ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್

Published : Jun 16, 2026, 10:43 PM ISTUpdated : Jun 16, 2026, 11:01 PM IST
Bengaluru Live In Relationship Case Ends

ಸಾರಾಂಶ

ಇನ್‌ಸ್ಟಾದಲ್ಲಿ ಪರಿಚಯವಾಗಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಯಿತು. ಇಬ್ಬರದ್ದೂ ಒಂದೇ ಊರು. ಹೀಗಾಗಿ ಬೇಗನೆ ಆತ್ಮೀಯರಾಗಿದ್ದಾರೆ. 6 ತಿಂಗಳಿನಿಂದ ಒಟ್ಟಿಗೆ ವಾಸವಿದ್ದಾರೆ. ಇದೀಗ 20ರ ಹರೆಯದ ಯುವತಿಯನ್ನು ಕೊಲೆ ಮಾಡಲಾಗಿದೆ.

ಬೆಂಗಳೂರು (ಜೂ.16) ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಹೊಸದೇನಲ್ಲ. ಇದೇ ವೇಳೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ನಡೆಯುತ್ತಿರುವ ಹತ್ಯೆ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ 20ರ ಯುವಿತಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡದಿದೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಬಳಿಕ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ ನಡುವೆ ಕೆಲ ವಿಚಾರಗಳಲ್ಲಿ ಜಗಳವಾಗಿದೆ. ಪರಿಣಾಮ ಆರೋಪಿ 25ರ ಹರೆಯದ ಶರತ್ ಕತ್ತು ಹಿಸುಕಿ ಯುವತಿ ಅನುಷಾ ಕೊಲೆ ಮಾಡಿದ್ದಾನೆ.

ಇನ್‌ಸ್ಟಾದಿಂದ ಪರಿಚಯ, ಅಷ್ಟೇ ಬೇಗ ಲೀವ್ ಇನ್ ರಿಲೇಶನ್‌ಶಿಪ್

25ರ ಹರೆಯದ ಶರತ್ ಹಾಗೂ 20ರ ಹರೆಯದ ಅನುಷಾ ಇಬ್ಬರು ಹಾಸನದ ಸಕಲೇಶಪುರ ಮೂಲದವರು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಫ್ರಂ ಸಕಲೇಶಪುರ ಎಂದು ಬಯೋದಲ್ಲಿ ಹಾಕಲಾಗಿತ್ತು. ಅರೇ ನಮ್ಮೂರ ಹುಡುಗಿ ಎಂದು ಶರತ್ ಉತ್ಸಾಹ ಇಮ್ಮಡಿಯಾದರೆ, ಇತ್ತ ನಮ್ಮರ ಹುಡುಗ ಎಂದು ಅನೂಷ ಹಿರಿ ಹಿರಿ ಹಿಗ್ಗಿದ್ದಾಳೆ. ನಮ್ಮೂರು ನಿಮ್ಮೂರು ಒಂದೇ ಊರು, ನಾವಿಬ್ಬರು ಒಂದೇ ಸೂರಲ್ಲಿ ಇರಬೇಕು ಎಂದು  ಲೀವ್ ಇನ್ ರಿಲೇಶನ್‌ಶಿಪ್‌ಗೆ ಒಕೆ ಎಂದಿದ್ದಾರೆ. ಮಲ್ಲೇಶ್ವರಂನಲ್ಲಿ ಮನೆ ಮಾಡಿ ಇಬ್ಬರು ಒಟ್ಟಿಗೆ ಇದ್ದರು. ಕಳೆದ 6 ತಿಂಗಳಿನಿಂದ ಜೊತೆಯಾಗಿ ವಾಸಿಸುತ್ತಿದ್ದರು. 

ಶನಿವಾರ ರಾತ್ರಿ ಮಲ್ಲೇಶ್ವರಂನ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡ್ತಿದ್ದ ಶರತ್ ಹಾಗೂ ಲೀವ್ ಇನ್ ಗೆಳತಿ ಅನುಷಾ ನಡುವೆ ಮನಸ್ತಾಪ ತೀವ್ರಗೊಂಡಿದೆ. ಜಗಳ ತೀವ್ರವಾಗುತ್ತಿದ್ದಂತೆ ಶರತ್, ಕತ್ತು ಹಿಸುಕಿ ಅನೂಷ ಹತ್ಯೆ ಮಾಡಿದ್ದಾನೆ. ಶನಿವಾರ ಕೊಲೈಗೆದು ಅಂದು ರಾತ್ರಿ ಇಡೀ ಏನು ಮಾಡಲಿ ಎಂದು ಯೋಚಿಸಿದ್ದಾನೆ. ರಾತ್ರೋರಾತ್ರಿ ಕೋಣೆಯಲ್ಲೇ ಮೃತದೇಹ ಬಿಟ್ಟು ಪರಾರಿಯಾಗಿದ್ದಾನೆ.

ಭಾನುವಾರ ಇಡೀ ಯೋಚನೆ ಮಾಡಿ ಯಾವುದೇ ಐಡಿಯಾ ಹೊಳೆಯಲಿಲ್ಲ. ಹೀಗಾಗಿ ಸೋಮವಾರ ವಕೀಲರೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅನುಷಾ ಮೃತದೇಹ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶರತ್ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಅಷ್ಟೇ ವೇಗದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿ ತನಿಖೆ ತೀವ್ರಗೊಳಿಸಿದ್ದಾರೆ. ಯುವತಿ ಅನೂಷಾ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್