ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಈ ಕೃತ್ಯವನ್ನು ಖಂಡಿಸಿದ್ದಾರೆ. ಹಿಂದೂ-ಮುಸ್ಲಿಂ ದಂಗೆ ಎಬ್ಬಿಸುವ ಹುನ್ನಾರ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಜ.12): ನಗರದಲ್ಲಿ ತಡರಾತ್ರಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅತಿ ಭೀಕರ ಘಟನೆ ನಡೆದಿದ್ದು, ಪಾಪಿಗಳ ನೀಚ ಕೃತ್ಯಕ್ಕೆ ಸಿಲಿಕಾನ್ ಸಿಟಿ ಮತ್ತೊಮ್ಮೆ ಬೆಚ್ಚಿಬಿದ್ದಿದೆ.
ಚಾಮರಾಜಪೇಟೆಯ ವಿನಾಯಕನಗರದಲ್ಲಿ ಅಮಾನುಷ ಕೃತ್ಯ ನಡೆದಿದ್ದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಬಿಜೆಪಿ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಹಸುವಿನ ಕೆಚ್ಚಲು ಕತ್ತರಿಸಿದ್ದು ದುರಂತ: ಸೂಲಿಬೆಲೆ
ಹಸುಗಳ ಕೆಚ್ಚಲು ಕತ್ತರಿಸಿದ್ದು ಅಮಾನವೀಯ, ಅತ್ಯಂತ ಹೀನ ಕೃತ್ಯ. ಹಿಂದೂ ಮುಸ್ಲಿಂರ ನಡುವೆ ದಂಗೆ ಎಬ್ಬಿಸಲು ಯಾರೋ ಕಿಡಿಗೇಡಿಗಳು ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಅದು ಬಾಂಗ್ಲಾದೇಶದಿಂದ ಆರಂಭವಾಯ್ತು, ಈಗ ಕರ್ನಾಟಕದಲ್ಲಿ ಇಂಥ ಕೃತ್ಯಗಳು ನಡೆಯುತ್ತಿವೆ. ಹಿಂದೆ ಈ ರೀತಿ ಆಗಿರಲಿಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಘಟನೆ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ ಎಂದರು.
ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ!
ಮಲಗಿದ್ದ ಹಸುಗಳ ಕೆಚ್ಚಲು ಅತ್ಯಂತ ಭೀಕರವಾಗಿ ಕತ್ತರಿಸಿದ್ದಾರೆ. ಹಿಂದೂಗಳು ಗೋವನ್ನು ಪೂಜ್ಯ ಭಾವನೆಯಿಂದ ನೋಡ್ತಾರೆ. ಹಸುಗಳು ಬರೀ ಹಿಂದುಗಳಿಗೆ ಮಾತ್ರ ಹಾಲು ಕೊಡುವುದಿಲ್ಲ. ಪ್ರತಿಯೊಬ್ಬರಿಗೆ ಹಸು ಹಾಲು ಕೊಡುತ್ತದೆ. ಹಾಲು ಅಂದ ತಕ್ಷಣ ತಾಯಿಯ ಹಾಲು ಕುಡಿದೇ ನಾವು ಬೆಳೆಯುವುದು ಇಂಥ ಹಸುವಿನ ಕೆಚ್ಚಲು ಕತ್ತರಿಸುತ್ತಾರೆಂದರೆ ಎಂಥ ಮನಸ್ಥಿತಿಯಲ್ಲಿರಬಹುದು? ನನಗೆ ಅನಿಸುತ್ತೆ, ಯಾರೋ ಈ ನಾಡಿನಲ್ಲಿ ಹಿಂದು ಮುಸ್ಲಿಂ ದಂಗೆ ಹುಟ್ಟು ಹಾಕುವ ಕೆಲಸ ಮಾಡ್ತಿದ್ದಾರೆ. ಅದು ಅನೇಕ ದಿನಗಳಿಂದ ನಮಗೆ ಕಾಣಿಸ್ತಿದೆ. ಮೊದಲಿಗಿದು ಬಾಂಗ್ಲಾದೇಶದಿಂದ ಶುರುವಾಗಿದೆ. ಸರ್ ತನ್ಸೇ ಜುದ ಅಂತ ಅಲ್ಲಿಂದ ಗಲಾಟೆ ಶುರು ಮಾಡಿದ್ರು. ಇದೀಗ ಇಡೀ ದೇಶದಲ್ಲಿ ವ್ಯಾಪಕವಾಗಿ ಹಿಂದು ಮುಸ್ಲಿಂ ಕದನ ಹೆಚ್ಚಬೇಕು ಭಾರತವನ್ನ ಅಶಾಂತಿಗೊಳಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇಂಥ ಕೃತ್ಯಗಳು ಹಿಂದೆ ಆಗಿರಲಿಲ್ಲ. ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಿತೋ, ಅಂದಿನಿಂದ ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ. ಸರ್ಕಾರ ಹಿಂದು ಮುಸ್ಲಿಂ ಅಂತಾ ನೋಡುವ ಬದಲು ಕ್ರಮ ಜರುಗಿಸಲು ಯಾರೇ ಮಾಡಿದ್ರೂ ಕಠಿಣ ಕ್ರಮವಾಗಲಿ ಎಂದರು.