ಕಾಮಗಾರಿ ಹಿನ್ನಲೆಯಲ್ಲಿ ನ.2 ರಿಂದ ಬೆಂಗಳೂರು-ಮಂಗಳೂರು ಹಲವು ರೈಲು ಸಂಚಾರ ರದ್ದು

Published : Oct 24, 2025, 09:07 PM IST
Indian Railways

ಸಾರಾಂಶ

ಕಾಮಗಾರಿ ಹಿನ್ನಲೆಯಲ್ಲಿ ನ.2 ರಿಂದ ಬೆಂಗಳೂರು-ಮಂಗಳೂರು ಹಲವು ರೈಲು ಸಂಚಾರ ರದ್ದು ಮಾಡಲಾಗಿದೆ. ಸರಿಸುಮಾರು ಒಂದೂವರೆ ತಿಂಗಳು ದಿನಗಳ ಕಾಲ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆಗಳು ರದ್ದಾಗುತ್ತಿದೆ. ಯಾವ ರೈಲು ಸೇವೆ ರದ್ದಾಗಿದೆ?

ಬೆಂಗಳೂರು (ಅ.24) ಬೆಂಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ರೈಲು ಮಾರ್ಗ ಪ್ರತಿದಿನ ತುಂಬಿ ತುಳುಕುತ್ತಿದೆ. ಇತ್ತ ರಸ್ತೆ ಪ್ರಯಾಣ ದುಸ್ತರವಾಗಿರುವ ಕಾರಣ ಬಹುತೇಕರು ರೈಲು ಮಾರ್ಗವನ್ನೇ ಆಶ್ರಯಿಸಿದ್ದಾರೆ.ಆದರೆ ಇದೀಗ ಸಕಲೇಶಪುರ ಹಾಗೂ ಸುಬ್ರಹ್ಮಣ್ ರೋಡ್ ಘಾಟ್ ಸೆಕ್ಷನ್‌ನಲ್ಲಿ ರೈಲ್ವೇ ಕಾಮಗಾರಿ ಆರಂಭಗೊಳ್ಳುತ್ತಿದೆ. ಈ ಭಾಗದಲ್ಲಿ ರೈಲ್ವೇ ವಿದ್ಯುದ್ದೀಕರಣ ಕಾಮಗಾರಿ ನವೆಂಬರ್ 2 ರಿಂದ ಆರಂಭಗೊಳ್ಳುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸೇವೆ ರದ್ದಾಗುತ್ತಿದೆ. ಈ ಕುರಿತು ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.

ಯಾವಾಗ ರೈಲು ಸಂಚಾರಗಳು ರದ್ದು

ರೈಲ್ವೇ ವಿದ್ಯುದ್ದೀಕರಣ ಕಾಮಗಾರಿ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ನವೆಂಬರ್ 2 ರಿಂದ ಕಾಮಗಾರಿ ಆರಂಭಗೊಳ್ಳಲಿದೆ. ಡಿಸೆಂಬರ್ 15ರ ವರೆಗೆ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಸಮಯದಲ್ಲಿ ಹಲವು ರೈಲು ಸಂಚಾರ ರದ್ದಾಗುತ್ತಿದೆ. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆರೆದುಕೊಳ್ಳಲಿದೆ.

ಯಾವ ರೈಲು ಸೇವೆ ರದ್ದು?

1. ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 08.11.2025 ರಿಂದ 13.12.2025 ರವರೆಗೆ ರದ್ದುಗೊಳ್ಳಲಿದೆ.

2. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು ಮೊದಲು 02.11.2025 ರವರೆಗೆ ರದ್ದುಗೊಂಡಿತ್ತು. ಈಗ 09.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.

3. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈನ್-ವೀಕ್ಲಿ ಎಕ್ಸ್'ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 02.11.2025 ರಿಂದ 14.12.2025 ರವರೆಗೆ ರದ್ದುಗೊಳ್ಳಲಿದೆ.

4. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್'ಪ್ರೆಸ್ ಮೊದಲು 30.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.

5. ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್'ಪ್ರೆಸ್ ಮೊದಲು 31.10.2025 ರವರೆಗೆ ರದ್ದುಗೊಂಡಿತ್ತು. ಈಗ 03.11.2025 ರಿಂದ 15.12.2025 ರವರೆಗೆ ರದ್ದುಗೊಳ್ಳಲಿದೆ.

6. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್'ಪ್ರೆಸ್ ಮೊದಲು 01.11.2025 ರವರೆಗೆ ರದ್ದುಗೊಂಡಿತ್ತು. ಈಗ 04.11.2025 ರಿಂದ 16.12.2025 ರವರೆಗೆ ರದ್ದುಗೊಳ್ಳಲಿದೆ.

ಮಂಗಳೂರು-ಬೆಂಗಳೂರು ಬೆಳಗಿನ ರೈಲು ರದ್ದು ವಿಸ್ತರಣೆ

ಭಾರಿ ಮಳೆಯ ಕಾರಣ ರದ್ದಾಗಿದ್ದ ಮಂಗಳೂರು ಬೆಂಗಳೂರು ಬೆಳಗಿನ ರೈಲುಗಳ ರದ್ದು ನಿರ್ಧಾರವನ್ನು ಕಳೆದ ತಿಂಗಳು ವಿಸ್ತರಣೆ ಮಾಡಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಹಿನ್ನಲೆಯಲ್ಲಿ ಈ ರೈಲು ಸಂಚಾರವನ್ನು ಡಿಸೆಂಬರ್ 16ರ ವರೆಗೆ ರದ್ದು ಮಾಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌