ಬೆಂಗ್ಳೂರಲ್ಲಿ ರಾಜ್ಯದ ಮೊದಲ Gen-Z ಪೋಸ್ಟ್ ಆಫೀಸ್! ಏನಿದರ ವಿಶೇಷತೆ?

Kannadaprabha News, Ravi Janekal |   | Kannada Prabha
Published : Dec 18, 2025, 07:59 AM IST
Bengaluru Gets Karnataka s First Gen Z Post Office Today

ಸಾರಾಂಶ

Karnataka s First Gen Z Post Office: ಬೆಂಗಳೂರಿನ ಅಚಿತ್‌ ನಗರದಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೆ ಕಚೇರಿ ಅನಾವರಣ. ವರ್ಕ್ ಕೆಫೆ ಶೈಲಿ, ಡಿಜಿಟಲ್‌ ಪಾವತಿ, ಮತ್ತು 'ಮೈ ಸ್ಟ್ಯಾಂಪ್' ಸೌಲಭ್ಯಗಳೊಂದಿಗೆ, ಈ ಕಚೇರಿಯು ಯುವ ಪೀಳಿಗೆಯನ್ನು ಆಕರ್ಷಿಸಲು ವಿದ್ಯಾರ್ಥಿಗಳಿಂದಲೇ ವಿನ್ಯಾಸಗೊಳಿಸಲ್ಪಟ್ಟಿದೆ.

ಬೆಂಗಳೂರು (ಡಿ.18): ಬಹುಹಿಂದೆ ಕೈಯಲ್ಲೊಂದು ಲಾಟೀನು, ಬಗಲಲ್ಲಿ ಟಪಾಲು ಚೀಲ ಹಿಡಿದು ಬರುತ್ತಿದ್ದ ಅಂಚೆಯಣ್ಣನ ಕಚೇರಿ ಈಗ ಜೆನ್‌ - ಝಿ ಕಾಲಕ್ಕೆ ತಿರುಗಿದೆ. ಬೆಂಗಳೂರಿನ ಅಚಿತ್‌ ನಗರದಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೆ ಕಚೇರಿ ಅನಾವರಣಗೊಂಡಿದೆ.

Gen-Z ಪೋಸ್ಟ್ ಆಫೀಸ್ ವಿಶೇಷತೆ ಏನು?

ವರ್ಕ್ ಕೆಫೆ ಶೈಲಿಯ ಆಂತರಿಕ ವಿನ್ಯಾಸ, ಡಿಜಿಟಲ್‌ ಪಾವತಿ, ಮೈ ಸ್ಟ್ಯಾಂಪ್‌ ಮೂಲಕ ನಮ್ಮದೇ ಭಾವಚಿತ್ರದ ಅಂಚೆ ಚೀಟಿ ಪಡೆವ ಸೌಲಭ್ಯ, ಓದಿಗೆ ಪುಸ್ತಕಗಳು... ಹೀಗೆ ಜನರೇಷನ್ ಝಡ್ ಪೀಳಿಗೆಯನ್ನು ಆಕರ್ಷಿಸುವ ಎಲ್ಲವನ್ನೂ ಒಳಗೊಂಡು ಅಂಚೆ ಕಚೇರಿ ಇದಾಗಿದೆ.

ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಸಾಂಪ್ರದಾಯಿಕ ಸ್ವರೂಪದಲ್ಲಿದ್ದ ಅಚಿತ್ ನಗರ ಅಂಚೆ ಕಚೇರಿಯನ್ನು ಹೀಗೆ ನವೀಕರಣ ಮಾಡಲಾಗಿದೆ. ಒಳವಿನ್ಯಾಸ, ಕಲೆಯನ್ನು ವಿದ್ಯಾರ್ಥಿಗಳಿಂದಲೇ ರೂಪಿಸಲಾಗಿದೆ.

ವರ್ಕ್ ಕೆಫೆ, ಪುಸ್ತಕ ಮತ್ತು ಬೋರ್ಡ್ ಆಟಗಳಿಂದ ತುಂಬಿದ ‘ಬುಕ್-ಬೂತ್‌’ ಹಾಗೂ ವಿದ್ಯಾರ್ಥಿಗಳಿಂದ ರಚಿಸಲಾದ ಕಲಾಕೃತಿಗಳನ್ನು ಇರಿಸಲಾಗಿದೆ. ಆಂತರಿಕ ವಿನ್ಯಾಸವು ವರ್ಕ್ ಕೆಫೆ ಶೈಲಿಯನ್ನು ಪ್ರತಿಬಿಂಬಿಸುವಂತಿದೆ. ಉಚಿತ ವೈ-ಫೈ, ಆರಾಮದಾಯಕ ಆಸನ ವ್ಯವಸ್ಥೆ, ಲ್ಯಾಪ್‌ಟಾಪ್, ಮೊಬೈಲ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌, ಕಾಫಿ ವೆಂಡಿಂಗ್ ಯಂತ್ರ ಒಳಗೊಂಡಿದೆ.

ಜೆನ್‌-ಝಿ ಡಿಐವೈ (Do-It-Yourself) ಪರಿಕಲ್ಪನೆ

ಜೆನ್‌-ಝಿ ಡಿಐವೈ (Do-It-Yourself) ಪರಿಕಲ್ಪನೆಯಲ್ಲಿ ಸ್ವಯಂ-ಬುಕಿಂಗ್ ಕಿಯೋಸ್ಕ್ ಮತ್ತು ಕ್ಯುಆರ್ ಕೋಡ್ ತ್ವರಿತ ಪಾವತಿ ಆಯ್ಕೆ, ಡಿಜಿಟಲ್ ಪಾವತಿ ಇದೆ. ಇಲ್ಲಿರುವ ‘ಮೈಸ್ಟ್ಯಾಂಪ್’ ಕೌಂಟರ್‌ನಲ್ಲಿ ತಮ್ಮದೇ ಭಾವಚಿತ್ರದ ಅಂಚೆಚೀಟಿಗಳನ್ನೂ ಪಡೆಯಬಹುದು.

ಈ ಕಚೇರಿಯನ್ನು ಬುಧವಾರ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಜೆನ್‌-ಝಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿ ಈ ಅಂಜೆ ಕಚೇರಿ ನಿರ್ಮಿಸಿದ್ದೇವೆ. ‘ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ’ ಎಂಬ ಈ ಉಪಕ್ರಮದ ಧ್ಯೇಯವಾಕ್ಯವನ್ನು ಅನುಸರಿಸಲಾಗಿದೆ. ಈ ಕ್ಯಾಂಪಸ್‌ನಲ್ಲಿ ಪಾರ್ಸೆಲ್ ಪ್ಯಾಕೇಜಿಂಗ್ ಸೇವೆಗಳನ್ನು ಸಹ ಕಚೇರಿ ಒದಗಿಸುತ್ತದೆ ಎಂದರು.

ಆಚಾರ್ಯ ಸಮೂಹ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕರಾದ ಡಾ। ವಿ.ಭಾಗೀರಥಿ ಪಶ್ಚಿಮ ವಿಭಾಗದ ಅಂಚೆ ಕಚೇರಿಗಳ ಹಿರಿಯ ಮೇಲ್ವಿಚಾರಕಿ ಸೂರ್ಯಾ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌