ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ ಫ್ರೆಶ್‌ಮೆನು ಸಲಾಡ್‌ನಲ್ಲಿ ಜೀವಂತ ಬಸವನಹುಳು ಪತ್ತೆ!

Published : Jan 14, 2025, 04:44 PM IST
ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ ಫ್ರೆಶ್‌ಮೆನು ಸಲಾಡ್‌ನಲ್ಲಿ ಜೀವಂತ ಬಸವನಹುಳು ಪತ್ತೆ!

ಸಾರಾಂಶ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಜೊಮ್ಯಾಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದಾಗ ಅದರಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು (ಜ.14) : ಬೆಂಗಳೂರಿನಲ್ಲಿ ಸದಾಕಾಲ ಜಿಮ್ ಮಾಡುತ್ತಾ ಸ್ವಾದಿಷ್ಟ ಮತ್ತು ತಾಜಾ ಹಣ್ಣು, ತರಕಾರಿಗಳ ಸಲಾಡ್‌ಗಳ ಡಯಟ್ ಫುಡ್ ಸೇವನೆ ಮಾಡುವ ವ್ಯಕ್ತಿಯೊಬ್ಬರು ಫ್ರೆಶ್‌ಮೆನು ಸಂಸ್ಥೆಯಿಂದ ಜೊಮ್ಯಾಟೋ ಮೂಲಕ ಸಲಾಡ್ ಆರ್ಡರ್ ಮಾಡಿದ್ದಾರೆ. ಆದರೆ, ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಸಿಕ್ಕಿರುವುದಾಗಿ ವೀಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ಫಿಟ್‌ನೆಸ್‌ಕಾಪ್ರತೀಕ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ, ಫ್ರೆಶ್‌ಮೆನುವಿನಿಂದ 4 ಐಟಂಗಳನ್ನು ಆರ್ಡರ್ ಮಾಡಿದ್ದರೂ, 3 ಮಾತ್ರ ಬಂದಿವೆ ಎಂದು ಯುವಕ ಹೇಳುತ್ತಿದ್ದಾನೆ. ಜೊತೆಗೆ, ತಾನು ಪಾವತಿ ಮಾಡಿದ ಬಿಲ್‌ನ್ನೂ ಕೂಡ ತೋರಿಸುತ್ತಾನೆ. ಆರ್ಡ್‌ರ್ ಬಾಕ್ಸ್‌ನಿಂದ ತೆಗೆದ ಸಲಾಡ್ ಬೌಲ್‌ನಲ್ಲಿ ಪಾರದರ್ಶಕ ಮುಚ್ಚಳದಲ್ಲಿ ನೋಡಿದಾದ ಜೀವಂತ ಬಸವನ ಹುಳು ಕಂಡುಬಂದಿದೆ. ಇನ್ನು ಈ ವೀಡಿಯೋದಲ್ಲೂ ಹುಳು ಓಡಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರಿಂದಾಗಿ ತಾನು ಸಲಾಡ್‌ನ ಬೌಲ್‌ಗಳನ್ನು ತೆರೆದಿಲ್ಲ ಎಂದು ಹೇಳಿದ್ದಾನೆ.

ಇನ್ನು ನೀವು ಹೊರಗಿನ ಊಟವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಅನಿವಾರ್ಯವಾದರೆ ಮಾತ್ರ ಹೊರಗಿನಿಂದ ತರಿಸಿಕೊಳ್ಳಿ. ತಿನ್ನುವ ಮುನ್ನ ಚೆನ್ನಾಗಿ ಪರಿಶೀಲಿಸಿ ಎಂದು ಯುವಕ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆವ ಫ್ರೆಶ್‌ಮೆನು ಸಂಸ್ಥೆ ಕ್ಷಮೆ ಕೇಳಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ಇದಕ್ಕೆ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ ನೆಟ್ಟಿಗರು ಇದೇ ರೀತಿಯಲ್ಲಿ ತಮಗೆ ಆಗಿರುವ ಅನುಭವಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 15 ನಿಮಿಷದಲ್ಲಿ ಫುಡ್ ಡೆಲಿವರಿಗೆ ಮುಂದಾದ Zomato, ಬೆಂಗಳೂರು ಟ್ರಾಫಿಕ್‌ನಲ್ಲಿ ಬರೋಕೆ 10ನಿ, ಫುಡ್ ರೆಡಿ ಹೇಗೆ? ಎಷ್ಟು ಸೇಫ್?

ಪ್ರೆಶ್ ಮೆನು ಸಂಸ್ಥೆಯಿಂದ ಕ್ಷಮೆಯಾಚನೆ ಮತ್ತು ಸ್ಪಷ್ಟನೆ:  ಪ್ರತೀಕ್, ನೀವು ಇತ್ತೀಚೆಗೆ ಫ್ರೆಶ್‌ಮೆನುವಿನಿಂದ ಮಾಡಿದ ಆರ್ಡರ್‌ನಲ್ಲಿ ಅನುಭವಿಸಿದ ಘಟನೆಗೆ ನಮ್ಮ ಪ್ರಾಮಾಣಿಕ ಕ್ಷಮೆಯಾಚನೆಯನ್ನು ವ್ಯಕ್ತಪಡಿಸಲು ನಾವು ಬರೆಯುತ್ತಿದ್ದೇವೆ. ನಿಮ್ಮ ಸಲಾಡ್‌ನಲ್ಲಿ ಜೀವಂತ ಹುಳು ಕಂಡುಬಂದಿರುವುದು ಸಂಪೂರ್ಣವಾಗಿ ತಪ್ಪಾಗಿದೆ. ನಮ್ಮ ಅಡುಗೆಮನೆಯಲ್ಲಿ ಈ ದೋಷಕ್ಕಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಇದರಿಂದಾಗಿ ನಾವು ನಿಮ್ಮ ಮುಂದೆ ಕ್ಷಮೆಯಾಚನೆ ಮಾಡುತ್ತಿದ್ದೇವೆ. ಇದಕ್ಕಾಗಿ ನಮ್ಮ ಪ್ರತಿನಿಧಿಗಳು ನಿಮ್ಮನ್ನು ನೇರವಾಗಿ ಭೇಟಿ ಮಾಡಲಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಹೃದಯ ಗೆದ್ದ ಜೊಮ್ಯಾಟೋ ಬಾಯ್, ₹500 ಸ್ವೀಕರಿಸಲು ನಿರಾಕರಿಸಿದ ಕಾರಣ ಕೇಳಿ ಜನ ಭಾವುಕ!

ಮುಂದುವರದು  ಫ್ರೆಶ್‌ಮೆನುವಿನಲ್ಲಿ 100% ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತೇವೆ. ಅವು ಪ್ರಕೃತಿಯಲ್ಲಿ ಲಭ್ಯವಿರುವಂತೆಯೇ ತಾಜಾ ಮತ್ತು ಆರೋಗ್ಯಕರ ಊಟವನ್ನು ನಿಮಗೆ ತಲುಪಿಸುತ್ತೇವೆ. ಆದರೆ, ಆಹಾರ ತಯಾರಿಕೆ ಪ್ರಕ್ರಿಯೆಯಲ್ಲಿ ಇವುಗಳನ್ನು ದೋಷ ಸಂಭವಿಸಿರುವುದೇ ಈ ಘಟನೆಗೆ ಕಾರಣವಾಗಿದೆ. ಇನ್ನುಮುಂದೆ FreshMenu ಸಂಸ್ಥೆ ನೀವು ನಿರೀಕ್ಷಿಸಿದ ಗುಣಮಟ್ಟ ಮತ್ತು ಕಾಳಜಿಯನ್ನು ಪಾಲಿಸುತ್ತೇವೆ. ಮತ್ತೊಮ್ಮೆ, ಕ್ಷಮೆಯಾಚನೆಯನ್ನು ಸ್ವೀಕರಿಸಿ ಎಂದು ಆಹಾರ ಬುಕ್ ಮಡಿದ @fitnesskapratik ಅವರಿಗೆ ಮನವಿ ಫ್ರೆಶ್ ಮೆನು ಸಂಸ್ಥೆಯಿಂದ ಮನವಿ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!