ಕೇಂದ್ರ ಸರ್ಕಾರ ದೇಶದಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿನಿಂದ ಬಲಿಯಾದಂತ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಎರಡು ಜಿಲ್ಲೆಗಳಿವೆ.
ನವದೆಹಲಿ, (ಜುಲೈ.09) : ಕೇಂದ್ರ ಸರ್ಕಾರ ದೇಶದಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿನಿಂದ ಬಲಿಯಾದಂತ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 32 ಜಿಲ್ಲೆಗಳಲ್ಲಿಯೇ ದೇಶದಲ್ಲಿ ಶೇ.80ರಷ್ಟು ಜನರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
undefined
ಇಂತಹ ಪಟ್ಟಿಯಲ್ಲಿ ರಾಜ್ಯದ ಬೆಂಗಳೂರು ನಗರ ಮತ್ತು ಬೀದರ್ ಜಿಲ್ಲೆಗಳು ಕೂಡ ಸೇರ್ಪಡೆಗೊಂಡಿವೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾದಿಂದಾಗಿ ಬಲಿಯಾದ ಜಿಲ್ಲೆಗಳಾಗಿವೆ.
ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!
It was highlighted at the that only 32 districts are contributing 80% of total deaths in the country.
Also, 86% of the total deaths are concentrated in 6 states pic.twitter.com/VHX0Ml9deN
ಬೆಂಗಳೂರಿನಲ್ಲಿ ಇದುವರೆಗೆ ಕಿಲ್ಲರ್ ಕೊರೋನಾಗೆ 177 ಜನರು ಬಲಿಯಾಗಿದ್ದರೇ, ಬೀದರ್ ಜಿಲ್ಲೆಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ.
ಅಲ್ಲದೇ ಒಟ್ಟಾರೆಯಾಗಿ ದೇಶಾದ್ಯಂತ ಇದುವರೆಗೆ ಕೊರೋನಾ ಸೋಂಕಿನಿಂದಾಗಿ 21,174 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.