ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಹೆಲಿಕಾಪ್ಟರ್ ಬುಕಿಂಗ್ ವೇಸ್ಟ್ ಆಯ್ತಾ?

By Sathish Kumar KHFirst Published Sep 27, 2024, 3:51 PM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಅದರೆ, ಆತನ ಅಭಿಮಾನಿ ಹೇಳಿದಂತೆ ದರ್ಶನ್ ಕರೆದುಕೊಂಡು ಹೋಗಲು ಹೆಲಿಕಾಪ್ಟರ್ ಬುಕಿಂಗ್ ಮಾಡಿದ್ದು ವೇಸ್ಟ್ ಆಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರು (ಸೆ.27): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ 7 ಮಂದಿಯ ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್ ಮುಂದೆ ದರ್ಶನ್ ಪರ ವಕೀಲರು ವಾದ ಮಂಡನೆಗೆ ಸಮಯ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ (ಸೆ.30ಕ್ಕೆ) ಮುಂದೂಡಿಕೆ ಮಾಡಲಾಗಿದೆ.

ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆ ಆರಂಭವಾದ ತಕ್ಷಣ ರೇಣುಕಾಸ್ವಾಮಿ ಕೊಲೆ ಕೇಸಿನ ಎ1 ಆರೋಪಿ ನಟಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತದೆ. ಇದಾದ ನಂತರ ಎ2 ಆರೋಪಿ ನಟ ದರ್ಶನ್ ತೂಗುದೀಪ ಅವರ ಜಾಮೀನಿ ಅರ್ಜಿ ವಿಚಾರಣೆ ಮಾಡಲು ಕೈಗೆತ್ತಿಕೊಂಡಾಗ, ದರ್ಶನ್ ಪರ ವಕೀಲರಾದ ಸುನಿಲ್ ಕುಮಾರ್ ಅವರು ವಾದ ಮಂಡನೆಗೆ ಕಾಲಾವಕಾಶ ಕೋರಿದ್ದಾರೆ. ಈ ವೇಳೆ ದರ್ಶನ್ ಜಾಮೀನು ಅರ್ಜಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಸೋಮವಾರ ವಾದ ಮಂಡನೆ ಮಾಡುವುದಾಗಿ ಸಮಯ ಕೋರಿದ್ದಾರೆ. ಇದರ ಬೆನ್ನಲ್ಲಿಯೇ ನ್ಯಾಯಮೂರತಿಗಳು ನಟ ದರ್ಶನ್ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.

Latest Videos

ದರ್ಶನ್ ಬಂಧನದ ಲಾಭ ಪಡೆದ ಮ್ಯಾಕ್ಸ್‌?: ಡೆವಿಲ್ ಕಣ್ಣಿಟ್ಟಿದ್ದ ತಿಂಗಳ ಮೇಲೆ ಕಿಚ್ಚನ ಮ್ಯಾಕ್ಸ್ ಕಣ್ಣು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಅಲ್ಲಿನ ಆರೋಪಿಗಳು ಹಾಗೂ ಜೈಲಿನ ಅಧಿಕಾರಿಗಳು ರಾಜಾತಿಥ್ಯ ನೀಡಿದ್ದಾರೆ ಎಂಬ ಫೋಟೋಗಳು ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆಯೇ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ರವಾನಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಗ್ಯಾಂಗ್‌ನ 13 ಜನರನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗಿತ್ತು. ಆರೋಪಿಗಳ ಯಾವುದೇ ಕೋರ್ಟ್ ವಿಚಾರಣೆ ಇದ್ದರೂ ಆನ್‌ಲೈನ್ ಮೂಲಕ ಹಾಜರಾಗಲು ಅವಕಾಶ ನೀಡಲಾಗಿದೆ. ಇಂದು ನಟ ದರ್ಶನ್‌ ಅವರಿಗೆ ಕೋರ್ಟ್‌ನಿಂದ ಜಾಮೀನು ಲಭ್ಯವಾಗುತ್ತದೆ, ಅವರನ್ನು ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲಾಗುತ್ತದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹಂಚಿಕೊಂಡಿದ್ದರು. ಆದರೆ, ಇದೀಗ ಜಾಮೀನು ಅರ್ಜಿಯನ್ನು ಸ್ವತಃ ದರ್ಶನ್ ಪರ ವಕೀಲರೇ ಮುಂದೂಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ.

ದರ್ಶನ್‌ಗಿಂದು ಜೈಲೋ‌, ಬೇಲೋ?: ಟೆನ್ಷನ್‌ನಲ್ಲಿ ರಾತ್ರಿಯಿಡಿ ನಿದ್ದೆ ಮಾಡದ ಕೊಲೆ ಆರೋಪಿ..!

ಹೆಲಿಕಾಪ್ಟರ್ ಬುಕಿಂಗ್ ವೇಸ್ಟ್ ಆಯ್ತಾ?
ನಟ ದರ್ಶನ್‌ಗೆ ಕೋರ್ಟ್‌ನಿಂದ ಶುಕ್ರವಾರ ಜಾಮೀನು ಲಭ್ಯವಾಗುತ್ತದೆ. ಆಗ ಅವರನ್ನು ರಸ್ತೆ ಮೂಲಕವಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಕರೆದೊಯ್ದರೆ ಸುಮಾರು 450 ಕಿ.ಮೀ ದಾರಿಯುದ್ದಕ್ಕೂ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅವರೆಲ್ಲರೂ ದರ್ಶನ್ ನೋಡಬೇಕೆಂದು ಕಾರಿಗೆ ಅಡ್ಡ ಹಾಕಬಹುದು. ಆದ್ದರಿಂದ ದರ್ಶನ್‌ನ್ನು ಬಳ್ಳಾರಿಯಿಂದ ನೇರವಾಗಿ ಬೆಂಗಳೂರಿಗೆ ಕರೆದೊಯ್ಯಲು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದನು. ಇದೀಗ ಅಭಿಮಾನಿಯ ಹೇಳಿಕೆ ಸುಳ್ಳು ಎಂಬುದು ತಿಳಿದು ಬರುತ್ತಿದೆ.

 

click me!