ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.4ರಿಂದ ಚಳಿಗಾಲ ಅಧಿವೇಶನ ನಡೆಯಲಿರುವ ಹಿನ್ನೆಲೆ ಸುವರ್ಣ ವಿಧಾನಸೌಧ ಸಜ್ಜುಗೊಳಿಸಲಾಗುತ್ತಿದ್ದು, ಆವರಣದ ಸುತ್ತಲೂ ಹುಲುಸಾಗಿ ಬೆಳೆದಿದ್ದ ಹುಲ್ಲನ್ನು ನಾಶಪಡಿಸುತ್ತಿರುವ ಬೆಳಗಾವಿ ಜಿಲ್ಲಾಡಳಿತ ನಡೆ ವಿರುದ್ಧ ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಬೆಳಗಾವಿ (ನ.24): ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.4ರಿಂದ ಚಳಿಗಾಲ ಅಧಿವೇಶನ ನಡೆಯಲಿರುವ ಹಿನ್ನೆಲೆ ಸುವರ್ಣ ವಿಧಾನಸೌಧ ಸಜ್ಜುಗೊಳಿಸಲಾಗುತ್ತಿದ್ದು, ಆವರಣದ ಸುತ್ತಲೂ ಹುಲುಸಾಗಿ ಬೆಳೆದಿದ್ದ ಹುಲ್ಲನ್ನು ನಾಶಪಡಿಸುತ್ತಿರುವ ಬೆಳಗಾವಿ ಜಿಲ್ಲಾಡಳಿತ ನಡೆ ವಿರುದ್ಧ ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಮೊದಲೇ ಜಿಲ್ಲೆಯಲ್ಲಿ ಮಳೆ ಇಲ್ಲ. ಈ ಬಾರಿ ಶೇ.60ರಷ್ಟು ಮಳೆ ಕೊರತೆಯಿಂದ ತೀವ್ರ ಬರಗಾಲಕ್ಕೆ ತತ್ತರಿಸಿ ಹೋಗಿರುವ ರೈತರು. ಒಂದು ಕಡೆ ಬೆಳೆನಾಶ ಇನ್ನೊಂದೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ರೈತರು ದಿನನಿತ್ಯ ಮೇವಿಗಾಗಿ ಪರದಾಡುತ್ತಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯಲ್ಲೂ ಮೇವು ಹಾಳುಮಾಡುತ್ತಿರುವ ಅಧಿಕಾರಿಗಳು.
undefined
ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ: ಮಹಾಮೇಳಾವ್‌ಗೆ ನಾಡದ್ರೋಹಿಗಳ ಸಿದ್ಧತೆ
ಸುವರ್ಣಸೌಧದ ಸುತ್ತಲೂ 10 ಎಕರೆ ಪ್ರದೇಶದಲ್ಲಿ ಹುಲುಸಾಗಿ ಮೇವು ಬೆಳೆದಿರುವುದರಿಂದ ಅದೆಷ್ಟೋ ಜಾನುವಾರುಗಳಿಗೆ ಹಸಿವು ನೀಗಿಸುತ್ತಿತ್ತು. ಇದೀಗ ಅಧಿವೇಶನ ನೆಪದಲ್ಲಿ ಹುಲ್ಲು ನಾಶಗೊಳಿಸಲು ಮುಂದಾಗಿರುವ ಅಧಿಕಾರಿಗಳು ಮೂಕ ಪ್ರಾಣಿಗಳಿಗೆ ಆಹಾರ ಆಗಬೇಕಿದ್ದ ಮೇವನ್ನು ಹಾಳುಮಾಡುತ್ತಿರುವ ಅಧಿಕಾರಿಗಳು. ಅಧಿವೇಶನ ಸ್ವಚ್ಚತೆ ಹೆಸರಿನಲ್ಲಿ ಮೇವು ಕಟಾವು ಮಾಡಲಾಗುತ್ತಿದೆ. ಹಾಳು ಮಾಡುವ ಬದಲು ರೈತರಿಗೆ ಕಟಾವು ಮಾಡಲು ಅವಕಾಶ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಜಾನುವಾರುಗಳ ಮೇವಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮೇವು ಹಾಳು ಮಾಡದೇ ಕಟಾವು ಮಾಡಲು ಅವಕಾಶ ಮಾಡಿಕೊಡಿ ಎಂದು ರೈತರು ಮನವಿ ಮಾಡಿಕೊಳ್ತಿದ್ದಾರೆ. ಆದರೂ ರೈತರ ಮನವಿಗೆ ಕ್ಯಾರೇ ಎನ್ನದ ಅಧಿಕಾರಿಗಳ ನಡೆ ವಿರುದ್ಧ ಹಲಗಾ, ಬಸ್ತವಾಡ, ಅಲಾರವಾಡ, ಕೊಂಡಸಕೊಪ್ಪ ಸೇರಿ ಸುತ್ತಲಿನ ಗ್ರಾಮಗಳ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
GST ಹೊಡೆತ, ಸಬ್ಸಿಡಿ ಕಡಿತ: ಸಂಕಷ್ಟದಲ್ಲಿರುವ ಚರ್ಮ ಕುಶಲಕರ್ಮಿಗಳಿಗೆ ಬೇಕಿದೆ ಸರ್ಕಾರದ ನೆರವು
ರೈತರ ಪರಿಸ್ಥಿತಿ ಅರಿತು ಜಿಲ್ಲಾಡಳಿತ ಸ್ವಚ್ಛತೆ ಹೆಸರಿನಲ್ಲಿ ಮೇವು ಹಾಳುಮಾಡುವ ಬದಲು ಮೇವನ್ನು ರೈತರ ಜಾನುವಾರುಗಳಿಗೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.