ಬೆಂಗಳೂರು ವಿಮಾನ ನಿಲ್ದಾಣದ ಪಿಕಪ್ ಲೇನ್‌ಗೆ ಪ್ರವೇಶಿಸುವ ವಾಹನಗಳಿಗೆ ವಿಧಿಸಲಾಗುತ್ತಿದ್ದ ಹೊಸ ಶುಲ್ಕಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲಿಯೇ ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು (ಮೇ 21): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ (KIA) ಸಂಬಂಧಿಕರು, ಪರಿಚಯಸ್ಥರು ಹಾಗೂ ಕುಟುಂಬಸ್ಥರನ್ನು ಕರೆದುಕೊಂಡು ಬರಲು ಹೋಗುವ ಪಿಕ್-ಅಪ್ ವಾಹನಗಳಿಗೆ ಹೊಸದಾಗಿ ವಿಧಿಸಲಾಗುತ್ತಿದ್ದ ಶುಲ್ಕವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಸ್ಥಗಿತಗೊಳಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( KIA) ಆಗಮಿಸುವ ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಯಸ್ಥರನ್ನು ಪಿಕ್ ಅಪ್ ಮಾಡಲು ಹೋಗುವ ವಾಹನಗಳಿಗೆ ಕಳೆದೆರಡು ದಿನಗಳ ಹಿಂದೆ ಹೊಸದಾಗಿ ಶುಲ್ಕ ವಿಧಿಸಲಾಗುತ್ತಿತ್ತು. ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ (BIAL) ಟರ್ಮಿನಲ್ 1 ಮತ್ತು 2ನಲ್ಲಿರುವ ಎಲ್ಲ ಪಿಕ್-ಅಪ್ ಲೇನ್‌ಗಳಿಗೆ ಹೋಗುವ ವಾಹನಗಳಿಗೆ ಪ್ರವೇಶಿಸಲು ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಈ ಪ್ರವೇಶ ಶುಲ್ಕದ ಬಗ್ಗೆ ಟ್ಯಾಕ್ಸಿ ಚಾಲಕರು ಹಾಗೂ ಸ್ಥಳೀಯರು ಪ್ರತಿಭಟನೆ ಮಾಡಿದ ಬೆನ್ನಲ್ಲಿಯೇ ಪಿಕ್-ಅಪ್ ವಾಹನಗಳಿಗೆ ವಿಧಿಸುತ್ತಿದ್ದ ಶುಲ್ಕ ಸಂಗ್ರಹವನ್ನು ಹಿಂಪಡೆಯಲಾಗಿದೆ.
undefined
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಪಿಕ್‌ಅಪ್ ಲೇನ್ ವಾಹನಗಳ ಪ್ರವೇಶಕ್ಕೆ ₹150 ಶುಲ್ಕ
ವಿಮಾನ ನಿಲ್ದಾಣದ ಪಿಕ್ ಲೇನ್ ಪ್ರವೇಶಿಸುವ ವೈಟ್ ಬೋರ್ಡ್ ಕಾರುಗಳಿಗೆ (ಖಾಸಗಿ ವಾಹನಗಳು) ಮೊದಲ 7 ನಿಮಿಷಕ್ಕೆ 150 ರೂ. ಮತ್ತು ಮುಂದಿನ ಏಳು ನಿಮಿಷಗಳಿಗೆ ಶುಲ್ಕ ವಿಧಿಸುತ್ತಿರಲಿಲ್ಲ. ಆದರೆ, ಯೆಲ್ಲೋ ಬೋರ್ಡ್ ವಾಹನಗಳಿಗೆ (ಟ್ಯಾಕ್ಸಿಗಳು) ಮೊದಲ 7 ನಿಮಿಷಗಳಿಗೆ 150 ರೂ. ಹಾಗೂ ಬಾಕಿ 7 ನಿಮಿಷಗಳಿಗೆ 300 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಇನ್ನು ಬಸ್‌ಗಳು ಬಂದರೆ ಅವುಗಳಿಗೆ ಬರೋಬ್ಬರಿ 600 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಟೆಂಪೋ ಟ್ರಾವೆಲರ್ಸ್‌ಗೆ 300 ರೂ. ಶುಲ್ಕ ಪಡೆಯಲಾಗುತ್ತಿತ್ತು. ಇನ್ನು ಟಿಕೆಟ್ ಕಳೆದು ಹೋದರೆ 600 ರೂ. ನಿಗದಿತ ಶುಲ್ಕ ವಿಧಿಸಲಾಗಿತ್ತು.
ಇನ್ನು ವಿಮಾನ ನಿಲ್ದಾಣದ ಪಿಕ್-ಲೇನ್‌ನಲ್ಲಿ 15 ನಿಮಿಷಕ್ಕಿಂತ ಹೆಚ್ಚಿನ ಸಮಯ ಇರುತ್ತಿದ್ದ ವಾಹನಗಳನ್ನು ವಾಹನ ಮಾಲೀಕರ ವೆಚ್ಚದಲ್ಲಿಯೇ ಪೊಲೀಸ್ ಠಾಣೆಗೆ ಎಳೆದು ತರಲಾಗುತ್ತಿತ್ತು. ನಂತರ, ಆ ವಾಹನಗಳಿಗೆ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಯ ಶುಲ್ಕ ವಿಧಿಸಿ ನ್ಯಾಯಾಲಯಕ್ಕೆ ಹೋಗಿ ವಾಹನ ವಾಪಸ್ ಪಡೆಯಬೇಕಿತ್ತು. ಇನ್ನು ವಿಮಾನ ನಿಲ್ದಾಣವನ್ನು ತಲುಪಲು ಸಾದಹಳ್ಳಿ ಗೇಟ್ ಮೂಲಕ ಬರುವುದಕ್ಕೆ ಟೋಲ್‌ಗೆ ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ, ಇಲ್ಲಿ ಪಿಕ್-ಅಪ್ ಲೇನ್ ಶುಲ್ಕ ವಿಧಿಸುತ್ತಿರುವುದು ವಾಹನ ಚಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಂಗಳೂರಿನ ಮಳೆಗೆ ವಿಮಾನ ನಿಲ್ದಾಣ ತುಂಬಾ ನೀರು, ವಿನ್ಯಾಸ ಮಾಡಿದ ಎಂಜಿನಿಯರ್ ಮೇಲೆ ಪ್ರಯಾಣಿಕರ ಹಿಡಿಶಾಪ
ಬೆಂಗಳೂರು ವಿಮಾನ ನಿಲ್ದಾಣದ ಏಕಾಏಕಿ ಶುಲ್ಕದ ಹೊರೆಯಿಂದ ಬೇಸತ್ತ ಟೋ ಟ್ಯಾಕ್ಸಿಗಳು, ಟ್ಯಾಕ್ಸಿ ಅಗ್ರಿಗೇಟರ್ಸ್‌ಗಳು ತೀವ್ರ ಆರ್ಥಿಕ ಹೊಡೆತ ಅನುಭವಿಸಿದವು. ಇದನ್ನು ಟ್ಯಾಕ್ಸಿ ಪ್ರಯಾಣಿಕರು ಭರಿಸಿದರೂ ತೀವ್ರ ಹೊರೆ ಉಂಟಾಗುತ್ತಿತ್ತು. ಇನ್ನು ಕೆಲವು ಪ್ರಯಾಣಿಕರು ಪಿಕ್-ಅಪ್ ಲೇನ್ ಶುಲ್ಕ ವಿಧಿಸಲು ಹಿಂದೇಟು ಹಾಕಿ ಜಗಳವನ್ನೂ ಮಾಡಿದ್ದರು. ಇದರಿಂದ ವಿಮಾನ ನಿಲ್ದಾಣ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನಾ ಬಿಸಿ ಅರಿತ ವಿಮಾನ ನಿಲ್ದಾಣದ ಆಡಳಿತ ವರ್ಗವು ಪಿಕ್-ಅಪ್ ಲೇನ್ ಶುಲ್ಕವನ್ನು ಸ್ಥಗಿತಗೊಳಿಸಿದೆ ಎಂದು ವಾಹನ ಚಾಲಕರು ಮಾಹಿತಿ ನೀಡಿದ್ದಾರೆ.