ಬೆಂಗಳೂರು ಪ್ರಯಾಣಿಕರಿಗೆ ಮತ್ತೆ ಸಂಕಷ್ಟ, ನಮ್ಮ ಯಾತ್ರಿ ಆ್ಯಪ್‌ಗೆ ಗುಡ್ ಬೈ ಹೇಳಿದ ಆಟೋ ಚಾಲಕರು!

By Suvarna NewsFirst Published Dec 12, 2023, 6:04 PM IST
Highlights

ಆ್ಯಪ್ ಆಧಾರಿತ ಆಟೋ ಸೇವೆಗೆ ಸೆಡ್ಡು ಹೊಡೆಯಲು ಬೆಂಗಳೂರು ಆಟೋ ಚಾಲಕರ ಸಂಘ ನಮ್ಮ ಯಾತ್ರಿ ಆ್ಯಪ್ ಹೊರತಂದಿದೆ. ಆದರೆ ಇದೀಗ ನಮ್ಮ ಯಾತ್ರಿ ಆ್ಯಪ್‌ನಿಂದ ಆಟೋ ಚಾಲಕರ ಸಂಘ ಹೊರಬಂದಿದೆ.

ಬೆಂಗಳೂರು(ಡಿ.12) ನಮ್ಮ ಯಾತ್ರಿ ಆ್ಯಪ್ ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡಿತ್ತು. ಪ್ರಯಾಣಿಕರಿಗೆ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣದ ಜೊತೆ ಬೆಂಗಳೂರು ಆಟೋ ಚಾಲಕರಿಗೆ ನೇರವಾಗಿ ಆಧಾಯ ಸಲ್ಲುವಂತೆ ಮಾಡುವ ಉದ್ದೇಶದಿಂದ ಈ ಆ್ಯಪ್ ಬಿಡುಗಡೆಯಾಗಿತ್ತು. ಆದರೆ ನಮ್ಮ ಯಾತ್ರಿ ಆ್ಯಪ್‌ ಸರ್ವೀಸ್ ಸಂಸ್ಥೆ ಹಾಗೂ ಬೆಂಗಳೂರು ಆಟೋ ಚಾಲಕರ ಸಂಘದ ನಡುವೆ ಬಿರುಕು ಮೂಡಿದೆ. ಪರಿಣಾಮ ಆಟೋಚಾಲಕರ ಸಂಘ ನಮ್ಮ ಯಾತ್ರಿ ಆ್ಯಪ್ ಪಾರ್ಟ್ನರ್‌ಶಿಪ್‌ನಿಂದ ಹೊರಬಂದಿದೆ.

ARDU ಬೆಂಬಲಿತ ನಮ್ಮ ಯಾತ್ರಿ ಆ್ಯಪ್‌ನಲ್ಲಿ ಪ್ರಯಾಣ ದರ ವಿಚಾರಕ್ಕೆ ಸಂಬಂಧಿಸಿದಂತೆ  ARDU ಹಾಗೂ ಆಟೋ ಚಾಲಕರ ಸಂಘದ ಜೊತೆ ಒಮ್ಮತ ಮೂಡಿಲ್ಲ. ಇಷ್ಟೇ ಅಲ್ಲ ಈ ಹಿಂದೆ ARDU ತೆಗೆದುಕೊಂಡ ನಿರ್ಧಾರಕ್ಕೂ ಆಟೋಚಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಟೋ ಚಾಲಕರ ಸಂಘ, ನಮ್ಮ ಯಾತ್ರಿ ಸಂಬಂಧ ಮುರಿದುಕೊಂಡಿದೆ.

Latest Videos

ಬೆಂಗಳೂರಲ್ಲಿ ಆಟೋ ಓಡಿಸ್ತಾರೆ ಈ ಕಂಪನಿಯ ಉನ್ನತ ಅಧಿಕಾರಿ, ಐಐಎಂ ಪದವೀಧರ!

ಮೆಟ್ರೋ ನಿಲ್ದಾಣದಿಂ 2 ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ 40 ರೂಪಾಯಿ ದರ ವಿಧಿಸುವಂತೆ ಆಟೋ ಚಾಲಕರು ಆಗ್ರಹಿಸಿದ್ದರು. ಆದರೆ ನಮ್ಮ ಯಾತ್ರಿ ಪೇಮೆಂಟ್ ಸೊಲ್ಯುಶನ್ ಪ್ರೊವೈಡರ್ ಈ ಪ್ರಸ್ತಾವನೆ ಒಪ್ಪಿಕೊಂಡಿಲ್ಲ. ಇದರಿಂದ ಮನಸ್ತಾಪ ಜೋರಾಗಿದೆ. ಯೂನಿಯನ್ ಹಾಗೂ ಆಟೋ ಚಾಲಕರ ಸಂಘದ ನಡುವಿನ ಮನಸ್ತಾಪದಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.

ಇತ್ತೀಚೆಗೆ ಮೊಬೈಲ್‌ ಆ್ಯಪ್‌ ಆಧರಿತ ಕ್ಯಾಬ್‌ ಸೇವೆ ಒದಗಿಸುವ ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲೆಂದೇ ಅಭಿವೃದ್ಧಿಪಡಿಸಲಾಗಿದ್ದ ‘ನಮ್ಮ ಯಾತ್ರಿ’ ಆಟೋ ಆ್ಯಪ್‌ ವಿರುದ್ಧವೇ ಆಟೋ ಚಾಲಕರು ಅಭಿಯಾನ ಆರಂಭಿಸಿದ್ದರು. ಬೈಕ್‌ ಟ್ಯಾಕ್ಸಿ ವಿರುದ್ಧ ಇತ್ತೀಚೆಗೆ ಬೆಂಗಳೂರು ನಗರ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿತ್ತು. ಅಂದು ಎಲ್ಲ ಆಟೋ ಚಾಲಕರು ಆಟೋ ಸಂಚಾರ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆಟೋ ರಿಕ್ಷಾ ಡ್ರೈವ​ರ್‍ಸ್ ಯೂನಿಯನ್‌(ಎಆರ್‌ಡಿಯು) ಬಹಿರಂಗವಾಗಿಯೇ ಮುಷ್ಕರಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಘೋಷಿಸಿದ್ದು ಆಟೋ ಚಾಲಕರ ಕೆಂಗಣ್ಣಿಗೆ ಗುರಿಯಾಗಿತ್ತು. 

ಓಲಾದಿಂದ ಬೈಕ್‌ ಟ್ಯಾಕ್ಸಿ ಆರಂಭ: ಆಟೋ ಚಾಲಕರಲ್ಲಿ ನಷ್ಟದ ಭೀತಿ

click me!