ಪ್ರಿಯಾಂಕ್ ಬದಲು ಪ್ರಿಯಾಂಕಾ ಎಂದ ಆರ್ ಆಶೋಕ್ ಎಡವಟ್ಟು; ನಾನು ಪ್ರಿಯಾಂಕ್ ಎಂದ ಖರ್ಗೆ

By Ravi Janekal  |  First Published Dec 7, 2023, 3:32 PM IST

ಮಾತನಾಡುವ ವೇಳೆ ಪ್ರಿಯಾಂಕ್ ಖರ್ಗೆಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಿಯಾಂಕಾ ಖರ್ಗೆ ಎಂದ ಘಟನೆ ನಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ. ನಾನು ಪ್ರಿಯಾಂಕಾ ಅಲ್ಲ, ಪ್ರಿಯಾಂಕ್ ಖರ್ಗೆ ಎಂದ ಸಚಿವ. ಆದರೆ ನಾನು ಹಂಗಂದಿಲ್ಲ ಎಂದ ಆರ್ ಅಶೋಕ್. ಮತ್ತೆ ಇಲ್ಲ ನೀವು ಪ್ರಿಯಾಂಕಾ ಎಂದಿದ್ದೀರಿ ಎಂದ ಖರ್ಗೆ. ಆಯ್ತು ಸರಿಪಡಿಸಿಕೊಳ್ತೇನೆ ಎಂದ ವಿಪಕ್ಷ ನಾಯಕ ಅಶೋಕ್


ವಿಧಾನಸಭೆ (ಡಿ.7): ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಹುತೇಕ ಮಂತ್ರಿಗಳೇ ಗೈರು ಆಗಿರುವ ಹಿನ್ನೆಲೆ ವಿಪಕ್ಷ ನಾಯಕ ಆರ್ ಅಶೋಕ್ ಗರಂ ಆದ ಘಟನೆ ನಡೆಯಿತು. 

ರಾಜ್ಯಕ್ಕಷ್ಟೇ ಅಲ್ಲ, ಈ ಸರ್ಕಾರಕ್ಕೂ ಬರ ಬಂದಿದೆ. ಅಧಿವೇಶನ ಆರಂಭದಿಂದಲೂ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕೆಲ ನಾಯಕರು ಅಧಿವೇಶನಕ್ಕೆ ಬರುತ್ತಿಲ್ಲ. ಬರದ ಮೇಲೆ ನಡೆಯಬೇಕಾದ ಚರ್ಚೆ ಆಗುತ್ತಿಲ್ಲ. ಬಹುತೇಕ ಸಚಿವರು ತೆಲಂಗಾಣದಲ್ಲಿ ಸಿಎಂ ಪ್ರಮಾಣವಚನ ಕಾರ್ಯಕ್ರಮ ಕ್ಕೆ ಹೋಗಿದ್ದಾರೆ. ಅದು ಮುಗಿದ ಮೇಲಾದ್ರೂ ಬರ್ತಾರೋ, ಇಲ್ಲಾ ಅಲ್ಲೇ ಡಿನ್ನರ್ ಮುಗಿಸಿ ಬರ್ತಾರೋ ಗೊತ್ತಿಲ್ಲ. ನಮ್ಮ ರೈತರು ಬರಗಾಲದಿಂದಾಗಿ ಆತ್ಮಹತ್ಯೆಗಳನ್ನು ಮಾಡಿಕೊಳ್ತಾ ಇದಾರೆ. ಈ ಸರ್ಕಾರ ರೈತರಿಗೆ ಪರಿಹಾರ ಕೊಡ್ತಾ ಇಲ್ಲ. ನಮ್ಮ ಅವಧಿಯಲ್ಲಿ ಇಂಥ ಬರಗಾಲ ಪರಿಸ್ಥಿತಿ ಬಂದಾಗ ಕೇಂದ್ರದ ನೆರವಿಗೆ ಕಾಯಲಿಲ್ಲ. ನಾವೇ ಪರಿಹಾರ ಕೊಟ್ಟಿದ್ದೆವು. ಹದಿನಾಲ್ಕು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು ರೈತರಿಗೆ ಪರಿಹಾರ ಕೊಡಲು ಯಾಕೆ ಆಗ್ತಿಲ್ಲ? ನಾವು ಏನು ಮಾಡಿದ್ದೀವಿ ಅಂತ ಪ್ರಶ್ನೆ ಮಾಡ್ತೀರಾ? ಏನು ಮಾಡಿದ್ದೀವಿ ಅಂತ ದಾಖಲೆಗಳಿವೆ ಬೇಕಾದ್ರೆ ನೋಡಿ.  ಎಕರೆ ಗೆ ಇಪ್ಪತ್ತೈದು ಸಾವಿರ ಕೊಡಬೇಕು ಅಂತಾ ಒತ್ತಾಯ ಮಾಡ್ತೀವಿ. ರೈತರಿಗೆ ಅಷ್ಟಾದರೂ ಕೊಡಬೇಕು ಇದರಲ್ಲಿ ರಾಜಕೀಯ ಮಾಡಬೇಡಿ ಎಂದರು.

Tap to resize

Latest Videos

ಐಸಿಸ್‌ ನಂಟಿನ ಬಗ್ಗೆ ಯತ್ನಾಳ್ ಆರೋಪ ಬೆನ್ನಲ್ಲೇ ಸ್ಫೋಟಕ ಬೆಳವಣಿಗೆ; ಎನ್‌ಐಎ ತನಿಖೆಗೆ ಮನವಿ ಮಾಡಿದ ರಾಘವ ಅನ್ನಿಗೇರಿ 

ಮುಸ್ಲಿಂ ಸಮಾವೇಶಕ್ಕೆ ಹೋಗಿ 10 ಸಾವಿರ ಕೋಟಿ ಕೊಡ್ತೇವೆ ಅಂತಾ ಹೇಳ್ತೀರಾ,   ನಮ್ಮ ರೈತರಿಗೆ ಪರಿಹಾರ ಕೊಡಿ. ಇಲ್ಲಿ ಎಲ್ಲ ಧರ್ಮದವರು ಇದ್ದಾರೆ. ಮೊದಲು ಪರಿಹಾರ ನೀಡಿ. ನಾವು ಅಧಿಕಾರದಲ್ಲಿ ಇದ್ದಾಗ ತಾಯಿಹೃದಯ ತೋರಿದ್ದೇವೆ. ಬರಗಾಲ ಬಂದಾಗ ಕೂಲಿ ಮಾಡುವವನಿಗೂ ಕೂಲಿ ಸಿಗಲ್ಲ. ಡ್ರೈ ಕಿಟ್ ಅಂತ ಕೊಟ್ಟಿದ್ದೆವು. ಹತ್ತು ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಉಪ್ಪು, ಸಕ್ಕರೆ, ಸಾಂಬರ್ ಪುಡಿ, ಕಾಫಿ ಪುಡಿ ಎಲ್ಲವನ್ನೂ ಕೊಟ್ಟಿದ್ದೆವು. ನಿಮಗೆ ಏನು ಪ್ರಾಬ್ಲಮ್? ಎಂದು ಪ್ರಶ್ನಿಸಿದರು.

ಬಜೆಟ್ ಗಾತ್ರ ಜಾಸ್ತಿ ಮಾಡಿದ್ದೀರಿ. ಇವತ್ತು ಸ್ಟಾಂಪ್ ಡ್ಯೂಟಿ ಬಿಲ್ ತರ್ತಾ ಇದ್ದೀರಿ. ಇದರ ಮೇಲೆ ತೆರಿಗೆ ಜಾಸ್ತಿ ಮಾಡ್ತಾ ಇದ್ದೀರಿ. ನಾನು ಇದನ್ನು ಕಡಿಮೆ ಮಾಡಿದ್ದೆ. ಬೆಳಗ್ಗೆ ಹಾಲು ಕುಡಿಯುವ ಮಗುವಿಗೆ ಹಾಲಿನ ರೇಟ್ ಜಾಸ್ತಿ. ರಾತ್ರಿ ಮೈಕೈ ನೋವು ಅಂತ ಕುಡಿಯುವ ಆಲ್ಕೋಹಾಲ್ ಗೂ ರೇಟ್ ಜಾಸ್ತಿ ಮಾಡಿದ್ದೀರಿ. ಮಹಿಳೆಗೆ ಕೊಡುವ ಎರಡು ಸಾವಿರ ರುಪಾಯಿ ಇಲ್ಲೇ ವಸೂಲಿ ಮಾಡ್ತಾ ಇದ್ದೀರಿ (ಗೃಹ ಲಕ್ಷ್ಮಿ ಯೋಜನೆ ಅಡಿ) ಎಂದು ಮುಖ್ಯಮಂತ್ರಿ ಸಚಿವರ ಚಳಿ ಬಿಡಿಸಿದರು. ಸರ್ಕಾರ ಬಂದು ಆರು ತಿಂಗಳು ಕಳೆದರೂ ಇನ್ನೂ ಟೇಕಾಫ್ ಆಗಿಲ್ಲ. ಆದಷ್ಟು ಬೇಗ ಎಚ್ಚೆತ್ತುಕೊಂಡು ರೈತರ ಪರ ಕೆಲಸ ಮಾಡಬೇಕು ಎಂದರು. 

ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಮತ್ತೆ ಪೊಲೀಸರ ವಶಕ್ಕೆ!

ಪ್ರಿಯಾಂಕ್ ಬದಲು ಪ್ರಿಯಾಂಕಾ ಅಶೋಕ್ ಎಡವಟ್ಟು:

ಮಾತನಾಡುವ ವೇಳೆ ಪ್ರಿಯಾಂಕ್ ಖರ್ಗೆಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಿಯಾಂಕಾ ಖರ್ಗೆ ಎಂದ ಘಟನೆ ನಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ. ನಾನು ಪ್ರಿಯಾಂಕಾ ಅಲ್ಲ, ಪ್ರಿಯಾಂಕ್ ಖರ್ಗೆ ಎಂದ ಸಚಿವ. ಆದರೆ ನಾನು ಹಂಗಂದಿಲ್ಲ ಎಂದ ಆರ್ ಅಶೋಕ್. ಮತ್ತೆ ಇಲ್ಲ ನೀವು ಪ್ರಿಯಾಂಕಾ ಎಂದಿದ್ದೀರಿ ಎಂದ ಖರ್ಗೆ. ಇಲ್ಲ ನಾನು ಪ್ರಿಯಾಂಕಾ ಎಂದು ದೀರ್ಘವಾಗಿ ಕರೆದೆ ಅಷ್ಟೇ ಮತ್ತೆ ನಾನು ಪ್ರಿಯಾಂಕ್ ಎಂದ ಖರ್ಗೆ. ಹೌದ ಸರಿ ಮಾಡಿಕೊಳ್ತೇನೆ ಎಂದ ವಿಪಕ್ಷ ನಾಯಕ ಆರ್ ಅಶೋಕ್ ಮಾತು ಮುಂದುವರಿಸಿದರು. ಕೆಲ ಕಾಲ ಮುಸಿಮುಸಿ ನಗುವಂತಾಯಿತು.

click me!