ದೇಶದಲ್ಲೇ ದುಬಾರಿ ನಮ್ಮ ಬೆಂಗಳೂರು ಮೆಟ್ರೋ! ದೇಶದ ಇತರ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?

Published : Feb 07, 2026, 05:34 PM IST
bengaluru metro

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಟಿಕೆಟ್ ದರಗಳನ್ನು ಏರಿಸಿದ್ದು, ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ ಸೇವೆಯಾಗಿದೆ ಎಂಬ ಚರ್ಚೆ ಹುಟ್ಟುಹಾಕಿದೆ. ದೆಹಲಿ, ಮುಂಬೈ, ಕೋಲ್ಕತ್ತಾದಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗರಿಷ್ಠ ದರಕ್ಕೆ ತಲುಪಿದೆ.

ಬೆಂಗಳೂರು: ದಿನನಿತ್ಯ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ನಮ್ಮ ಮೆಟ್ರೋ (ನಮ್ಮ ಮೆಟ್ರೋ ರೈಲು) ಈಗ ದೇಶದಲ್ಲೇ ಅತೀ ದುಬಾರಿ ಮೆಟ್ರೋ ಸೇವೆಯಾಗಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)  ಟಿಕೆಟ್ ದರ ಏರಿಕೆಗೆ ಮುಂದಾಗಿರುವ ಚರ್ಚೆಯ ಮಧ್ಯೆ ಜನ ಸಾಮಾನ್ಯರ ಕೋಪಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಫೆಬ್ರವರಿ 9ರಿಂದ ಜಾರಿಗೆ ಬಂದ ಹೊಸ ದರ

ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಬಹುತೇಕ ಎಲ್ಲ ದೂರಗಳಲ್ಲೂ ಹೆಚ್ಚಿಸಲಾಗಿದೆ. ಈ ಹಿಂದೆ ಇದ್ದ ದರಕ್ಕೆ ಹೋಲಿಸಿದರೆ 1ರಿಂದ 5 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ಹೊಸ ಟಿಕೆಟ್ ದರ ವಿವರ

0–2 ಕಿ.ಮೀ: ₹10 ➝ ₹11

2–4 ಕಿ.ಮೀ: ₹20 ➝ ₹21

4–6 ಕಿ.ಮೀ: ₹30 ➝ ₹32

6–8 ಕಿ.ಮೀ: ₹40 ➝ ₹42

8–10 ಕಿ.ಮೀ: ₹50 ➝ ₹53

10–15 ಕಿ.ಮೀ: ₹60 ➝ ₹63

15–20 ಕಿ.ಮೀ: ₹70 ➝ ₹74

ಇದುವರೆಗೆ ಗರಿಷ್ಠ ಪ್ರಯಾಣ ದರ ₹90 ಆಗಿದ್ದರೆ, ಫೆಬ್ರವರಿ 9ರಿಂದ ₹95ಕ್ಕೆ ಏರಿಸಲಾಗಿದೆ. ಈ ಮೂಲಕ ಬೆಂಗಳೂರು ಮೆಟ್ರೋ ದೇಶದಲ್ಲೇ ಅತೀ ಹೆಚ್ಚು ದರ ಹೊಂದಿರುವ ಮೆಟ್ರೋ ಎಂಬ ಸ್ಥಾನಕ್ಕೆ ತಲುಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇತರೆ ರಾಜ್ಯಗಳ ಮೆಟ್ರೋ ದರಗಳೊಂದಿಗೆ ಹೋಲಿಕೆ

ದೆಹಲಿ ಮೆಟ್ರೋ

ದೇಶದ ಅತೀ ದೊಡ್ಡ ಹಾಗೂ ವಿಸ್ತೃತ ಮೆಟ್ರೋ ಜಾಲ ಹೊಂದಿರುವ ದೆಹಲಿ ಮೆಟ್ರೋ, 394 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ನೆಟ್‌ವರ್ಕ್ ಹೊಂದಿದೆ.

ಗರಿಷ್ಠ ಟಿಕೆಟ್ ದರ: ₹64

32 ಕಿ.ಮೀ.ಗಿಂತ ಹೆಚ್ಚು ದೂರದ ಪ್ರಯಾಣಕ್ಕೂ ಇದೇ ಗರಿಷ್ಠ ದರ

ಮುಂಬೈ ಮೆಟ್ರೋ

ಸುಮಾರು 80 ಕಿಲೋಮೀಟರ್ ಮೆಟ್ರೋ ಜಾಲ ಹೊಂದಿರುವ ಮುಂಬೈ ಮೆಟ್ರೋದಲ್ಲಿ

ಗರಿಷ್ಠ ದರ: ₹80

42 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣ ಸಾಧ್ಯ

ಹೈದರಾಬಾದ್ ಮೆಟ್ರೋ

ಆಧುನಿಕ ಸೌಲಭ್ಯಗಳಿಗೆ ಹೆಸರಾದ ಹೈದರಾಬಾದ್ ಮೆಟ್ರೋದಲ್ಲಿ

ಗರಿಷ್ಠ ಪ್ರಯಾಣ ದರ: ₹69

ಕೋಲ್ಕತ್ತಾ ಮೆಟ್ರೋ

ದೇಶದಲ್ಲೇ ಮೊದಲಿಗೆ ಆರಂಭವಾದ ಮೆಟ್ರೋ ವ್ಯವಸ್ಥೆಯಾದ ಕೋಲ್ಕತ್ತಾ ಮೆಟ್ರೋದಲ್ಲಿ

ಗರಿಷ್ಠ ದರ ಕೇವಲ ₹50

ಅತೀ ಕಡಿಮೆ ಮೆಟ್ರೋ ದರ ಯಾವ ನಗರದಲ್ಲಿದೆ?

ಹೋಲಿಕೆ ಮಾಡಿದರೆ, ಕೋಲ್ಕತ್ತಾ ಮೆಟ್ರೋ ದೇಶದಲ್ಲೇ ಅತೀ ಕಡಿಮೆ ಟಿಕೆಟ್ ದರ ಹೊಂದಿರುವ ಮೆಟ್ರೋ ವ್ಯವಸ್ಥೆಯಾಗಿದೆ. ಇತ್ತ ಬೆಂಗಳೂರು ಮೆಟ್ರೋ, ಕಡಿಮೆ ದೂರಕ್ಕೂ ಹೆಚ್ಚು ದರ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮೆಟ್ರೋ ದರ ಏರಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಮೆಟ್ರೋ ಸಾಮಾನ್ಯರ ಕೈಗೆಟುಕದ ಸೇವೆಯಾಗುತ್ತಿದೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ದುಬಾರಿ. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಬೇಕಾದರೆ ದರ ಇಳಿಸಬೇಕು ಎಂಬ ಆಕ್ರೋಶದ ಧ್ವನಿಗಳು ಕೇಳಿಬರುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Namma Metro fare hike: 'ಸುಳ್ಳು ಹೇಳೋಕೆ ನಾಚಿಕೆ ಆಗೋಲ್ವಾ? ಏನು ತಿಂತೀರಿ?' ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿ
Raichur Utsava 2026: ರಾಯಚೂರು ಉತ್ಸವದಲ್ಲಿ ಗ್ಯಾರೆಂಟಿ ಸಮಾವೇಶ; ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಕೃಷಿಮೇಳ!