ಅಡ್ವಾಣಿಯವರಿಗೆ ಭಾರತ ರತ್ನ ನೀಡಿದ್ದಕ್ಕೆ ತಕರಾರಿಲ್ಲ, ಆದರೆ: ಡಿಕೆಶಿ ಹೇಳಿದ್ದೇನು?

By Govindaraj S  |  First Published Feb 4, 2024, 3:02 PM IST

ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಅವರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರು ಇಲ್ಲ. ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅವರಿಗೂ ಭಾರತರತ್ನ ನೀಡಬೇಕಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. 


ಬಸವನಬಾಗೇವಾಡಿ (ಫೆ.04): ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಅವರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರು ಇಲ್ಲ. ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ನಮ್ಮ ಸರ್ಕಾರ ಮನವಿ ಮಾಡಿತ್ತು. ಅವರಿಗೂ ಭಾರತರತ್ನ ನೀಡಬೇಕಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. ಬಸವನಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅನ್ನದಾಸೋಹಕ್ಕೆ ಶ್ರೀಗಳು ಹೆಸರಾಗಿದ್ದರು. ಅವರಿಗೆ ಗೌರವ ಸಲ್ಲಿಸಬೇಕು ಅನ್ನೋದು ನಮ್ಮ ಒತ್ತಾಯವಿದೆ. ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

ಡಿಕೆಶಿಗೆ ಮುಜುಗರ ತಂದ ಎರಡು ಬಣಗಳ ಸ್ವಾಗತ: ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಕಾಂಗ್ರೆಸ್ ಪಕ್ಷದ ಎರಡು ಬಣಗಳಿಂದ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಹೀಗಾಗಿ ದೇವರಹಿರಪ್ಪಗಿಯ ಎರಡು ಬಣಗಳ ಸ್ವಾಗತ ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಇರಿಸು ಮುರಿಸು ಮಾಡುವುದರೊಂದಿಗೆ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಹೋಗಲು ಕಾರಣವಾಯಿತು.

Latest Videos

undefined

'ಹೇ ಪೂನಂ ಪಾಂಡೆ... ನೀವು ಇಟ್ಟಿರುವ ಹೆಜ್ಜೆಗೆ ಸೆಲ್ಯೂಟ್': ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ!

ದೇವರಹಿಪ್ಪರಗಿ ಪಟ್ಟಣದ ಮಾರ್ಗವಾಗಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕಾರ್ಯಕ್ರಮಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಶನಿವಾರ 1.30 ಗಂಟೆಯ ಸುಮಾರಿಗೆ ಪಟ್ಟಣದ ಐಬಿ ಹತ್ತಿರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ.ಎಸ್.ಪಾಟೀಲ ಯಾಳಗಿ ಹಾಗೂ ಡಾ. ಪ್ರಭುಗೌಡ ಲಿಂಗದಳ್ಳಿ ಅವರ ತಂದೆಯವರಾದ ಬಿ.ಬಿ. ಲಿಂಗದಳ್ಳಿ ಅವರ ನೇತೃತ್ವದ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಮುಖಂಡರಿಂದ ಒಂದು ಬಣ ಸನ್ಮಾನಿಸಿತು.

ಆದರೆ ಇನ್ನೊಂದು ಬಣ ಪಟ್ಟಣದ ಮೊಹರೆ ವೃತ್ತದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ನೇತೃತ್ವದ ಬಣ ಕೆಪಿಸಿಸಿ ಅಧ್ಯಕ್ಷರನ್ನು ಸನ್ಮಾನಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಏನು ಸರಿ ಇಲ್ಲ ಎನ್ನುವುದು ರಾಜ್ಯಾಧ್ಯಕ್ಷರ ಗಮನ ಸೆಳೆದರು. ರಾಜ್ಯದಲ್ಲಿ ಸರ್ಕಾರ ಬಂದರೂ ಕ್ಷೇತ್ರದಲ್ಲಿ ಒಗ್ಗೂಡದ ಕಾಂಗ್ರೆಸ್ ಬಣಗಳನ್ನು ನೋಡಿ ಮತಕ್ಷೇತ್ರದಲ್ಲಿ ಜನ ಗುಸು ಗುಸು ಮಾತನಾಡುತ್ತಿದ್ದರೆ ಇತ್ತ ವಿರೋಧ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷದ ಬಣ ರಾಜಕೀಯನೇ ಅಸ್ತ್ರವಾಗಿಸಿಕೊಂಡಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಗುಂಪು ಗುಂಪುಗಳಾಗಿ ತೆರಳಿ ಸನ್ಮಾನಿಸುವ ಮೂಲಕ ಬಣ ರಾಜಕೀಯಕ್ಕೆ ಪುಷ್ಠಿ ನೀಡಿದೆ.

ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ: ಸಚಿವ ಎಂ.ಸಿ.ಸುಧಾಕರ್

ಬಣ ರಾಜಕೀಯ ಲೋಕಸಭೆಗೂ ಮುಂದುವರಿಯುವ ಸಾಧ್ಯತೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಜನ ಮುಖಂಡರು ಪಕ್ಷದ ಟಿಕೆಟ್‌ಗಾಗಿ ಹಲವಾರು ಕಸರತ್ತುಗಳನ್ನು ನಡೆಸಿದ್ದರು. ಕೊನೆಯ ಕ್ಷಣದಲ್ಲಿ ಸಿಂದಗಿ ಕ್ಷೇತ್ರದ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಅವರು ಪಕ್ಷದ ಹೈಕಮಾಂಡ್ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ವಿಧಾನಸಭಾ ಚುನಾವಣೆಯಿಂದ ಇಂದಿನವರೆಗೆ ಒಬ್ಬರಿಗೊಬ್ಬರು ಮುಖ ತೋರಿಸಿದ ಹಾಗೆ ಬಣ ರಾಜಕೀಯ ಬೆಳೆದು ನಿಂತಿದೆ. ಈ ವಿಷಯ ರಾಜ್ಯ ಹಾಗೂ ಜಿಲ್ಲಾ ಮುಖಂಡರಿಗೂ ಗೊತ್ತಿದ್ದರೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರು ಯಾರು ಇಲ್ಲದಂತಾಗಿದೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಆಗುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿದೆ.

click me!