ಶುಕ್ರವಾರದ ಕೊರೋನಾ ಲೆಕ್ಕ: ಕರ್ನಾಟಕದಲ್ಲಿ 1 ಲಕ್ಷದತ್ತ ಸಕ್ರಿಯ ಪ್ರಕರಣ

By Suvarna News  |  First Published Sep 4, 2020, 8:06 PM IST

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ ಬಿಡುಗಡೆ ಮಾಡಿದ್ದು, ಶುಕ್ರವಾರ ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ ಈ ಕೆಳಗಿನಂತಿದೆ ನೋಡಿ.


ಬೆಂಗಳೂರು, (ಸೆ.04): ರಾಜ್ಯದಲ್ಲಿ ಇಂದು (ಶುಕ್ರವಾರ) 9280 ಹೊಸ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಇದರಿಂದ ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 3,79,486 ಕ್ಕೆ ಏರಿಕೆಯಾಗಿದೆ.

ಮಾರಕ ಕೊರೋನಾಗೆ ಒಂದೇ ದಿನ 116 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 6170 ಕ್ಕೇರಿದೆ.

Latest Videos

undefined

ಕೊರೋನಾಗೆ ಅಮೆರಿಕ ಲಸಿಕೆ ನವೆಂಬರ್ 01ಕ್ಕೆ ಸಿದ್ಧ..?

ಇನ್ನು ಕಳೆದ 24 ಗಂಟೆಗಳಲ್ಲಿ  6161 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ 2,74,196 ಮಂದಿ ಸಂಪೂರ್ಣ ಗುಣಮುಖರಾದಂತಾಗಿದೆ.

ರಾಜ್ಯದಲ್ಲಿ 99,101 ಸಕ್ರಿಯ ಕೊರೋನಾ ಪ್ರಕರಣಗಳು ಇದ್ದು, ಇದರಲ್ಲಿ 785 ಮಂದಿ ಕೊರೋನಾ ಸೋಂಕಿತರು ಐಸಿಯುನಲ್ಲಿದ್ದಾರೆ

ರಾಜಧಾನಿ ಬೆಂಗಳೂರಿನಲ್ಲಿ  2963 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 25 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

click me!