ಯೆಸ್‌ ಬ್ಯಾಂಕ್‌ಗೆ ನಿತೇಶ್‌ ಎಸ್ಟೇಟ್‌ 712 ಕೋಟಿ ರೂ. ವಂಚನೆ: ದೂರು

Published : Jul 07, 2021, 07:30 AM IST
ಯೆಸ್‌ ಬ್ಯಾಂಕ್‌ಗೆ ನಿತೇಶ್‌ ಎಸ್ಟೇಟ್‌ 712 ಕೋಟಿ ರೂ. ವಂಚನೆ: ದೂರು

ಸಾರಾಂಶ

* ಯೆಸ್‌ ಬ್ಯಾಂಕ್‌ಗೆ ನಿತೇಶ್‌ ಎಸ್ಟೇಟ್‌ 712 ಕೋಟಿ ವಂಚನೆ: ದೂರು * ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಭಾರಿ ಸಾಲ ಪಡೆದು ಮೋಸ: ಎಫ್‌ಐಆರ್‌ ದಾಖಲು * 2016ರಿಂದ ಆರೋಪಿ ನಿತೇಶ್‌ ಎಸ್ಟೇಟ್ಸ್‌ ಲಿ. ಕಂಪನಿ ಮುಂಬೈ ಹಾಗೂ ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ಯೆಸ್‌ ಬ್ಯಾಂಕಿನಲ್ಲಿ ಹಣಕಾಸು ವ್ಯವಹಾರ ಪ್ರಾರಂಭಿಸಿತ್ತು.

ಬೆಂಗಳೂರು(ಜು.07): ಹೈಡ್‌ಪಾರ್ಕ್, ಕೊಲಂಬಸ್‌ ಸ್ಕೇ್ವರ್‌, ಮೆಲ್ಬರ್ನ್‌ ಪಾರ್ಕ್ ಹಾಗೂ ನಿತೇಶ್‌ ಪ್ಲಾಜಾ ಸೇರಿದಂತೆ ಹಲವು ಯೋಜನೆಗಳಿಗಾಗಿ ಪ್ರತಿಷ್ಠಿತ ನಿತೇಶ್‌ ಎಸ್ಟೇಟ್ಸ್‌ ಲಿಮಿಟೆಡ್‌ ಕಂಪನಿ ‘ಯೆಸ್‌ ಬ್ಯಾಂಕ್‌’ನಿಂದ ಬರೋಬ್ಬರಿ 712 ಕೋಟಿ ರು. ಸಾಲ ಪಡೆದು ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ನಿತೇಶ್‌ ಸಮೂಹ ಸಂಸ್ಥೆಯ ಲಾಲ್‌ಗುಡಿ ಸಪ್ತರಿಶಿ, ಕುಮಾರ್‌ ನೆಲ್ಲೂರು, ಸುಬ್ರಮಣಿಯನ್‌, ಪ್ರದೀಪ್‌ ನಾರಾಯಣನ್‌, ಮಹೇಶ್‌ ಭೂಪತಿ, ಚಂದ್ರಶೇಖರ್‌ ಸೇರಿದಂತೆ ಸಂಸ್ಥೆಯ ನಿರ್ದೇಶಕರ ವಿರುದ್ಧ ಬೆಂಗಳೂರಿನ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬ್ಯಾಂಕಿನ ಮುಂಬೈ ಶಾಖೆಯ ಅಧಿಕಾರಿ ಆಶೀಶ್‌ ವಿನೋದ್‌ ಜೋಶಿ ಎಂಬುವರು ಕೊಟ್ಟದೂರಿನ ಮೇರೆಗೆ ನಿತೇಶ್‌ ಸಮೂಹ ಸಂಸ್ಥೆ ಹಾಗೂ ಅದರ ಮುಖ್ಯಸ್ಥರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ವಿವರ:

ಆರೋಪಿಗಳು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಕಂಪನಿ ಕಚೇರಿ ಹೊಂದಿದ್ದಾರೆ. 2016ರಿಂದ ಆರೋಪಿ ನಿತೇಶ್‌ ಎಸ್ಟೇಟ್ಸ್‌ ಲಿ. ಕಂಪನಿ ಮುಂಬೈ ಹಾಗೂ ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ಯೆಸ್‌ ಬ್ಯಾಂಕಿನಲ್ಲಿ ಹಣಕಾಸು ವ್ಯವಹಾರ ಪ್ರಾರಂಭಿಸಿತ್ತು.

ಆರೋಪಿಗಳು ತಮ್ಮ ಕಂಪನಿಯ ಯೋಜನೆಗಳಾದ ಹೈಡ್‌ ಪಾರ್ಕ್, ಕೊಲಂಬಸ್‌ ಸ್ಕೇ್ವರ್‌, ನಾಪವ್ಯಾಲಿ, ಪಿಷರ್‌ ದ್ವೀಪ, ಮೆಲ್ಬರ್ನ್‌ ಪಾರ್ಕ್, ನ್ಯೂ ಥಣಿಸಂದ್ರ ಯೋಜನೆ, ಗ್ರಾಂಡ್‌ ಕ್ಯಾನಿಯನ್‌, ಕೇಪ್‌ಕಾಡ್‌, ಪಾಲೋ ಹಾಲ್ಟೋ, ನಿತೇಶ್‌ ಪ್ಲಾಜಾ ಮತ್ತು ನಿತೇಶ್‌ ಸಾಹೋ ಯೋಜನೆಗಳ ಅಭಿವೃದ್ಧಿ ಹಾಗೂ ನಿರ್ಮಾಣಕ್ಕಾಗಿ ಯೆಸ್‌ ಬ್ಯಾಂಕ್‌ನಿಂದ ಹಂತ-ಹಂತವಾಗಿ ಒಟ್ಟು 712 ಕೋಟಿ ರು.ಸಾಲ ಪಡೆದಿದ್ದಾರೆ. ಆದರೆ, ಒಪ್ಪಂದದಂತೆ ಸಾಲದ ಹಣ ಮರು ಪಾವತಿಸದೆ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಯೆಸ್‌ ಬ್ಯಾಂಕ್‌ ಅಧಿಕಾರಿ ಆಶೀಶ್‌ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ನಿತೇಶ್‌ ಎಸ್ಟೇಟ್ಸ್‌ ಲಿ. ಕಂಪನಿ ಮುಖ್ಯಸ್ಥರು ಹಾಗೂ ನಿರ್ದೇಶಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಕೆಲವು ದಾಖಲೆಗಳನ್ನು ಸಂಸ್ಥೆ ಸಲ್ಲಿಸಿದೆ. ಈ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೇಗೆ ವಂಚನೆ?

- ಯೆಸ್‌ ಬ್ಯಾಂಕ್‌ನ ಬೆಂಗಳೂರು, ಮುಂಬೈ ಶಾಖೆಯಲ್ಲಿ ನಿತೇಶ್‌ ಎಸ್ಟೇಟ್ಸ್‌ ಹಣಕಾಸು ವ್ಯವಹಾರ

- ಹೈಡ್‌ ಪಾರ್ಕ್, ಕೊಲಂಬಸ್‌ ಸ್ಕೇ್ವರ್‌, ನಾಪವ್ಯಾಲಿ, ಪಿಷರ್‌ ದ್ವೀಪ, ಮೆಲ್ಬರ್ನ್‌ ಪಾರ್ಕ್, ನ್ಯೂ ಥಣಿಸಂದ್ರ, ಗ್ರಾಂಡ್‌ ಕ್ಯಾನಿಯನ್‌, ಕೇಪ್‌ಕಾಡ್‌, ಪಾಲೋ ಹಾಲ್ಟೋ, ನಿತೇಶ್‌ ಪ್ಲಾಜಾ, ನಿತೇಶ್‌ ಸಾಹೋ ಕಟ್ಟಡ ನಿರ್ಮಾಣಕ್ಕೆ ಸಾಲ

- ಹಂತ ಹಂತವಾಗಿ 712 ಕೋಟಿ ರು. ಸಾಲ ಪಡೆದು, ಮರುಪಾವತಿ ಮಾಡದೆ ವಂಚಿಸಿದ ಆರೋಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ