
ಬೆಳಗಾವಿ (ಮಾ.31): ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ ಅಂಗಡಿ 3.74 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ 11.03 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 14.77 ಕೋಟಿ ರು. ಮೌಲ್ಯದ ಆಸ್ತಿಯ ಒಡತಿ ಆಗಿದ್ದಾರೆ. 2019ರಲ್ಲಿ ಮಂಗಲ ಅಂಗಡಿ ಹೆಸರಲ್ಲಿ 13.03 ಕೋಟಿ ರು. ಆಸ್ತಿ (3.57 ಕೋಟಿ ಸ್ಥಿರಾಸ್ತಿ, 9.45 ಕೋಟಿ ಚರಾಸ್ತಿ) ಹೊಂದಿದ್ದರು.
ಎರಡು ವರ್ಷಗಳಲ್ಲಿ ಅವರ ಆಸ್ತಿ ಒಟ್ಟು .1.74 ಕೋಟಿ ರು. ಹೆಚ್ಚಳವಾಗಿದೆ. ಬಿಎಸ್ಸಿ ಪದವೀಧರೆಯಾಗಿರುವ ಮಂಗಲ ಅಂಗಡಿ ಅವರ ಬಳಿ 81.35 ಲಕ್ಷ ನಗದು ಇದೆ. ಮಂಗಲ ಅವರ ಪತಿ ದಿವಂಗತ ಸುರೇಶ ಅಂಗಡಿ ಹೆಸರಿನಲ್ಲಿ ಒಟ್ಟು 15.94 ಕೋಟಿ ಆಸ್ತಿ ಇದೆ. ತಮ್ಮ ಪತಿ ಸುರೇಶ ಅಂಗಡಿ ಹೆಸರಿನಲ್ಲಿರುವ ಸ್ಥಿರಾಸ್ತಿ, ಚರಾಸ್ತಿ ನನ್ನ ಹೆಸರಿಗೆ ವರ್ಗಾವಣೆಯಾಗುವ ಪ್ರಕ್ರಿಯೆ ಮುಂದುವರೆದಿದೆ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
2 ವರ್ಷದಲ್ಲಿ ಸತೀಶ್ ಆಸ್ತಿ ಭಾರಿ ಏರಿಕೆ : ಹೆಚ್ಚಳವಾಗಿದ್ದೆಷ್ಟು..? ...
2019ರಲ್ಲಿ ಸುರೇಶ ಅಂಗಡಿ ಅವರ ಒಟ್ಟು ಆಸ್ತಿ 14.37 ಕೋಟಿ ( 12.24 ಕೋಟಿ ಸ್ಥಿರಾಸ್ತಿ, 2.12 ಕೋಟಿ ಚರಾಸ್ತಿ) ಇತ್ತು. ಈಗ ಅವರ ಆಸ್ತಿಯಲ್ಲಿ 1.57 ಕೋಟಿ ಆಸ್ತಿ ಹೆಚ್ಚಳವಾಗಿದೆ.
ವಿವಿಧ ಟ್ರಸ್ಟ್, ಕಂಪನಿಗಳ ಹೆಸರಿನಲ್ಲಿ 11.05 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ಅಲ್ಲದೆ, 95.52 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಹೀಗೆ ಒಟ್ಟು 106.57 ಕೋಟಿ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಟ್ರಸ್ಟ್ ಮತ್ತು ಕಂಪನಿಗಳ ಹೆಸರಿನಲ್ಲಿದೆ. ಜತೆಗೆ ಇದೆ ಟ್ರಸ್ಟ್‌ನಲ್ಲಿ 95.95 ಲಕ್ಷ ಸಾಲ ಇದೆ ಎಂದು ತಿಳಿಸಿದ್ದಾರೆ. 64 ಲಕ್ಷ ಮೌಲ್ಯದ 1600 ಗ್ರಾಂ ಚಿನ್ನಾಭರಣ ಇದೆ. ವಿವಿಧ ಬ್ಯಾಂಕುಗಳಲ್ಲಿ ಒಟ್ಟು 60.23 ಲಕ್ಷ ಸಾಲ ಮಾಡಿದ್ದಾರೆ.
ಮಂಗಲ ಸುರೇಶ ಅಂಗಡಿ ಅವರ ಕುಟುಂಬದ ಒಟ್ಟು ಆಸ್ತಿ 30.72 ಕೋಟಿ ಇದೆ. ಜತೆಗೆ ಟ್ರಸ್ಟ್ ಮತ್ತು ಕಂಪನಿ ಹೆಸರಿನಲ್ಲಿ 106 ಕೋಟಿ ಆಸ್ತಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ