ಫ್ಯಾಕ್ಟರಿಯಲ್ಲಿ ಸಕ್ಕರೆ, ಕೆರೆಯಲ್ಲಿ ವಿಷ: ರೈತರ ಅನ್ನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕನ್ನ!

By Suvarna NewsFirst Published Feb 11, 2021, 9:54 AM IST
Highlights

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ ಫ್ಯಾಕ್ಟರಿಯಿಂದ ಹೊರಬರುವ ಕೆಮಿಕಲ್ ಮಿಶ್ರಿತ ತ್ಯಾಜ್ಯವನ್ನು ಪಕ್ಕದಲ್ಲೇ ಇರುವ ತುಬ್ಬರಿಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಆ ಹಳ್ಳದಲ್ಲಿರುವ ಮೀನುಗಳ ಮಾರಣ ಹೋಮವಾಗುತ್ತಿದೆ. 

ಬೆಳಗಾವಿ (ಫೆ. 11):  ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ ಫ್ಯಾಕ್ಟರಿಯಿಂದ ಹೊರಬರುವ ಕೆಮಿಕಲ್ ಮಿಶ್ರಿತ ತ್ಯಾಜ್ಯವನ್ನು ಪಕ್ಕದಲ್ಲೇ ಇರುವ ತುಬ್ಬರಿಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಆ ಹಳ್ಳದಲ್ಲಿರುವ ಮೀನುಗಳ ಮಾರಣ ಹೋಮವಾಗುತ್ತಿದೆ. ಈ ಕೆರೆಯ ನೀರನ್ನು ಕೃಷಿಗೆ ಬಳಸುವ ಅಕ್ಕಪಕ್ಕದ ಗ್ರಾಮದ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. 

ತುಬ್ಬರಿಹಳ್ಳದ ಈ ನೀರು ಇಲ್ಲಿನ ಜನರಿಗೆ ಕೃಷಿಗೆ ಆಧಾರ. ಕಲುಷಿತ ನೀರಿನಿಂದ ಬೆಳೆಗಳು ನಾಶವಾಗುತ್ತಿದೆ. ನೀರು ಕುಡಿದ ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ. ಯಾವಾಗಲೂ ರಾಜಖಾರಣದಲ್ಲಿ ಸದ್ದು ಮಾಡುವ ಲಕ್ಷ್ಮೀ ಹೆಬ್ಬಾಳ್ಕರ್ ಇಲ್ಲಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗೆ ಮಾತ್ರ ಜಾಣ ಕುರುಡು ತೋರಿಸಿದ್ದಾರೆ. 

click me!