ಬೆಂಗ್ಳೂರು-ಮಂಗ್ಳೂರು ರೈಲು ಸಂಚಾರ ಆರಂಭ

By Kannadaprabha NewsFirst Published Sep 5, 2020, 7:19 AM IST
Highlights

ಮಂಗಳೂರು-ಬೆಂಗಳೂರು ಹಾಗೂ ಕಾರವಾರ-ಬೆಂಗಳೂರು ರೈಲು ಪುನಾರಂಭ|ಸೆ.4ರಿಂದ ಶುರುವಾಗಿ ಮುಂದಿನ ಸೂಚನೆ ವರೆಗೂ ವೈಪಿಆರ್‌(ಯಶವಂತಪುರ)-ಕಾರವಾರ ಹಾಗೂ ಕಾರವಾರ-ವೈಪಿಆರ್‌ ರೈಲು ಇಂದಿನಿಂದ(ಸೆ.5)ಕಾರ್ಯಾರಂಭ| 

ಮಂಗಳೂರು(ಸೆ.05): ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ನಿಲುಗಡೆಯಾಗಿದ್ದ ಮಂಗಳೂರು-ಬೆಂಗಳೂರು ಹಾಗೂ ಕಾರವಾರ-ಬೆಂಗಳೂರು ರೈಲುಗಳ ನಿನ್ನೆ(ಶುಕ್ರವಾರ)ಯಿಂದ ಪುನಾರಂಭಗೊಂಡಿದೆ.

ಸೆ.4ರಿಂದ ಶುರುವಾಗಿ ಮುಂದಿನ ಸೂಚನೆ ವರೆಗೂ ವೈಪಿಆರ್‌(ಯಶವಂತಪುರ)-ಕಾರವಾರ ಹಾಗೂ ಕಾರವಾರ-ವೈಪಿಆರ್‌ ರೈಲು ಸೆ.5ರಿಂದ ಕಾರ್ಯಾರಂಭಿಸಲಿದೆ. ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ಸೆ.5ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.

ಎರಡು ದಿನ ತಡವಾಗಿ ಹೊರಟ ರೋ ರೋ ರೈಲು

ಬೆಂಗಳೂರು ಸಿಟಿ ಟು ಮಂಗಳೂರು (ವಾರದಲ್ಲಿ 4 ದಿನ) ರೈಲು ಸೆ.4ರಿಂದ ಹಾಗೂ ಮಂಗಳೂರು ಟು ಬೆಂಗಳೂರು ಸಿಟಿ (ವಾರದಲ್ಲಿ 4 ದಿನ) ರೈಲು ಸೆ.6ರಿಂದ ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ಮಂಗಳೂರು(ವಾರದಲ್ಲಿ 3 ದಿನ) ರೈಲು ಸೆ.6ರಿಂದ ಹಾಗೂ ಮಂಗಳೂರು-ಬೆಂಗಳೂರು(ವಾರದಲ್ಲಿ 3 ದಿನ) ಸೆ.5ರಿಂದ ಸಂಚಾರ ಆರಂಭಿಸಲಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
 

click me!