
ಬೆಂಗಳೂರು (ಏ.20) ಬೆಂಗಳೂರಿನ ವಾತಾವರಣ ಎಲ್ಲರಿಗೂ ಇಷ್ಟ. ಇಲ್ಲಿಗೆ ಭೇಟಿ ನೀಡಿದ ಎಲ್ಲರೂ ಹೇಳುವ ಮೊದಲ ಮಾತು. ಆದರೆ ಈ ಕಾಲ ಹೋಯಿತು. ಬೆಂಗಳೂರು ಈಗ ಕಾದ ಕಬ್ಬಿಣದಂತಾಗಿದೆ. ತ್ವರಿತಗತಿಯಲ್ಲಿ ನಗರದ ಬೆಳವಣಿಗೆ, ಕೈಗಾರಿಕೆ, ವಾಹನ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಕೂಲ್ ಕೂಲ್ ಆಗಿ ಉಳಿದಿಲ್ಲ. ಬೆಂಗಳೂರಿನ ನಿವಾಸಿ ಪ್ರಿಯಾ ಪಾಲ್, ಬಿಸಿಲಿನಿಂದ ಪಾರಾಗಲು ಮಾಡಿದ ಒಂದು ಜಾಣ ಉಪಾಯ ಮಾಡಿದ್ದಾರೆ. ಮನೆಯಲ್ಲಿ ಬಿಸಿ ತಾಳಲಾರದೆ, ಅವರು ತಮ್ಮ ಮನೆಯ ಸಮೀಪದಲ್ಲೇ ಇರುವ ಹೋಟೆಲ್ ಒಂದರಲ್ಲಿ ರೂಮ್ ಬುಕ್ ಮಾಡಿದ್ದಾರೆ. ತಂಪಾದ ರೂಮಿನಲ್ಲಿ ಆರಾಮವಾಗಿ ಕುಳಿತುಕೊಂಡಿರುವ ಅವರ ವಿಡಿಯೋ, ಸಿಲಿಕಾನ್ ಸಿಟಿಯಲ್ಲಿ ಈಗ ಬರೀ ಸೀಲಿಂಗ್ ಫ್ಯಾನ್‌ನಿಂದ ಬದುಕುವುದು ಕಷ್ಟ ಎನ್ನುವುದನ್ನು ತೋರಿಸುತ್ತಿದೆ.
ಈ ವೈರಲ್ ವಿಡಿಯೋದಲ್ಲಿ ಪ್ರಿಯಾ, ಕೊನೆಗೂ ತಂಪಾದ ವಾತಾವರಣದಲ್ಲಿ ನಿರಾಳವಾಗಿರುವುದನ್ನು ಕಾಣಬಹುದು. ಎಸಿ ಇಲ್ಲದ ಇನ್ನು ಸಾಧ್ಯವಿಲ್ಲ ಎಂದು ಪ್ರಿಯಾ ಬರೆದುಕೊಂಡಿದ್ದಾರೆ. ಹೋಟೆಲ್ ಬುಕ್ ಮಾಡಿದ್ದು ತನ್ನ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಮೊದಲು ಮಳೆ ಬಂದು ವಾತಾವರಣ ತಂಪಾಗಬಹುದು ಎಂದು ಅವರು ಕಾದಿದ್ದರು, ಆದರೆ ಮಳೆ ಬರಲೇ ಇಲ್ಲ. ನಂತರ ಏರ್ ಕೂಲರ್ ಅಥವಾ ಎಸಿ ಖರೀದಿಸಲು ಪ್ರಯತ್ನಿಸಿದಾಗ, ಹೆಚ್ಚಿನ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿತ್ತು. ಡೆಲಿವರಿಗೆ ಏಳು ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇನ್ನು ಬಾಡಿಗೆಗೆ ಕೂಲರ್ ಕೊಡುವ ಸೇವಾ ಸಂಸ್ಥೆಗಳಲ್ಲೂ ಬೇಡಿಕೆ ಹೆಚ್ಚಿದ್ದರಿಂದ ಒಂದೂ ಯಂತ್ರ ಲಭ್ಯವಿರಲಿಲ್ಲ.
ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು ಒಂದು ಪ್ರಾಯೋಗಿಕ ನಿರ್ಧಾರವಾಗಿತ್ತು ಎಂದು ಪ್ರಿಯಾ ಹೇಳಿದ್ದಾರೆ. ಹೊರಗೆ ಹೋಗಿ ದುಬಾರಿ ಡಿನ್ನರ್ ಮಾಡುವ ಬದಲು, ಆ ಹಣವನ್ನು ಹೋಟೆಲ್ ರೂಮ್‌ಗೆ ಖರ್ಚು ಮಾಡಲು ಅವರು ನಿರ್ಧರಿಸಿದರು. ಮನೆಯಲ್ಲಿ ಬೆವರುತ್ತಾ ಕೂರುವ ಬದಲು, ಭಾನುವಾರವನ್ನು ಎಸಿ ರೂಮಿನಲ್ಲಿ ನೆಟ್‌ಫ್ಲಿಕ್ಸ್ ನೋಡುತ್ತಾ ಕಳೆದರು. ಅವರಿಗೆ, ತಮ್ಮ ಹೊಸ ಕೂಲರ್ ಬರುವವರೆಗೂ ಆರಾಮವಾಗಿರಲು ಇದು ಒಂದು ಸುಲಭ ಮಾರ್ಗವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ