ಸೋಮವಾರ, ಶುಕ್ರವಾರವಷ್ಟೇ ಹಣ ಎಗರಿಸುತ್ತಿದ್ದ ಓಜಿಕುಪ್ಪಂ ಗ್ಯಾಂಗ್!

Published : Jun 16, 2023, 12:41 PM IST
ಸೋಮವಾರ, ಶುಕ್ರವಾರವಷ್ಟೇ ಹಣ ಎಗರಿಸುತ್ತಿದ್ದ ಓಜಿಕುಪ್ಪಂ ಗ್ಯಾಂಗ್!

ಸಾರಾಂಶ

ನಗರದಲ್ಲಿ ಜನರ ಗಮನ ಬೇರೆಡೆ ಸೆಳೆದು ನಗ-ನಾಣ್ಯ ದೋಚುತ್ತಿದ್ದ ಕುಖ್ಯಾತ ‘ಓಜಿಕುಪ್ಪಂ’ ತಂಡದ ಇಬ್ಬರು ಸದಸ್ಯರು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಜೂ.16) : ನಗರದಲ್ಲಿ ಜನರ ಗಮನ ಬೇರೆಡೆ ಸೆಳೆದು ನಗ-ನಾಣ್ಯ ದೋಚುತ್ತಿದ್ದ ಕುಖ್ಯಾತ ‘ಓಜಿಕುಪ್ಪಂ’ ತಂಡದ ಇಬ್ಬರು ಸದಸ್ಯರು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮಿಳುನಾಡಿನ ಚೆನ್ನೈ ನಗರದ ಕಾರ್ತಿ ಹಾಗೂ ಅಮೋನಾ ದಾಸ್‌ ಬಂಧಿತರಾಗಿದ್ದು, ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಆರೋಪಿಗಳಾದ ರಾಜ ಅಲಿಯಾಸ್‌ ಮದನ, ಗೋಪಿ ಹಾಗೂ ವಿದೀಶ್‌ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ .13.97 ಲಕ್ಷ ನಗದು, ಎರಡು ಬೈಕ್‌ಗಳು ಹಾಗೂ ಕಾರು ಜಪ್ತಿ ಮಾಡಲಾಗಿದೆ.

Bengaluru: ಮನೆಗಳ್ಳತನಕ್ಕೆಂದೆ ತಮಿಳುನಾಡಿನಿಂದ ಬರುವ ಅಂತಾರಾಜ್ಯ ಕಳ್ಳನ ಬಂಧನ

ಸೋಮವಾರ-ಶುಕ್ರವಾರವೇ ಲಕ್ಕಿ ದಿನ:

ಕಾರ್ತಿ ಹಾಗೂ ದಾಸ್‌ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರ ವಿರುದ್ಧ ಜೆ.ಪಿ.ನಗರ ಹಾಗೂ ಆರ್‌.ಆರ್‌.ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದಕ್ಕೆ ತಮಿಳುನಾಡು ಮೂಲದ ‘ಓಜಿಕುಪ್ಪಂ ಗ್ಯಾಂಗ್‌’ ಕುಖ್ಯಾತವಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಈ ಗ್ಯಾಂಗ್‌ ಹಾವಳಿ ಇಟ್ಟಿದೆ. ಈ ತಂಡದ ಸದಸ್ಯರು ಸಣ್ಣ ಸಣ್ಣ ಗುಂಪುಗಳಾಗಿ ರಚಿಸಿಕೊಂಡು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಾರೆ.

ಬ್ಯಾಂಕ್‌ ಹಾಗೂ ಸಬ್‌ ರಿಜಿಸ್ಟ್ರರ್‌ ಕಚೇರಿಗಳ ಬಳಿ ಸುತ್ತಾಡುತ್ತ ಬ್ಯಾಗ್‌ ಹಿಡಿದು ಬರುವ ಗ್ರಾಹಕರನ್ನು ಗುರಿಯಾಗಿಸಿ ಕಳ್ಳತನ ಕೃತ್ಯ ಎಸಗುತ್ತಿದ್ದರು. ಅದರಲ್ಲೂ ಸೋಮವಾರ ಹಾಗೂ ಶುಕ್ರವಾರ ದಿನಗಳಲ್ಲಿ ಓಜಿಕುಪ್ಪಂ ಗ್ಯಾಂಗ್‌ ಹೆಚ್ಚು ಕೃತ್ಯಗಳನ್ನು ಎಸಗಿವೆ. ಆ ಎರಡು ದಿನಗಳನ್ನು ಶುಭ ದಿನಗಳೆಂದು ಭಾವಿಸಿ ಭೂ ನೋಂದಣಿ ಸೇರಿದಂತೆ ಆರ್ಥಿಕ ವ್ಯವಹಾರಗಳನ್ನು ಜನರು ಹೆಚ್ಚು ಮಾಡುತ್ತಾರೆ ಎಂಬುದು ಗ್ಯಾಂಗ್‌ನ ಅಂದಾಜಿಸಿತ್ತು. ಹಾಗಾಗಿ ಸೋಮವಾರ ಹಾಗೂ ಶುಕ್ರವಾರ ಬ್ಯಾಂಕ್‌ ಹಾಗೂ ಸಬ್‌ ರಿಜಿಸ್ಟ್ರರ್‌ ಕಚೇರಿಗಳ ಬಳಿ ನಿಂತು ಹಣ ಕಳವು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅಂತೆಯೇ ಜೂ.2ರಂದು ಶುಕ್ರವಾರ ಆರ್‌.ಆರ್‌.ನಗರದ ಸಬ್‌ ರಿಜಿಸ್ಟ್ರರ್‌ ಕಚೇರಿ ಬಳಿ ಕಾರ್ತಿ ಹಾಗೂ ದಾಸ್‌ ಸೇರಿದಂತೆ ಓಜಿಕುಪ್ಪಂನ ಐವರು ಸದಸ್ಯರು ಹಣಕ್ಕೆ ಹೊಂಚು ಹಾಕಿದ್ದರು. ಆಗ ನಿವೇಶನದ ನೊಂದಣಿ ಸಲುವಾಗಿ ಕಾರಿನಲ್ಲಿ ಬಂದಿದ್ದ ಜೆ.ಪಿ.ನಗರದ ಚೇತನ, ಕಾರಿನಲ್ಲೇ .15 ಲಕ್ಷ ತುಂಬಿದ್ದ ಬ್ಯಾಗ್‌ ಇಟ್ಟು ಸಬ್‌ ರಿಜಿಸ್ಟ್ರರ್‌ ಕಚೇರಿಗೆ ತೆರಳಿದ್ದರು. ಆ ವೇಳೆ ಕಾರಿನ ಗಾಜು ಒಡೆದು ಹಣವಿದ್ದ ಬ್ಯಾಗ್‌ ದೋಚಿ ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಆಗಾಗ್ಗೆ ಬೈಯುತ್ತಿದ್ದ ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಮೊಮ್ಮಗನ ಬಂಧನ

200 ಸಿಸಿ ಕ್ಯಾಮೆರಾಗಳ ಶೋಧಿಸಿ ಸುಳಿವು ಪತ್ತೆ

ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರ್‌.ಆರ್‌.ನಗರ ಹಾಗೂ ಮೈಸೂರು ರಸ್ತೆ ವ್ಯಾಪ್ತಿ ಸುಮಾರು 200ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿದ್ದ ಬೈಕ್‌ಗಳ ನಂಬರ್‌ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಚೆನ್ನೈ ನಗರದಲ್ಲಿ ಇಬ್ಬರು ಸಿಕ್ಕಿಬಿದ್ದು, ಇನ್ನುಳಿದ ಮೂವರು ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ