಂಧಿಸುವಂತೆ ಮನವಿ ಮಾಡಿದ್ರೂ ಪೊಲೀಸರು ನಮ್ಮ ಸ್ಪಂದನೆ ನೀಡಲಿಲ್ಲ. ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ, 'ಪೊಲೀಸ್ ಠಾಣೀಗೆ ನೀವು ಯಾಕೆ ಬಂದ್ರಿ? ಅವನ(ಆರೋಪಿ) ಫೋನ್ ಸ್ವಿಚ್ ಆಫ್ ಆಗಿದೆ, ನಾನು ಏನು ಮಾಡಲಿ? ಸತ್ತರೆ ಹೇಗೆ ಡೆತ್ ನೋಟ್ ಜಾಲತಾಣದಲ್ಲಿ ಅಪ್ಲೋಡ್ ಮಾಡ್ತಾನೆ ಎಂದು ಗಾಂಧಿಗಂಜ್ ಪಿಎಸ್‌ಐ ಉಡಾಫೆಯಾಗಿ ಮಾತಾಡಿದ್ರು. ಈ ಪೊಲೀಸರು ಎಷ್ಟು ಕ್ರೂರಿಗಳಿದ್ದಾರೆ ಸಾರ್… ಎಂದು ಬಿಜೆಪಿ ನಿಯೋಗದ ಮುಂದೆ ಅಳಲು ತೋರಿಕೊಂಡ ಕುಟುಂಬಸ್ಥರು.

ದಲಿತರಿಗೆ ಕಾಂಗ್ರೆಸ್ ಕೊಟ್ಟ ಕೊಡಗೆ ಎಂದರೆ ಅಂಬೇಡ್ಕರ್‌ಗೆ ಅವಮಾನಿಸಿದ್ದು ಚುನಾವಣೇಲಿ ಕುತಂತ್ರದಿಂದ ಸೋಲಿಸಿದ್ದು: ಸಂಸದ ಜಿಗಜಿಣಗಿ

ಪೊಲೀಸರು ಹೆಲ್ಪ್ ಮಾಡಿದ್ರೆ ನಮ್ಮ ಅಣ್ಣ ಜೀವ ಉಳಿಯುತ್ತಿತ್ತು:

ಪೊಲೀಸರು ಸ್ವಲ್ಪ ಹೆಲ್ಪ್ ಮಾಡಿದ್ರೆ ನಮ್ಮ ಅಣ್ಣನ ಜೀವ ಉಳಿತಿತ್ತು. ಪೊಲೀಸರು ತುಂಬಾ ಕ್ರೂರಿಗಳು. ನಮಗೆ ಪೊಲೀಸರಿಂದ ನ್ಯಾಯ ಸಿಗುತ್ತೆ ಎಂದು ಭಾವಿಸಿದ್ದೆವು. ಆದರೆ ಪೊಲೀಸರು ಆರೋಪಿಗಳ ಪರವಾಗಿ, ಅನ್ಯಾಯದ, ಕೊಲೆಗಡುಕರ ಪರವಾಗಿ ನಿಂತಿದ್ದಾರೆ. ನಮ್ಮ ಅಣ್ಣನ ಬಾಡಿ ಮೇಲೆ ಎರಡು ಮೂರು ಟ್ರೈನ್ ಓಡಾಡಿವೆ ಸರ್.. ಕಣ್ಣೀರಾದರು. ಮುಂದುವರಿದು, ನಮಗೆ ಈ ಪೊಲೀಸರ ಮೇಲೆ ನಂಬಿಕೆ, ಭರವಸೆ ಇಲ್ಲ. ಈ ಪೊಲೀಸರು ತನಿಖೆ ಮಾಡುವುದರಿಂದ ನಮ್ಮಣ್ಣನ ಸಾವಿಗೆ ನ್ಯಾಯ ಸಿಗುತ್ತೆ ಅನ್ನುವ ಯಾವ ಭರವಸೆ ಇಲ್ಲ. ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಬಿಜೆಪಿ ನಿಯೋಗದ ಮುಂದೆ ಕುಟುಂಬಸ್ಥರು ಒತ್ತಾಯಿಸಿದರು.
 

click me!