ಬೆಂಗಳೂರು ವಾಹನ ಸವಾರರಿಗೆ ಪಾಲಿಕೆಯಿಂದ ಬಿಕ್ ಶಾಕ್!

Published : Mar 31, 2022, 03:02 PM IST
ಬೆಂಗಳೂರು ವಾಹನ ಸವಾರರಿಗೆ ಪಾಲಿಕೆಯಿಂದ ಬಿಕ್ ಶಾಕ್!

ಸಾರಾಂಶ

 ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆಆರ್ ಸರ್ಕಲ್ ವರೆಗೂ ವೈಟ್ ಟಾಪಿಂಗ್ ಕಾಮಗಾರಿ  ಎರಡು ತಿಂಗಳು ಬಂದ್ ಅಗಲಿದೆ  ನಗರದ ಪ್ರಮುಖ ರಸ್ತೆ ಹಾಗೂ ಪ್ಲೈಓವರ್ ಈಗಾಗಲೇ ಟ್ರಾಫಿಕ್ ಪೊಲೀಸ್ ಅಯುಕ್ತರ ಜೊತೆ ಮಾತುಕತೆ ಮುಗಿಸಿದ ಪಾಲಿಕೆ

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಮಾ.31): ಬೇಸಿಗೆಗೆ ಬೆವರಿ ಬೆಂಡಾಗಿರುವ ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಪಾಲಿಕೆ ಬಿಗ್ ಶಾಕ್ ನೀಡ್ತಿದೆ. ಯುಗಾದಿ ಹಬ್ಬದ ಬೆನ್ನಲ್ಲೆ ನಗರದ ಪ್ರಮುಖ ರಸ್ತೆ ಬಂದ್ ಆಗಲಿದ್ದು ಬಿಬಿಎಂಪಿ (BBMP) ಬೇಕಾಗಿರುವ ತಯಾರಿ ನಡೆಸುತ್ತಿದೆ. ಹೀಗಾಗಿ ಸುಡೋ ಬೇಸಿಗೆಯಲ್ಲಿ ಎರಡು ತಿಂಗಳ ಕಾಲ ಸುತ್ತಾಡಿ ನರಕಯಾತನೆ ಅನುಭವಿಸಲು ರೆಡಿಯಾಗ್ಬೇಕಿದೆ ವಾಹನ ಸವಾರರು.

ನಗರದ ಹೃದಯ ಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ( Krantiveera Sangolli Rayanna Circle ) ಕೆಆರ್ ಸರ್ಕಲ್ (KR circle ) ವರೆಗೂ ವೈಟ್ ಟಾಪಿಂಗ್ (white taping) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಈ ಮುಖ್ಯ ರಸ್ತೆ ಸುಮಾರು 15 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣವಾಗಲಿದ್ದು, ರಸ್ತೆ  ಎರಡು ತಿಂಗಳ ಕಾಲ ಬಂದ್ ಆಗಲಿದೆ.  ಏಪ್ರಿಲ್ 4ರಿಂದ ಬರೋಬ್ಬರಿ ಎರಡು ತಿಂಗಳ ಕಾಲ ಶೇಷಾದ್ರಿ ರಸ್ತೆ (sheshadri road) ಪೂರ್ತಿ ಬಂದ್ ಆಗಲಿದ್ದು ವಾಹನ ಸವಾರರು ಪರದಾಡ್ಬೇಕಿದೆ.

ಸ್ತ್ರೀರೋಗ ತಜ್ಞೆ DR ARCHANA SHARMA ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!

ಕೆಂಪೇಗೌಡ ಬಸ್ ನಿಲ್ದಾಣದಿಂದ ಮೌರ್ಯ ಸರ್ಕಲ್ ಮೂಲಕ ಬೇರೆ ಬೇರೆ ಭಾಗಗಳಿಗೆ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ವೆ.  ಅತ್ಯಂತ ವಾಹನದಟ್ಟಣೆ ಇರೋ ಮುಖ್ಯ ರಸ್ತೆ ಇದಾಗಿದ್ದು ವಾಹನ ಸಂಚಾರ ಬಂದ್ ಮಾಡಿದ್ರೆ ಇಡೀ ಅರ್ಧ ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ಆಗೋದಂತು ಫಿಕ್ಸ್. 

ಈಗಾಗಲೇ ಟ್ರಾಫಿಕ್ ಪೊಲೀಸ್ ಅಯುಕ್ತರ ಜೊತೆ ಮಾತುಕತೆ ಮುಗಿಸಿದ ಪಾಲಿಕೆ
ವೈಟ್ ಟಾಪಿಂಗ್ ಹಿನ್ನಲೆ ವಾಹನ ದಟ್ಟಣೆ ತಪ್ಪಿಸಲು ಬಿಬಿಎಂಪಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಶೇಷಾದ್ರಿ ರಸ್ತೆಗೆ ಪರ್ಯಾಯವಾಗಿ ಮತ್ತೊಂದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಪಾಲಿಕೆ ಅಧಿಕಾರಿಗಳು ಸಂಚಾರಿ ಪೊಲೀಸರಿಗೂ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೆ ಪಾಲಿಕೆ ರಸ್ತೆಯ ಇಕ್ಕೆಲಗಳಲ್ಲಿ, ಪಿಲ್ಲರ್ ಗಳಲ್ಲಿ ಕಾಮಗಾರಿ ಬಗ್ಗೆ ಬ್ಯಾನರ್ ಹಾಕಿದೆ. 

Vijayapura: 81ರ ಇಳಿವಯಸ್ಸಲು ಸ್ನಾತ್ತಕೋತ್ತರ ಪರೀಕ್ಷೆ ಬರೆದ ಅಜ್ಜ!

ಪ್ರಮುಖ ಏರಿಯಾಗಳಲ್ಲಿ ಹೆಚ್ಚಾಗಲಿದೆ ಟ್ರಾಫಿಕ್
ಸೋಮವಾರದಿಂದಲೆ ರಸ್ತೆ ಬಂದ್ ಆಗಲಿದ್ದು ಬಿಬಿಎಂಪಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಪರ್ಯಾಯ ರಸ್ತೆಯನ್ನು ತಿಳಿಸಲಿದೆ. ಆದ್ರೆ ವಿಧಾನಸೌದ ಮುಂಭಾಗದ ಅಂಬೇಡ್ಕರ್ ಬೀದಿ, ಕೆಆರ್ ಸರ್ಕಲ್, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಕೋರಮಂಗಲ, ಮಡಿವಾಳ ಎಂಜಿ ರಸ್ತೆ, ಇಂದಿರಾನಗರ ಮುಂತಾದ ಭಾಗಗಳಲ್ಲಿ ಟ್ರಾಫಿಕ್ ಹೆಚ್ಚುವ ಭೀತಿ ಶುರುವಾಗಿದೆ. ಈ ಹಿಂದೆಯೂ ಹಲವು ರಸ್ತೆಗಳ ಕಾಮಗಾರಿ ಪಾಲಿಕೆ ಗಡುವು ಮುಗಿದರೂ ಕಾಮಗಾರಿ ಮಾತ್ರ ಮುಗಿಸಿಲ್ಲ. ಹೀಗಾಗಿ ಈ ಬಾರಿಯೂ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸಿದ್ರೆ ವಾಹನ ಸವಾರರು ಸಮಸ್ಯೆಯಿಂದ ಪಾರಾಗ್ಬಹುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹುಬ್ಬಳ್ಳಿ: ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಲು ಆಗ್ರಹ; ಜೋಶಿ ಕಚೇರಿ ಮುಂದೆ ಪೂಜಾ ಗಾಂಧಿ, ಕೋನರೆಡ್ಡಿ ಪ್ರತಿಭಟನೆ!
ರಾಯಚೂರು: ಬಸ್ ಇಲ್ಲದೆ ರಾತ್ರಿವರೆಗೆ ಪರದಾಡಿದ ಶಾಲಾ ಮಕ್ಕಳು; ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕಿ ಕರೆಮ್ಮ ನಾಯಕ್!