ಶಕ್ತಿ ಪ್ರದರ್ಶನಕ್ಕೆ ಮುಂದಾದ ಪಂಚಮಸಾಲಿ ಸಮುದಾಯ..!

By Suvarna News  |  First Published Feb 10, 2021, 11:10 PM IST

2A ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ನಡೆಸುತ್ತಿರುವ ಪಾದಯಾತ್ರೆ ಇದೀಗ ತುಮಕೂರಿಗೆ ಬಂದಿದೆ. ಈ ವೇಳೆ ಸ್ವಾಮೀಜಿಗಳು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.


ತುಮಕೂರು, (ಫೆ.10): 2A ಮೀಸಲಾತಿಗೆ ಆಗ್ರಹಿಸಿ ಪಾದಾಯತ್ರೆ ಮಾಡುತ್ತಿರುವ ಪಂಚಮಸಾಲಿ ಸಮುದಾಯ ವಿಧಾನಸಭೆ ಮುತ್ತಿಗೆ ನಿರ್ಧಾರವನ್ನು ಕೈಬಿಟ್ಟಿದೆ. ಆದ್ರೆ, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಹೌದು...ಪಂಚಮಸಾಲಿ 2A ಮೀಸಲಾತಿಗೆ ಆಗ್ರಹಿಸಿ ಫೆ.21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಬಸವ ಮೃತ್ಯುಂಜಯ ಶ್ರೀ ಸ್ವಾಮೀಜಿ ಹೇಳಿದ್ದಾರೆ.

Tap to resize

Latest Videos

ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪಂಚಮಸಾಲಿ  ಜನಪ್ರತಿನಿಧಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಶ್ರೀಗಳು, ಬೆಂಗಳೂರಿನ ನೈಸ್ ರಸ್ತೆ ಬಳಿ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಸಮಾವೇಶದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ವಿವಿಧ ಸಮುದಾಯಗಳ ಮೀಸಲಾತಿ ಬಗ್ಗೆ ಸಿಎಂ ಬಿಎಸ್‌ವೈ ಮಹತ್ವದ ಹೇಳಿಕೆ

ವಿಧಾನಸೌಧ ಮುತ್ತಿಗೆ ನಿರ್ಧಾರವನ್ನು ಕೈ ಬಿಡಲಾಗಿದೆ. ಫೆ.21 ರಂದು ಸಮಾವೇಶ ನಡೆಸುವ ಮೂಲಕ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಶ್ರೀಗಳು ಹೇಳಿದರು.

ಸಮುದಾಯದ ಜನರು, ಪ್ರತಿನಿಧಿಗಳು ಸೇರಿದಂತೆ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗಿಯಾಗಲಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಶ್ರೀಗಳು ಹೇಳಿದರು.

click me!