
ಬೆಂಗಳೂರು (ಆ.21) : ಇತ್ತೀಚೆಗೆ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಪಿಗ್ಮಿ ಸಂಗ್ರಹಿಸುವ ಯುವಕನನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಕುಖ್ಯಾತ ರೌಡಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೊಡಿಗೇಹಳ್ಳಿ ಠಾಣೆ ರೌಡಿ ಶೀಟರ್ ಮನೋಜ್ ಅಲಿಯಾಸ್ ಕೆಂಚ (25) ಬಂಧಿತ. ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕನಕನಗರ ನಿವಾಸಿ ಹರಿಪ್ರಸಾದ್ ಪಿಗ್ಮಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಜು.16ರಂದು ಪಿಗ್ಮಿ ಸಂಗ್ರಹಿಸಿ ರಾತ್ರಿ 10.25ರ ಸುಮಾರಿಗೆ ಯಲಹಂಕ ನ್ಯೂಟೌನ್‌ನ ಶರಾವತಿ ರಸ್ತೆಯ ಕೆನರಾ ಬ್ಯಾಂಕ್ ಬಳಿ ನಿಂತಿದ್ದಾಗ, ಕಾರಿನಲ್ಲಿ ಬಂದ ಆರೋಪಿ ಮನೋಜ್ ಹಾಗೂ ಆತನ ಇಬ್ಬರು ಸಹಚರರು ಏಕಾಏಕಿ ಹರಿಪ್ರಸಾದ್‌ರನ್ನು ಎಳೆದು ಕಾರಿನೊಳಗೆ ಕೂರಿಸಿಕೊಂಡು ಹೋಗಿದ್ದರು. ಬಳಿಕ ಹಣ ಕಿತ್ತುಕೊಂಡು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿಯ ಬಂಧನಕ್ಕಾಗಿ ಯಲಹಂಕ ಎಸಿಪಿ ಮಂಜುನಾಥ್ ನೇತೃತ್ವದಲ್ಲಿ ರಚಿಸಿದ್ದ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಮೈಸೂರು: ಬಾಯಿಗೆ ಬಟ್ಟೆ ತುರುಕಿ 2ನೇ ತರಗತಿ ಬಾಲಕಿ ಅಪಹರಣ ಯತ್ನ!
ಮೋಸ್ಟ್ ವಾಂಟೆಡ್ ರೌಡಿ:
ಆರೋಪಿ ಮನೋಜ್ ಕೊಡಿಗೆಹಳ್ಳಿ ಠಾಣೆ ರೌಡಿ ಶೀಟರ್ ಆಗಿದ್ದಾನೆ. ಈತನ ವಿರುದ್ಧ ಕೊಡಿಗೇಹಳ್ಳಿ, ಯಲಹಂಕ, ಸಂಪಿಗೆಹಳ್ಳಿ, ಚಿಕ್ಕಜಾಲ, ರಾಜಾನುಕುಂಟೆ, ಬಾಗಲಗುಂಟೆ, ಗಂಗಮ್ಮನಗುಡಿ, ಬ್ಯಾಟರಾಯನಪುರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಅಪರಹಣ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದಿದ್ದ. ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತನ ಬಂಧನಕ್ಕೆ ನ್ಯಾಯಾಲಯದಿಂದ ಆರೇಳು ವಾರೆಂಟ್‌ಗಳು ಜಾರಿಯಾಗಿದ್ದವು. ಹೀಗಾಗಿ ಪೊಲೀಸರು ಆರೋಪಿ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸುಮಾರು ಎರಡು ವರ್ಷದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Road accidents: ವಾಣಿಜ್ಯ ತೆರಿಗೆ ಇಲಾಖೆ ವಾಹನಕ್ಕೆ ಲಾರಿ ಡಿಕ್ಕಿ:ಕರ್ತವ್ಯನಿರತ ಸಿಬ್ಬಂದಿ ಸಾವು
ಕಾರಿನಲ್ಲೇ ಜೀವನ!
ರೌಡಿ ಮನೋಜ್ ಪೊಲೀಸರ ಬಂಧನದ ಭೀತಿಯಲ್ಲಿ ಮನೆಗೆ ಹೋಗುತ್ತಿರಲಿಲ್ಲ. ಸಾರ್ವಜನಿಕ ಶೌಚಾಲಯಗಳಲ್ಲಿ ಸ್ನಾನ ಮಾಡುತ್ತಿದ್ದ. ರಾತ್ರಿ ವೇಳೆ ಪಾರ್ಕಿಂಗ್ ಸ್ಥಳಗಳಲ್ಲಿ ಕಾರು ನಿಲ್ಲಿಸಿಕೊಂಡು ಮಲಗುತ್ತಿದ್ದ. ನಗರದಲ್ಲಿ ಅಪರಾಧ ಕೃತ್ಯಗಳನು ಎಸಗಲು ತನ್ನದೇ ಒಂದು ಗ್ಯಾಂಗ್ ಕಟ್ಟಲು ತಯಾರಿ ನಡೆಸಿದ್ದ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪಿಗ್ಮಿ ಕಲೆಕ್ಟರ್ ಅಪಹರಣ ಪ್ರಕರಣ ಸಂಬಂಧ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ