ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿ 'ತೇಜಸ್ವಿ' ಲೋಕದ ಅನಾವರಣ, ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

Published : Jan 01, 2026, 07:22 PM IST
Lalnbag flower Show Purnachandra Tejasvi

ಸಾರಾಂಶ

2026ರ ಲಾಲ್‌ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಸಂಪೂರ್ಣ ಮಾಹಿತಿ. ಪೂರ್ಣಚಂದ್ರ ತೇಜಸ್ವಿ ಕುರಿತ ವಿಶೇಷ ಪ್ರದರ್ಶನದ ದಿನಾಂಕ, ಸ್ಪರ್ಧೆಯ ವಿವರಗಳನ್ನು ತಿಳಿಯಲು ಕ್ಲಿಕ್ ಮಾಡಿ.

ಬೆಂಗಳೂರು (ಜ.01): ಉದ್ಯಾನನಗರಿ ಬೆಂಗಳೂರಿನ ಹೆಮ್ಮೆಯ ಲಾಲ್‌ಬಾಗ್‌ನಲ್ಲಿ 2026ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುವ 219ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಜನವರಿ 15 ರಿಂದ 26 ರವರೆಗೆ ನಡೆಯಲಿರುವ ಈ ಬಾರಿಯ ಪುಷ್ಪ ಪ್ರದರ್ಶನವು ಕನ್ನಡದ ಖ್ಯಾತ ಸಾಹಿತಿ, ಚಿಂತಕ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಸಾಹಿತ್ಯದ ಚಿತ್ರಣವನ್ನು ಬಿಂಬಿಸಲಿದೆ.

ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ವಿವಿಧ ಉದ್ಯಾನವನಗಳು, ತೋಟಗಳು, ತಾರಸಿ/ ಕೈತೋಟಗಳು, ತರಕಾರಿ/ ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2026 ರ ಜನವರಿ 17 ರಂದು ಹಮ್ಮಿಕೊಳ್ಳಲಾಗಿದೆ.

ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು / ಪ್ರದರ್ಶಕರಿಂದ ಅರ್ಜಿಗಳನ್ನು 2026 ಜನವರಿ 5 ರಿಂದ 12 ರವರೆಗೆ ಸ್ವೀಕರಿಸಲಾಗುವುದು. ತೋಟಗಾರಿಕಾ ಅಪರ ನಿರ್ದೇಶಕರು (ತಾಳೆಬೆಳೆ) ಲಾಲ್ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾರಕೇಶ್ವರಿ ಕೆ.ಆರ್ ಅವರನ್ನು 8497048733 ಮೂಲಕ ಹಾಗೂ ಪುಷ್ಪಲತಾ ಎಂ. ಅವರನ್ನು 8904592122 ಮೂಲಕ ಸಂಪರ್ಕಿಸಬಹುದು.

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

ಇಕೆಬಾನ ಮತ್ತು ಪೂರಕ ಕಲೆಗಳು: ಅರ್ಜಿ ಸಲ್ಲಿಕೆ ಜನವರಿ 5 ರಿಂದ 12 ರವರೆಗೆ. ತೋಟಗಾರಿಕಾ ಅಪರ ನಿರ್ದೇಶಕರ ಕಚೇರಿ (ತಾಳೆಬೆಳೆ), ಲಾಲ್‌ಬಾಗ್‌ನಲ್ಲಿ ಅರ್ಜಿ ಲಭ್ಯವಿರುತ್ತದೆ. ಮಾಹಿತಿಗಾಗಿ: 8497048733 / 8904592122.

ತೋಟಗಳು ಮತ್ತು ಕುಂಡಗಳ ಸ್ಪರ್ಧೆ: ಅರ್ಜಿ ಸಲ್ಲಿಕೆ ಜನವರಿ 2 ರಿಂದ 9 ರವರೆಗೆ. ತೋಟಗಾರಿಕಾ ಅಪರ ನಿರ್ದೇಶಕರ ಕಚೇರಿ (ತೋಟದ ಬೆಳೆಗಳು), ಲಾಲ್‌ಬಾಗ್‌ನಲ್ಲಿ ಅರ್ಜಿ ಪಡೆಯಬಹುದು. ಮಾಹಿತಿಗಾಗಿ: 9845549545 / 9886819217.

ಇಲಾಖಾ ಮಳಿಗೆಗಳ ಹಂಚಿಕೆ: ಜನವರಿ 2 ರಿಂದ 6 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಾರ್ಯನಿರ್ವಾಹಕ ನಿರ್ದೇಶಕರು (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಕಚೇರಿಯಿಂದ ಅರ್ಜಿ ಪಡೆಯಬಹುದು. ಮಾಹಿತಿಗಾಗಿ: 9036986445 / 8050592016.

ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಈ ಫಲಪುಷ್ಪ ಪ್ರದರ್ಶನವು ಈ ಬಾರಿ ತೇಜಸ್ವಿ ಅವರ ಪ್ರಕೃತಿ ಪ್ರೇಮವನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಿದೆ ಎಂದು ಲಾಲ್‌ಬಾಗ್ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಂಜೋ ಕಚೇರಿಗಳಲ್ಲಿ ಇಡಿ ಶೋಧ, ₹190 ಕೋಟಿ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಎಫ್‌ಡಿಆರ್‌, ಮ್ಯೂಚುವಲ್ ಫಂಡ್‌ ಫ್ರೀಜ್!
ಬೆಂಗಳೂರು ನಗರ ವಿವಿಯಲ್ಲಿ ಬಿಕಾಂ ಪ್ರಶ್ನೆಪತ್ರಿಕೆ ಲೀಕ್; ಪರೀಕ್ಷೆಗೂ ಮೊದಲೇ ವಾಟ್ಸಾಪ್‌ನಲ್ಲಿ ಹರಿದಾಡಿತು ಉತ್ತರ!