ಬೆಂಗಳೂರಿನ ವೀಕೆಂಡ್‌ ಒಂಟಿತನ ಕಳೆಯಲು ಆಟೋ ಡ್ರೈವರ್‌ ಆದ ಟೆಕ್ಕಿ!

By Gowthami KFirst Published Jul 22, 2024, 4:22 PM IST
Highlights

 ಬೆಂಗಳೂರಿನ ಮೈಕ್ರೋಸಾಫ್ಟ್ ಇಂಜಿನಿಯರ್ ಒಬ್ಬರು ತಮ್ಮ ಒಂಟಿತನವನ್ನು ಕಳೆಯಲು ವಾರಾಂತ್ಯದಲ್ಲಿ ಆಟೋ ರಿಕ್ಷಾವನ್ನು ಓಡಿಸುತ್ತಿದ್ದಾರೆ.

ಇದೊಂದು ಅಚ್ಚರಿಯೇ ಸರಿ. ವಾರವಿಡೀ ಕೆಲಸ ಮಾಡಿ ಸುಸ್ತಾಗಿರುವವರು ವೀಕೆಂಡ್   ಬಂತು ಅಂದರೆ ಫ್ರೆಂಡ್ಸ್, ಪಬ್, ಪಾರ್ಟಿ, ಟ್ರಾವೆಲ್ ಅಂತ ತಮ್ಮ ರಜಾ ದಿನಗಳನ್ನು ಮೋಜು ಮಿಸ್ತಿಯಲ್ಲಿ ಕಳೆಯುತ್ತಾರೆ. ಆದರೆ  ಬೆಂಗಳೂರಿನ ಮೈಕ್ರೋಸಾಫ್ಟ್ ಇಂಜಿನಿಯರ್ ಒಬ್ಬರು ತಮ್ಮ ಒಂಟಿತನವನ್ನು ಕಳೆಯಲು ವಾರಾಂತ್ಯದಲ್ಲಿ ಆಟೋ ರಿಕ್ಷಾವನ್ನು ಓಡಿಸುತ್ತಿದ್ದಾರೆ. ಹೌದು ಈ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ಟೆಕ್ಕಿ ಆಟೋ ಓಡಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

ಗ್ಯಾಸ್‌ ಗೀಸರ್‌ ವಿಷಾನಿಲ ಸೋರಿಕೆ, ಬಾತ್‌ ರೂಂನಲ್ಲಿ ಉಸಿರು ಕಟ್ಟಿ ತಾಯಿ-ಮಗ ಸಾವು!

Latest Videos

ಈ ಹಿಂದಿನ ಟ್ವಿಟ್ಟರ್ ಈಗಿನ ಎಕ್ಸ್ ಖಾತೆಯಲ್ಲಿ ವೆಂಕಟೇಶ್ ಗುಪ್ತಾ ಎಂಬ ಟೆಕ್ಕಿ ಬರೆದುಕೊಂಡಿದ್ದು, ವಾರಾಂತ್ಯದಲ್ಲಿ ಒಂಟಿತನವನ್ನು ಕಳೆಯಲು  ನಮ್ಮ ಯಾತ್ರಿ ಆಟೋ ಚಾಲನೆ ಮಾಡುತ್ತಿರುವ ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುತ್ತಿರುವ  35 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅವರನ್ನು ಕೋರಮಂಗಲದಲ್ಲಿ ಭೇಟಿಯಾದೆ ಎಂದು ಫೋಟೋ ಹಾಕಿ ಬರೆದುಕೊಂಡಿದ್ದಾರೆ. 

ಆಟೋ ರಿಕ್ಷಾದೊಳಗೆ ಆ ವ್ಯಕ್ತಿ ಮೈಕ್ರೋಸಾಫ್ಟ್ ಜಾಕೆಟ್‌ ಧರಿಸಿರುವುದು ಕಂಡುಬಂದಿದೆ. ಕೆಲವು ಬಳಕೆದಾರರು ಮನುಷ್ಯನ ಒಂಟಿತನದ ಬಗ್ಗೆ ಸಹಾನುಭೂತಿ ಹೊಂದಿದ್ದರೂ, ಇತರರು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ತರಹೇವಾರಿ ಕಮೆಂಟ್‌ಗಳು ಬಂದಿದ್ದು, ಅಂಕಿತ್ ಶ್ರೀವಾಸ್ತವ ಎಂಬ ಟೆಕ್ಕಿ  "ಇದು ನಿಜವಾಗಿದ್ದರೆ ಕೇವಲ ದುಃಖಕರ ವಿಷ್ಯ ಎಂದು ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ರೌಡಿ ಶೀಟರ್‌ಗಳ ರೀಲ್ಸ್ , ಅಪ್ರಾಪ್ತರೇ ಟಾರ್ಗೆಟ್‌, 60ಕ್ಕೂ ಹೆಚ್ಚು ಅಕೌಂಟ್‌ ಪತ್ತೆ!

ಈ ನಡುವೆ ಭಾಷಾ ವಿವಾದವೂ ಚರ್ಚೆಗೆ ಗ್ರಾಸವಾಗಿದೆ. ಮೂರನೇ ಬಳಕೆದಾರರು ತಮಾಷೆಯಾಗಿ ಬರೆದಿದ್ದು, "50% ಕ್ಕಿಂತ ಹೆಚ್ಚು ಜನರು ಹೊರಗಿನವರಾಗಿರುವ  ಬೆಂಗಳೂರಿನಲ್ಲಿ ನೀವು ಒಂದೇ ಭಾಷೆಯನ್ನು ಮಾತನಾಡುವಾಗ ಇಂತಹುದೆಲ್ಲ ಸಂಭವಿಸುತ್ತದೆ ಎಂದಿದ್ದಾರೆ.

ಇನ್ನು ಟೆಕ್ಕಿಗಳು, ಬೈಕ್, ಟ್ಯಾಕ್ಸಿ ಮತ್ತು ಆಟೋ ಚಾಲಕರಾಗಿರುವುದು  ಬೆಂಗಳೂರಿನಲ್ಲಿ ಹೊಸ ವಿಷಯವಲ್ಲ. ಹಲವು ಟೆಕ್ಕಿಗಳು ಈ ರೀತಿಯ ಕೆಲಸ ಮಾಡಿಕೊಂಡು ಹೆಚ್ಚುವರಿಯಾಗಿ ಹಣ ಗಳಿಸುತ್ತಿರುವುದು ಮಾಮೂಲಿಯಾಗಿದೆ.

ಈ ಹಿಂದೆ, ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (ಎಚ್‌ಸಿಎಲ್) ನಲ್ಲಿ ಉದ್ಯೋಗಿಯಾಗಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು  ರಾಪಿಡೋ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದರು. ಯಾಕೆಂದರೆ  ತನ್ನ ಹಿಂದಿನ ಕೆಲಸವನ್ನು ಕಳೆದುಕೊಂಡಿದ್ದರು. ಹೀಗಾಗಿ ಟ್ಯಾಕ್ಸಿ ಡ್ರೈವರ್ ಆದರೆ ಅನೇಕ ಟೆಕ್ಕಿಗಳನ್ನು ಭೇಟಿಯಾಗಿ ಅವರ ಕಂಪೆನಿಯಲ್ಲಿ ಜಾವಾ ಡೆವಲಪರ್‌ನಲ್ಲಿ ಉನ್ನತ ಹುದ್ದೆ ಪಡೆಯಲು ಸಹಾಯವಾಗುತ್ತದೆ ಎಂಬುದು ಆತನ ಯೋಚನೆಯಾಗಿತ್ತು.

click me!