ಲಾಲ್‌ಬಾಗ್‌ನಲ್ಲಿ ಫೋಟೋಶೂಟ್‌, ಚಿತ್ರೀಕರಣ, ರೀಲ್ಸ್ ಶೀಘ್ರದಲ್ಲೇ ನಿಷೇಧ!

Published : Jun 15, 2025, 08:35 PM IST
Lalbagh Botanical Garden

ಸಾರಾಂಶ

ಲಾಲ್‌ಬಾಗ್‌ನಲ್ಲಿ ಮದುವೆ, ಫೋಟೋಶೂಟ್‌ಗಳು ಮತ್ತು ವಾಣಿಜ್ಯ ಚಿತ್ರೀಕರಣಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆ ಪರಿಗಣಿಸುತ್ತಿದೆ. ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಕಬ್ಬನ್ ಪಾರ್ಕ್‌ನಲ್ಲಿ ಮದುವೆ ಹಾಗೂ ಚಲನಚಿತ್ರ ಚಿತ್ರೀಕರಣವನ್ನು ನಿಷೇಧಿಸಿದ ನಂತರ, ಈಗ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಬೋಟಾನಿಕಲ್ ಗಾರ್ಡನ್‌ ಸಹ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸುವ ಕಾಲ ಹತ್ತಿರದಲ್ಲೇ ಇದೆ. ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ದಲ್ಲಿ ಮದುವೆ ಮೊದಲು ಹಾಗೂ ನಂತರದ ಫೋಟೋಶೂಟ್, ಬೇಬಿ ಮತ್ತು ಮಾಡೆಲಿಂಗ್ ಪೋರ್ಟ್‌ಫೋಲಿಯೊಗಳು, ಇನ್‌ಸ್ಟಾಗ್ರಾಂ ರೀಲ್‌ಗಳು ಮತ್ತು ಇತರ ವಾಣಿಜ್ಯ ಚಿತ್ರೀಕರಣಗಳಿಗೆ ನಿಷೇಧ ತರಲಿರುವ ಪ್ರಸ್ತಾವನೆಯನ್ನು ತಯಾರಿಸುವ ಅಂತಿಮ ಹಂತದಲ್ಲಿದೆ.

ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ

"ನಾವು ಸಾರ್ವಜನಿಕರಿಗೆ ಆನಂದ ಪಡೆಯುವ ಹಕ್ಕನ್ನು ನಿರಾಕರಿಸಲು ಉದ್ದೇಶಿಸುತ್ತಿಲ್ಲ. ಆದರೆ ಲಾಲ್‌ಬಾಗ್‌ ಸಸ್ಯ ಸಂಪತ್ತು ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ದೃಷ್ಟಿಯಿಂದ ಇದು ಅಗತ್ಯವಾಗಿದೆ," ಎಂದು ಹಿರಿಯ ತೋಟಗಾರಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಟಿಓಐ ವರಿ ಮಾಡಿದೆ.

ತಜ್ಞರ ಸಮಿತಿಯಿಂದ ಶಿಫಾರಸುಗಳು

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ (ಉದ್ಯಾನಗಳು ಮತ್ತು ಉದ್ಯಾನವನಗಳು) ಎಂ. ಜಗದೀಶ್ ಅವರ ಪ್ರಕಾರ, "ಅಧಿಕೃತ ಪ್ರಸ್ತಾವನೆಯನ್ನು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರೂಪಿಸಲಾಗುತ್ತಿದೆ. ಕಬ್ಬನ್ ಪಾರ್ಕ್‌ಗೆ ಜಾರಿಗೆ ತಂದ ನಿಯಮಾವಳಿಗಳನ್ನು ಲಾಲ್‌ಬಾಗ್‌ಗೂ ವಿಸ್ತರಿಸಲಾಗುತ್ತದೆ" ಎಂದಿದ್ದಾರೆ. ಈ ತಜ್ಞ ಸಮಿತಿಗೆ ಮಾಜಿ ಐಎಫ್‌ಎಸ್ ಅಧಿಕಾರಿ ಹಾಗೂ ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ನೇತೃತ್ವ ವಹಿಸಿಕೊಂಡಿದ್ದಾರೆ.

ಜೀವವೈವಿಧ್ಯಕ್ಕೆ ಹಾನಿ ಮಾಡುವ ಚಟುವಟಿಕೆಗಳು

ಮದುವೆ ಚಿತ್ರೀಕರಣ ಅಥವಾ ಮಾಡೆಲಿಂಗ್ ಶೂಟ್‌ಗಳಲ್ಲಿ ಬಳಸುವ ಹೆಚ್ಚಿನ ಶಬ್ದ, ಕೃತಕ ಬೆಳಕುಗಳು  ಗಾರ್ಡನ್‌ ನಲ್ಲಿ ಗೂಡು ಕಟ್ಟಿಕೊಂಡಿರುವ ಜೇನುಗೂಡುಗಳಿಗೆ ಮತ್ತು ಗೂಡುಕಟ್ಟುವ ಪಕ್ಷಿಗಳಿಗೆ ತೊಂದರೆ ಉಂಟು ಮಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಜೇನುನೊಣ ಕಚ್ಚಿದ ಪ್ರಕರಣಗಳು ವರದಿಯಾಗಿವೆ.

ಅಶ್ಲೀಲ ಭಂಗಿಗಳು , ವಿಚಿತ್ರ ವರ್ತನೆಗಳು

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಭಂಗಿಗಳು, ಬಟ್ಟೆ ಬದಲಾವಣೆಗಳು, ಮರಗಳಿಗೆ ಹತ್ತುವುದು, ಹೂವಿನ ಹಾಸಿನ ಮೇಲೆ ನಿಲ್ಲುವುದು ಮೊದಲಾದ ಶಿಸ್ತು ಇಲ್ಲದ ಅಭ್ಯಾಸಗಳು ಕಂಡುಬರುತ್ತಿವೆ. ಇದು ಇತರ ಸಂದರ್ಶಕರಿಗೆ, ವಿಶೇಷವಾಗಿ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ತೊಂ.ದರೆ ಉಂಟುಮಾಡುತ್ತವೆ ಜೊತೆಗೆ  ಇದು ಸಸ್ಯಗಳು ಮತ್ತು ಮರಗಳಿಗೆ ಹಾನಿ ಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ