ಎಂಇಎಸ್ ಪುಂಡರ ಪ್ರತಿಭಟನೆಗೆ ಹೆದರಿತಾ ಪೊಲೀಸ್ ಇಲಾಖೆ? ಬೆಳಗಾವಿ ನಗರ ಸೇವಕ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ ರಾತ್ರೋರಾತ್ರಿ ಬಂಧನ!

By Ravi Janekal  |  First Published Nov 27, 2023, 7:14 AM IST

ಮನೆಮೇಲೆ ಅನಧಿಕೃತ ಮೊಬೈಲ್ ಟವರ್ ಹಾಕಿರುವ ವಿಚಾರಕ್ಕೆ ನಡೆದ ಜಗಳ ಪ್ರಕರಣದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರನ್ನ ಟಿಳಕವಾಡಿ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ.


ಬೆಳಗಾವಿ (ನ.27): ಮನೆಮೇಲೆ ಅನಧಿಕೃತ ಮೊಬೈಲ್ ಟವರ್ ಹಾಕಿರುವ ವಿಚಾರಕ್ಕೆ ನಡೆದ ಜಗಳ ಪ್ರಕರಣದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳಕರನ್ನ ಟಿಳಕವಾಡಿ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ.

ಎಂಇಎಸ್ ಪುಂಡರಿಂದ ತೀವ್ರ ಹಲ್ಲೆಗೊಳಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಅಭಿಜಿತ್. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಮೊದಲೇ ಬಂಧಿಸಿರುವ ಕ್ರಮಕ್ಕೆಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Latest Videos

undefined

ಕಠಿಣ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ; ಪರೀಕ್ಷಾ ಅಕ್ರಮಕ್ಕೆ 10 ಕೋಟಿ ದಂಡ, 12 ವರ್ಷ ಜೈಲು!

ಏನಿದು ಘಟನೆ?

ಮನೆ ಮೇಲೆ ಅನಧಿಕೃತ ಮೊಬೈಲ್ ಟವರ್ ಹಾಕಿರುವುದನ್ನು ಪ್ರಶ್ನಿಸಿದಕ್ಕೆ ಎಂಇಎಸ್ ಕಾರ್ಯಕರ್ತರು ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದರು. ನಾಲ್ಕು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಅಭಿಜಿತ್ ಮೇಲೆ ಹಲ್ಲೆ ಮಾಡಿದ್ದ ಭಾಗ್ಯನಗರ ನಿವಾಸಿ ರಮೇಶ್ ಪಾಟೀಲ.

 ಈ ಕುರಿತು ಟಿಳಕವಾಡಿ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಅಭಿಜಿತ್ ಜವಳಕರ. ದೂರಿನ ಹಿನ್ನೆಲೆಯಲ್ಲಿ ರಮೇಶ್ ಪಾಟೀಲ ಎಂಬಾತನನ್ನು ಬಂಧಿಸಿದ್ದ ಟಿಳಕವಾಡಿ ಠಾಣೆ ಪೊಲೀಸರು. ರಮೇಶ್ ಪಾಟೀಲ ಬಂಧನ ಖಂಡಿಸಿ ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ಎಂಇಎಸ್‌ ಕಾರ್ಯಕರ್ತರು. ಎಂಇಎಸ್‌ ಪ್ರತಿಭಟನೆಗೆ ಮಣಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅಭಿಜಿತ್ ಬಂಧಿಸಿ ಜೈಲಿಗೆ ಕಳಿಸಿರುವ ಪೊಲೀಸರು.

'ಭಾರತ ವಿಶ್ವಕಪ್ ಗೆಲ್ಲಲಿ' ನವದಂಪತಿಗಳಿಂದ ಟೀಂ ಇಂಡಿಯಾಗೆ ಶುಭಾಶಯ

ಕರ್ನಾಟಕದ ಬೆಳಗಾವಿಯಲ್ಲೇ ಎಂಇಎಸ್ ಕಾರ್ಯಕರ್ತರ ಉದ್ಧಟತನ. ಎಂಇಎಸ್ ಪ್ರತಿಭಟನೆ ಮಾಡಿದ್ದಕ್ಕೆ ಹೆದರಿ ಅಭಿಷೇಕರನ್ನು ಬಂದಿಸಿದ್ರಾ ಪೊಲೀಸರು? ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ. ಇಂದು‌ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭೇಟಿ ಮಾಡಲಿರುವ ಬಿಜೆಪಿ ಮುಖಂಡರು. ಬಿಜೆಪಿ ‌ಮಹಾನಗರ ಅಧ್ಯಕ್ಷ ಅನಿಲ್ ಬೆನಕೆ ನೇತೃತ್ವದ ನಿಯೋಗದಿಂದ ಕಮೀಷ್ನರ್ ಭೇಟಿ.

click me!