ಸ್ವಯಂಚಾಲಿನ ಸ್ವಚ್ಛತಾ ಘಟಕ, 8 ನಿಮಿಷದಲ್ಲಿ 1 ರೈಲು ಸ್ವಚ್ಛ!

By Kannadaprabha NewsFirst Published Feb 6, 2020, 12:12 PM IST
Highlights

8 ನಿಮಿಷದಲ್ಲಿ 1 ರೈಲು ಸ್ವಚ್ಛ ಆಗುತ್ತೆ!| ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣದಲ್ಲಿ ಸ್ವಯಂ ಚಾಲಿನ ಸ್ವಚ್ಛತಾ ಘಟಕ ಸ್ಥಾಪನೆ

ಬೆಂಗಳೂರು[ಫೆ.06]: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಬೋಗಿಗಳ ಹೊರ ಭಾಗವನ್ನು ಸ್ವಚ್ಛಗೊಳಿಸಲು ‘ಸ್ವಯಂ ಚಾಲಿತ ಸ್ವಚ್ಛತಾ ಘಟಕ’ಕ್ಕೆ ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಬುಧವಾರ ಚಾಲನೆ ನೀಡಿದರು.

Karnataka's first Automatic Railway Coach Washing Plant installed in Bengaluru cleans coaches in an efficient & timely manner.

The plant reduces the water, cost & manpower required and ensures a hygienic journey for the passengers. pic.twitter.com/jcVX45S988

— Ministry of Railways (@RailMinIndia)

ಘಟಕಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್‌ಕುಮಾರ್‌ ಸಿಂಗ್‌, ನೈರುತ್ಯ ರೈಲ್ವೆ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಬೋಗಿಗಳ ಸ್ವಯಂ ಚಾಲಿತ ಸ್ವಚ್ಛತಾ ಘಟಕ ಆರಂಭಿಸಲಾಗಿದೆ. ನಿಲ್ದಾಣದಲ್ಲಿ ಪ್ರತಿದಿನ 150 ಬೋಗಿಗಳನ್ನು ಸ್ವಚ್ಛ ಮಾಡಬಹುದಾಗಿದೆ. ಮುಂದಿನ ಆರು ತಿಂಗಳ ಒಳಗಾಗಿ ಯಶವಂತಪುರ ರೈಲ್ವೆ ನಿಲ್ದಾಣ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ತಲಾ ಒಂದು ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

‘ಸ್ವಯಂ ಚಾಲಿತವಾಗಿ ಸ್ವಚ್ಛತಾ ಘಟಕ ನಿರ್ಮಾಣಕ್ಕೆ ಸುಮಾರು .1.67 ಕೋಟಿ ವೆಚ್ಚವಾಗಿದ್ದು, ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಹತ್ತು ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಘಟಕದಿಂದ ಬೋಗಿಗಳ ಸ್ವಚ್ಛತಾ ವೆಚ್ಚ, ಸಮಯ ಹಾಗೂ ನೀರಿನ ಉಳಿತಾಯವಾಗಲಿದೆ. ಒಂದು ಬೋಗಿಯನ್ನು ಸ್ವಚ್ಛ ಮಾಡುವುದಕ್ಕೆ ಸುಮಾರು 300 ಲೀಟರ್‌ ನೀರು ಬೇಕಾಗಿದ್ದು, ಇದಕ್ಕೆ ಶೇ.80ರಷ್ಟುಪುನರ್‌ ಬಳಕೆ ನೀರು ಹಾಗೂ ಶೇ.20ರಷ್ಟುಹೊಸ ನೀರನ್ನು ಬಳಸಿಕೊಳ್ಳಲಾಗುವುದು. ಈ ಹಿಂದೆ ರೈಲು ಬೋಗಿಗಳ ಸ್ವಚ್ಛತೆಗೆ .215 ವೆಚ್ಚವಾಗುತ್ತಿತ್ತು. ನೂತನ ಘಟಕದಿಂದ ಕೇವಲ .41 ಆಗಲಿದೆ ಎಂದು ಮಾಹಿತಿ ನೀಡಿದರು.

SWR commissioned it’s First Automated Coach Washing Plant at SBC Station of Bengaluru Division today. The plant was inaugurated by General Manager SWR Mr A K Singh. Two more plants to be installed shortly at YPR and BYPL terminals.

Regards
DRM SBC pic.twitter.com/KEdQmRxud1

— DRM Bengaluru (@drmsbc)

ನೈಋತ್ಯ ರೈಲ್ವೆ ವಲಯದಿಂದ ಸ್ವಚ್ಚ ಭಾರತ ಅಭಿಯಾನದ ಅಡಿಯಲ್ಲಿ ಮತ್ತೂಂದು ಹೊಸ ಮೈಲುಗಲ್ಲಿನ ಹೆಜ್ಜೆ ಇಂದು ಶ್ರೀ ಅಜಯ್ ಕುಮಾರ್ ಸಿಂಗ್ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ ಫಾರಂ ನಂಬರ 01 ರಲ್ಲಿ ಸ್ವಯಂ ಚಾಲಿತ ರೈಲು ಬೋಗಿಗಳು ಸ್ವಚ್ಚ ಗೂಳಿಸುವ ಯಂತ್ರವನ್ನು ಉದ್ಘಾಟಿಸಿದರು. pic.twitter.com/5qY50EsIlw

— SouthWestern Railway (@SWRRLY)

ಘಟಕದ ಕಾರ್ಯನಿರ್ವಹಣೆ:

ಈಗಾಗಲೇ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಘಟಕಗಳಲ್ಲಿ ಬಸ್‌ಗಳ ಸ್ವಚ್ಛತೆಗೆ ಅಳವಡಿಸಲಾಗಿರುವ ಯಂತ್ರಗಳ ಮಾದರಿಯಲ್ಲೇ ರೈಲ್ವೆ ನಿಲ್ದಾಣದ ಸ್ವಯಂ ಚಾಲಿತ ಘಟಕ ಕಾರ್ಯ ನಿರ್ವಹಿಸಲಿದ್ದು, ರೈಲು ಸಂಚಾರದ ವೇಳೆ ಈ ಘಟಕ ತನ್ನ ಕಾರ್ಯನಿರ್ವಹಿಸಲಿದೆ. ಘಟಕದ ಮುಂಭಾಗದಲ್ಲಿ ಸೆನ್ಸಾರ್‌ ಅಳವಡಿಸಲಾಗಿದ್ದು, ರೈಲು ಘಟಕವನ್ನು ಪ್ರವೇಶಿಸುತ್ತಿದ್ದಂತೆ ಎಂಜಿನ್‌ ಮತ್ತು ಬೋಗಿಗಳಿಗೆ ಬೇರೆ ಮಾನದಂಡದಲ್ಲಿ ನೀರು ಸಿಂಪಡಣೆ ಮಾಡುತ್ತವೆ. ನಂತರ, ಬೋಗಿಗೆ ಸೋಪು (ನೊರೆ) ಸಿಂಪಡಣೆಯಾಗುತ್ತದೆ. ಬೋಗಿಗಳ ಸ್ವಚ್ಛತೆಗೆ ಬ್ರಷ್‌ಗಳನ್ನು ಅಳವಡಿಸಲಾಗಿದೆ. ಎಂಟೇ ನಿಮಿಷದಲ್ಲಿ ಒಟ್ಟು 24 ಬೋಗಿಗಳ ಒಂದು ರೈಲು ಸ್ವಚ್ಛವಾಗಲಿದೆ ಎಂದು ವಿವರಿಸಿದರು.

click me!