ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಟಾರ್ ನಟ ದರ್ಶನ್ ಬಿಡುಗಡೆ ಪ್ರಯತ್ನಗಳು ನಡೆದಿರುವ ಬೆನ್ನಲ್ಲೇ ಇದೀಗ ಕೊಪ್ಪಳದ ಪೀರಲ ದೇವರು ಬಿಡುಗಡೆ ಬಗ್ಗೆ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದೆ.
ಕೊಪ್ಪಳ (ಜು.25): ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ. ಅತ್ತ ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮೀ ದರ್ಶನ್ ಬಿಡುಗಡೆ ವಿಚಾರವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ದರ್ಶನ್‌ಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಇದೀಗ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ದರ್ಶನ್ ಜೈಲು ಸೇರಿ ತಿಂಗಳಾಗಿದೆ. ಇದೀಗ ಜೈಲು ಸೇರಿರುವ ದರ್ಶನ್ ಬಿಡುಗಡೆ ಬಗ್ಗೆ ಕೊಪ್ಪಳದ ಕನಕಗಿರಿ ಪಟ್ಟಣದ 10ನೇ ವಾರ್ಡ್‌ನಲ್ಲಿರುವ ಕೌಡೇಪೀರ ಲಾಲಸಾಬ್ ಭವಿಷ್ಯ ನುಡಿದಿದ್ದಾರೆ. ದರ್ಶನ್ ಬಿಡುಗಡೆ ಸನ್ನಿಹಿತವಾಗಿದೆ ಎಂದಿರುವ ಲಾಲಸಾಬ್. ಇಲ್ಲಿನ ಅಲಾಯಿ ದೇವರು ನುಡಿಯುವ ಭವಿಷ್ಯದ ನುಡಿಗೆ ಮಹತ್ವ ಇದೆ. ಪ್ರತಿವರ್ಷ ಮಳೆ, ಬೆಳೆ, ಬರಗಾಲ ಭವಿಷ್ಯ ನುಡಿಯುವ ದೇವರು. ಇಂದು ಬೆಳಗಿನ ಜಾವ ನಡೆದ ಕೌಡೇಪಿರ ಸಾಬ್ ಸವಾರಿ ವೇಳೆ ಡಿಬಾಸ್ ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ನಟ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ? ಎಂದು ಆಲಾಯಿ ದೇವರನ್ನು ಪ್ರಶ್ನಿಸಿರುವ ಅಭಿಮಾನಿಗಳು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ದೇವರು. ಶೀಘ್ರದಲ್ಲಿ ಬಿಡುಗಡೆಯಾಗುವ ಬಗ್ಗೆ ಭವಿಷ್ಯ ನುಡಿದಿರುವ ಅಲಾಹಿ ದೇವರು.
undefined
ಡಿಕೆಶಿ ಭೇಟಿಗೆ ಸಮಯ ಕೇಳಿದ ವಿಜಯಲಕ್ಷ್ಮೀ; ದರ್ಶನ್‌ಗೆ ನ್ಯಾಯ ಕೊಡಿಸಲು ರೆಡಿ ಎಂದ ಡಿಕೆಶಿ!
ಡಿಕೆಶಿ ಬಂಧನ ವೇಳೆ ಭವಿಷ್ಯ ನುಡಿದಿತು!
ಈ ಹಿಂದೆ 2019ರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದಾಗ ಭವಿಷ್ಯ ನುಡಿದಿದ್ದ ಅಲಾಹಿ ದೇವರು. ಭವಿಷ್ಯ ನುಡಿದಂತೆ ಜೈಲಿನಿಂದ ಹೊರಬಂದಿದ್ದ ಡಿಕೆ ಶಿವಕುಮಾರ. ಇದೀಗ ದರ್ಶನ್ ಬಿಡುಗಡೆಯ ಭವಿಷ್ಯ ನುಡಿದಿರುವುದರಿಂದ ದರ್ಶನ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಏನಿದು ಪ್ರಕರಣ?
ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯತಮೆ ಪವಿತ್ರಾ ಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆತಂದು ಬಳಿಕ ಆತನಿಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆಗೈದ ಆರೋಪದ ಮೇರೆಗೆ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಹಲವು ಬಾರಿ ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಹತ್ಯೆ ಕೃತ್ಯದಲ್ಲಿ ತಪ್ಪಿಸಿಕೊಳ್ಳಲು 70 ಲಕ್ಷ ರು. ವ್ಯಯಿಸಲು ದರ್ಶನ್ ಯತ್ನಿಸಿದ್ದರು. ಕೊನೆಗೆ 12 ದಿನಗಳ ತನಿಖೆ ನಡೆಸಿದ ಬಳಿಕ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಶನಿವಾರ ಪೊಲೀಸರು ಹಾಜರುಪಡಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಇದೀಗ ತಿಂಗಳಿಂದ ಪರಪ್ಪನ ಅಗ್ರಹಾರದ ವಿಶೇಷ ಭದ್ರತಾ ವಿಭಾಗದ ಸೆಲ್ ಜೈಲಿನಲ್ಲಿರುವ ನಟ ದರ್ಶನ್ ಸಹಚರರು.