ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ (ಮಾ.14ರ ಬೆಳಗ್ಗೆ 8 ಗಂಟೆಯಿಂದ) ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಧಾರ ಮಾಡಲಾಗಿದೆ.
ರಾಮನಗರ (ಮಾ.13): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ (ಮಾ.14ರ ಬೆಳಗ್ಗೆ 8 ಗಂಟೆಯಿಂದ) ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಧಾರ ಮಾಡಲಾಗಿದೆ. ಈಗ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟದವರೆಗೆ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು, ಈ ಭಾಗದಲ್ಲಿನ ಎಲ್ಲ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹವನ್ನು ಆರಂಭಿಸಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ನಿನ್ನೆ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿ ಮೈಸೂರು ಬೆಂಗಳೂರು ದಶಫಠ ಹೆದ್ದಾರಿ ಲೋಕಾರ್ಪಣೆ ಮಾಡಿದ್ದಾರೆ. ಈಗ ಅಧಿಕೃತ ಚಾಲನೆ ನೀಡಿದ ನಂತರ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಎಹದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಹಿಂದೆ ಪ್ರಕಟಣೆ ಹೊರಡಿಸಿದಸಂತೆ ಟೋಲ್ ಸಂಗ್ರಹ ದರವನ್ನು ಮುಂದುವರೆಸಲಾಗುತ್ತದೆ ಎಮದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ನಾಳೆ ಬೆಳಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಲಿದೆ.
ವಾಹನ ಸವಾರರಿಗೆ ಮತ್ತೆ ಬರೆ: ಏಪ್ರಿಲ್ 1ರಿಂದ ಹೈವೇ ಟೋಲ್ ದರ ಶೇ. 5ರಿಂದ ಶೇ.10 ರಷ್ಟು ಏರಿಕೆ..?
ನಿಡಘಟ್ಟದವರೆಗೆ ಟೋಲ್ ಸಂಗ್ರಹ: ಕಳೆದ ಮಾರ್ಚ್ 1 ರಂದು ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧೀಕಾರ ಮುಂದಾಗಿತ್ತು. ಆದರೆ, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಸಾಕಷ್ಟು ವಿರೋಧ ಉಂಟಾಗಿದ್ದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬ್ರೇಕ್ ಹಾಕಲಾಗಿತ್ತು. ಈಗ ಮಾರ್ಚ್ 14 ರಿಂದ ಟೋಲ್ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ನೀಡಿದ್ದಾರೆ. ಇದೀಗ ನಾಳೆಯಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನಿಂದ - ನಿಡಘಟ್ಟದವರೆಗೂ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ. ಒಟ್ಟು 56 ಕಿಮೀ ರಸ್ತೆಗೆ ನಾಳೆಯಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ವಿರೋಧದ ನಡುವೆಯೂ ಟೋಲ್ ಆರಂಭ: ಇನ್ನು ಸಾರ್ವಜನಿಕರ ಸಾಕಷ್ಟು ವಿರೋಧಗಳ ನಡುವೆಯೂ ಕೂಡ ನಾಳೆ ಟೋಲ್ ಸಂಗ್ರಹ ಮಾಡಲು ಹೆದ್ದಾರಿ ಪ್ರಾಧಿಕಾರ ಆರಂಭಿಸಲಾಗಿದೆ. ರಸ್ತೆಗಳ ಬದಿಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ, ಸರ್ವಿಸ್ ರಸ್ತೆ ಸರಿಪಡಿಸಿ ಟೋಲ್ ಸಂಗ್ರಹ ಮಾಡುವಂತೆ ಕಾಂಗ್ರೆಸ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ, ಈ ಎಲ್ಲ ವಿವಾದಗಳ ನಡುವೆಯೂ ನಾಳೆ ಬೆಳಿಗ್ಗೆ 8 ಘಂಟೆಯಿಂದ ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಬೆಂ-ಮೈ ಹೆದ್ದಾರಿ: ಬೆಂಗಳೂರು- ನಿಡಗಟ್ಟದವರೆಗೂ ಟೋಲ್ ಸಂಗ್ರಹ, ಪ್ರತಾಪ್ ಸಿಂಹ
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕದ ವಿವರ
ವಾಹನಗಳು ಏಕಮುಖ ಸಂಚಾರ = ಅದೇ ದಿನ ವಾಪಸ್ = ಟೋಲ್ ಪ್ಲಾಜಾ ಜಿಲ್ಲೆಯ ವಾಹನ= ಒಂದು ತಿಂಗಳ 50 ಸಂಚಾರಕ್ಕೆ ಪಾಸ್
ಕಾರು/ಜೀಪು/ವ್ಯಾನ್ 135 ರೂ. 205 ರೂ. 70 ರೂ. 4,525 ರೂ.
ಲಘು ಗೂಡ್ಸ್ ವಾಹನ/ ಮಿನಿ ಬಸ್ 220 ರೂ. 330 ರೂ. 110 ರೂ. 7,315 ರೂ.
ಬಸ್/ 2 ಆಕ್ಸಲ್ ಟ್ರಕ್ 460 ರೂ. 690 ರೂ. 230 ರೂ. 15,325 ರೂ.
3 ಆಕ್ಸೆಲ್ ವಾಣಿಜ್ಯ ವಾಹನ 500 ರೂ. 750 ರೂ. 250 ರೂ. 16,715 ರೂ.
ಭಾರೀ ನಿರ್ಮಾಣ ಯಂತ್ರ (4-6 ಆಕ್ಸಲ್) 720 ರೂ. 1080 ರೂ. 360 ರೂ. 24,030 ರೂ.
ಅತಿಗಾತ್ರದ ವಾಹನ (7ಕ್ಕಿಂತ ಅಧಿಕ ಆಕ್ಸಲ್) 880 ರೂ. 1,315 ರೂ. 440 ರೂ. 29,255 ರೂ.