ಭಾರತ ಮಾತಾ ಕಿ ಜೈ ಘೋಷಣೆ ಕೂಗಿದ ಹಿಂದೂ ಕಾರ್ಯತರ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್!

Published : Sep 27, 2024, 10:26 PM IST
ಭಾರತ ಮಾತಾ ಕಿ ಜೈ ಘೋಷಣೆ ಕೂಗಿದ ಹಿಂದೂ ಕಾರ್ಯತರ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್!

ಸಾರಾಂಶ

ದಕ್ಷಿಣ ಕನ್ನಡದ ಬೋಳಿಯಾರ್‌ನಲ್ಲಿ ಮೋದಿ ಪ್ರಮಾಣವಚನ ಸಮಾರಂಭದ ದಿನ ನಡೆದ ಚೂರಿ ಇರಿತ ಪ್ರಕರಣದ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.  ಭಾರತ್ ಮಾತಾ ಕಿ ಜೈ ದ್ವೇಷ ಘೋಷಣೆಯಲ್ಲ ಎಂದು ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದೆ. 

ಬೆಂಗಳೂರು(ಸೆ.27) ಭಾರತ್ ಮಾತಾ ಕಿ ಜೈ. ಇದು ಕೋಮುಗಲಭೆ ಸೃಷ್ಟಿಸುವ ಘೋಷಣೆ ಎಂದು ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ವಿಶೇಷ ವಿಚಾರಣೆ ನಡೆದಿದ್ದು ದಕ್ಷಿಣ ಕನ್ನಡದ ಬೋಳಿಯಾರ್‌ನಲ್ಲಿ ನಡೆದ ಚಾಕು ಇರಿತ ಪ್ರಕರಣ ವಿಚಾರಣೆಯಲ್ಲಿ. ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್, ಈ ಘೋಷಣೆ ದೇಶವನ್ನು ಒಟ್ಟುಗೂಡಿಸುವ ಘೋಷಣೆ. ಇದು ದ್ವೇಷದ ಘೋಷಣೆಯಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನ ನಡೆದ ಘಟನೆ. ಜೂನ್ 9 ರಂದು ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಕಾರ್ಯಕ್ರಮದ ಲೈವ್ ಹಲೆವೆಡೆ ಸ್ಕ್ರೀನ್ ಮೇಲೆ ಪ್ರಸಾರ ಮಾಡಲಾಗಿತ್ತು. ಹೀಗೆ ದಕ್ಷಿಣ ಕನ್ನಡದ ಬೋಳಿಯಾರ್ ಬಳಿ ಹಿಂದೂ ಕಾರ್ಯಕರ್ತರು ಮೋದಿ ಪ್ರಮಾಣವಚನ ಸಮಾರಂಭದ ಲೈವ್ ವೀಕ್ಷಿಸಿ ಮರಳುತ್ತಿದ್ದ ವೇಳೆ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುತ್ತಾ ಸಾಗಿದ್ದಾರೆ.  

ಬಿಜೆಪಿ ವಿಜಯೋತ್ಸವ ವೇಳೆ ಚೂರಿ ಇರಿತ ಪ್ರಕರಣ; ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್!

ಆದರೆ ಬೋಳಿಯಾರ್ ಬಳಿ ಮಸೀದಿ ಬಳಿ ಇದ್ದ ಅನ್ಯಕೋಮಿನ ಯುವಕರಿಗೆ ಈ ಘೋಷಣೆ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಹಿಂದೂ ಕಾರ್ಯಕರ್ತರ ಚೇಸ್ ಮಾಡಿ ಹಲ್ಲೆ ಮಾಡಿದ ಅನ್ಯಕೋಮಿನ ಗುಂಪು, ಓರ್ವನಿಗೆ ಚಾಕು ಇರಿದಿತ್ತು. ಘಟನೆ ಮರುದಿನ ಪಿಕೆ ಅಬ್ದುಲ್ಲಾ ಅನ್ನೋ ವ್ಯಕ್ತಿ ಹಿಂದೂ ಕಾರ್ಯಕರ್ತರ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಸೀದಿ ಎದರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವ ಮೂಲಕ ಕೋಮುದ್ವೇಷ ಹರಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಈ ಘೋಷಣೆ ಕೋಮು ದ್ವೇಷ ಹರಡುವುದಿಲ್ಲ ಎಂದು ಕಿವಿ ಮಾತು ಹೇಳಿ ಪ್ರಕರಣವನ್ನು ರದ್ದುಗೊಳಿಸಿದೆ. ಇದರಿಂದ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ದೇಶದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. 

ಅರ್ಜಿದಾರರು 153ಎ ಅಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಲ್ಲಿ 153ಎ ಅನ್ವಯವಾಗುವಂತ ಯಾವುದೇ ಅಂಶಗಳು ದೂರಿನಲ್ಲಿ ಕಾಣುತ್ತಿಲ್ಲ. ಭಾರತ್ ಮಾತಾ ಕಿ ಜೈ ಕೋಮು ದ್ವೇಷವನ್ನು ಹೇಗೆ ಹರಡುತ್ತದೆ. ಇದು ದ್ವೇಷ ಭಾವನೆ ಮೂಡಿಸುವ ಘೋಷಣೆಯಲ್ಲ ಎಂದು ಜಸ್ಟೀಸ್ ಎಂ ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.

ಮೋದಿ ಪದಗ್ರಹಣ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚಾಕು ಇರಿದ ಐವರು ಮುಸ್ಲಿಂ ಆರೋಪಿಗಳ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!