Indian Oilನಿಂದ 5-10 ಕೆಜಿ ಸಿಲಿಂಡರ್‌ ವಿತರಣೆ; ಬುಕ್ಕಿಂಗ್ ವಾಟ್ಸಪ್ ನಂಬರ್ ಇಲ್ಲಿದೆ

Published : Jul 26, 2026, 08:12 AM IST
LPG

ಸಾರಾಂಶ

ಇಂಡಿಯನ್‌ ಆಯಿಲ್‌ 'ಎಕ್ಸಟ್ರಾ ಲೈಟ್‌ ನೌ' ಹೆಸರಿನಲ್ಲಿ 10 ಮತ್ತು 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಎಕ್ಸ್‌ಪ್ರೆಸ್‌ ಸೇವೆಯನ್ನು ಆರಂಭಿಸಿದೆ. ಈ ಸೇವೆಯು ನಗರವಾಸಿಗಳು ಮತ್ತು ಸಣ್ಣ ಕುಟುಂಬಗಳಿಗೆ ಅನುಕೂಲಕರವಾಗಿದ್ದು, ಬುಕ್ಕಿಂಗ್ ಮಾಡಿದ ನಾಲ್ಕು ಗಂಟೆಗಳೊಳಗೆ ಹಗುರವಾದ, ಪಾರದರ್ಶಕ ಸಿಲಿಂಡರ್‌ಗಳನ್ನು ವಿತರಿಸುತ್ತದೆ.

ಬೆಂಗಳೂರು: ನಗರ ಪ್ರದೇಶದ ಕುಟುಂಬಗಳು, ಉದ್ಯೋಗಿಗಳು ಮತ್ತು ಸಣ್ಣ ಕುಟುಂಬಗಳ ಅಗತ್ಯಗಳಿಗೆ ಅನುಕೂಲಕರ ಹಾಗೂ ಸುಲಭ ಎಲ್‌ಪಿಜಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಇಂಡಿಯನ್‌ ಆಯಿಲ್‌ ‘ಎಕ್ಸಟ್ರಾ ಲೈಟ್‌ ನೌ’ ಎಂಬ ಹೆಸರಿನಲ್ಲಿ 10 ಮತ್ತು 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಎಕ್ಸ್‌ಪ್ರೆಸ್‌ ಸೇವೆಯನ್ನು ಆರಂಭಿಸಿದೆ.

ಇಂಡಿಯನ್‌ ಆಯಿಲ್‌ನ ಅಧ್ಯಕ್ಷರಾದ ಎ.ಎಸ್.ಸಾಹ್ನೇ ಅವರು ಶನಿವಾರ ನೂತನ ಸೇವೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರ ಜೀವನಮಟ್ಟವನ್ನು ಉತ್ತಮಗೊಳಿಸಿದಾಗ ಮಾತ್ರ ನಾವೀನ್ಯತೆಗೆ ನಿಜವಾದ ಅರ್ಥ ಸಿಗುತ್ತದೆ. ಹೊಸ ಸೇವೆಯು ತಂತ್ರಜ್ಞಾನವನ್ನು ಸುಗಮ ಹಾಗೂ ಉನ್ನತ ಸೇವಾ ಮಾದರಿಯೊಂದಿಗೆ ಸಂಯೋಜಿಸಿ, ಹೆಚ್ಚು ಬುದ್ಧಿವಂತ, ಸುರಕ್ಷಿತ ಮತ್ತು ಅನುಕೂಲಕರ ಎಲ್‌ಪಿಜಿ ಅನುಭವವನ್ನು ನೀಡುತ್ತದೆ ಎಂದರು.

ನಾಲ್ಕು ಗಂಟೆಯೊಳಗೆ ಸಿಲಿಂಡರ್ ವಿತರಣೆ

ಇಂಡೇನ್ ‘ಎಕ್ಸಟ್ರಾ ಲೈಟ್‌ ನೌ’ ಹಗುರವಾದ, ತುಕ್ಕು ಹಿಡಿಯದ ಕಾಂಪೋಸಿಟ್ ಸಿಲಿಂಡರ್ ತಂತ್ರಜ್ಞಾನವನ್ನು ಡಿಜಿಟಲ್ ಸೇವಾ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ, ಸುರಕ್ಷತೆ ಹಾಗೂ ಪಾರದರ್ಶಕತೆಯನ್ನು ಒದಗಿಸುತ್ತದೆ. ಈ ಸಿಲಿಂಡರ್ ಪಾರದರ್ಶಕ ವಿನ್ಯಾಸವನ್ನು ಹೊಂದಿದ್ದು, ಎಲ್‌ಪಿಜಿ ಪ್ರಮಾಣವನ್ನು ಗಮನಿಸಬಹುದು. ಜೊತೆಗೆ, ಬುಕ್ಕಿಂಗ್ ಮಾಡಿದ ನಾಲ್ಕು ಗಂಟೆಗಳೊಳಗೆ ಎಕ್ಸ್‌ಪ್ರೆಸ್ ವಿತರಣೆ, ಗ್ರಾಹಕರಿಗೆ ಅನುಕೂಲಕರ ಸಮಯದಲ್ಲಿ ವಿತರಣೆ ಹಾಗೂ ಕನಿಷ್ಠ ದಾಖಲೆಗಳೊಂದಿಗೆ ಸೇವೆ ಲಭ್ಯವಾಗಲಿದೆ.

ವಾಟ್ಸಪ್‌ನಿಂದ ಬುಕ್ಕಿಂಗ್ ಮಾಡಿಕೊಳ್ಳಿ

ಗ್ರಾಹಕರು IndianOil ONE App ಹಾಗೂಇಂಡಿಯನ್‌ ಆಯಿಲ್‌ ವೆಬ್‌ಸೈಟ್ ಮೂಲಕ ಹೊಸ ಸಂಪರ್ಕಕ್ಕಾಗಿ ನೋಂದಣಿ ಹಾಗೂ ರಿಫಿಲ್ ಬುಕ್ ಮಾಡಬಹುದು. ಶೀಘ್ರದಲ್ಲೇ ವಾಟ್ಸ್‌ ಆ್ಯಪ್‌ 7588888824 ಮೂಲಕ ಬುಕ್ಕಿಂಗ್ ಸೌಲಭ್ಯವೂ ಪರಿಚಯಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಇಂಡಿಯನ್‌ ಆಯಿಲ್‌ನ ಮಾರ್ಕೆಟಿಂಗ್ ನಿರ್ದೇಶಕರಾದ ಸೌಮಿತ್ರ ಪಿ. ಶ್ರೀವಾಸ್ತವ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂಡಿಯನ್‌ ಆಯಿಲ್‌ ಕಂಪನಿ ನೂತನವಾಗಿ ಆರಂಭಿಸಿರುವ 10 ಮತ್ತು ಐದು ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಎಕ್ಸ್‌ಪ್ರೆಸ್‌ ಸೇವೆಗೆ ಕಂಪನಿಯ ಅಧ್ಯಕ್ಷರಾದ ಎ. ಎಸ್. ಸಾಹ್ನೇ ಶನಿವಾರ ಚಾಲನೆ ನೀಡಿದರು. ಕಂಪನಿಯ ಮಾರ್ಕೆಟಿಂಗ್ ನಿರ್ದೇಶಕರಾದ ಸೌಮಿತ್ರ ಪಿ. ಶ್ರೀವಾಸ್ತವ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ED chargesheet: ಆನ್‌ಲೈನ್‌ ರಮ್ಮಿ ಕರಾಳ ಮುಖ ಬಯಲು; ₹19984 ಕೋಟಿ ಅಕ್ರಮ ಆದಾಯ! ಗೇಮ್ಸ್‌ಕ್ರಾಫ್ಟ್‌ ಬಾಟ್‌ ಬಳಸಿ ವಂಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ
Bengaluru: ಜಿಬಿಎ ಕಾಮಗಾರಿ ವೇಳೆ ಪೈಪ್‌ಲೈನ್‌ಗೆ ಹಾನಿ; ಏಳೆಂಟು ಅಡಿ ಎತ್ತರಕ್ಕೆ ಚಿಮ್ಮಿದ ಗ್ಯಾಸ್‌!