ವಿಕೇಂಡ್ ಕರ್ಫ್ಯೂ ಬಗ್ಗೆ ಜನರಿಗೆ ಪೊಲೀಸ್ ಕಮೀಷನರ್ ಎಚ್ಚರಿಕೆ

By Suvarna News  |  First Published Apr 23, 2021, 5:34 PM IST

ವಿಕೇಂಡ್ ಕರ್ಫ್ಯೂ ಜಾರಿ ಬಗ್ಗೆ ಜನರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಎಚ್ಚರಿಕೆ ಜೊತೆಗೆ ಸಲಹೆಯನ್ನೂ ಕೊಟ್ಟಿದ್ದಾರೆ.


ಬೆಂಗಳೂರು, (ಏ.23): ಇಂದಿನಿಂದ ಅಂದ್ರೆ ಶುಕ್ರವಾರ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆ ವರೆಗೆ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಾಗಲಿದೆ. 

ಈ ಹಿನ್ನೆಯಲ್ಲಿ ಕಟ್ಟು ನಿಟ್ಟಾಗಿ ವಿಕೇಂಡ್ ಕರ್ಫ್ಯೂ ಜಾರಿಯಾಗುತ್ತದೆ. ಅನಗತ್ಯವಾಗಿ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Latest Videos

undefined

ವೀಕೆಂಡ್ ಕರ್ಫ್ಯೂ: ಚುನಾವಣಾ ಪ್ರಚಾರಕ್ಕೆ ಬ್ರೇಕ್..!
 
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟು ನಿಟ್ಟಾಗಿ ವಿಕೇಂಡ್ ಕರ್ಫ್ಯೂ ಜಾರಿಯಾಗುತ್ತದೆ. ಅನಗತ್ಯವಾಗಿ ಓಡಾಟಕ್ಕೆ ಅವಕಾಶ ಇರುವುದಿಲ್ಲ.  ನಿಯಮ ಉಲ್ಲಂಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

 ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಅದೇಶ ಯಥಾವತ್ತು ಜಾರಿಯಾಗುತ್ತೆ. ಅದೇಶದಲ್ಲಿ ಸೂಚಿಸಿರುವ ಸೇವೆಗಳು ಮಾತ್ರ ಲಭ್ಯವಿರುತ್ತೆ. ಮದುವೆಗಳಿಗೆ ಅವಕಾಶ ಇದ್ದರೂ ಮದುವೆ ಕಾರ್ಡ್ ಹಿಡಿದುಕೊಂಡು ಊರೆಲ್ಲ ಸುತ್ತುವಂತಿಲ್ಲ ಎಂದರು. ಸಾಧ್ಯವಾದರೆ ಇಂದೇ (ಶುಕ್ರವಾರ) ಮದುವೆ ಜಾಗವನ್ನ ತಲುಪಿ. ಸೋಮವಾರ ವಾಪಸ್ಸು ಬನ್ನಿ ಎಂದು ಸಲಹೆ ನೀಡಿದ್ದಾರೆ.

ಕಳೆದ ಬಾರಿ ಕೆಲವರು ಸುಳ್ಳು ಪಾಸ್ ಪಡೆದು ತಿರುಗಾಡಿದ್ದರು. ಕೆಲವರು ಫುಡ್ ಡೆಲವರಿ ಬಾಯ್ ವೇಷದಲ್ಲಿ ತಿರುಗಾಡಲು ಪ್ರಯತ್ನಿಸುತ್ತಾರೆ. ಇಂತಹವರನ್ನ ಯಾವುದೇ ಮುಲಾಜಿಲ್ಲದೆ ಬಂಧನ ಮಾಡಲಾಗುತ್ತೆ. ವಿಕೇಂಡ್ ಕರ್ಪ್ಯೂ ವೇಳೆ ಅಗತ್ಯ ಸೇವೆಗಳು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದರು.

click me!