Bengaluru: ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು: ಸಿಎಂ ಬೊಮ್ಮಾಯಿ

By Kannadaprabha News  |  First Published Dec 17, 2021, 4:17 AM IST

*    ಮರುಟೆಂಡರ್‌ ಆಗುವ ತನಕ ನಿರ್ವಹಣೆ ಹೊಣೆ ಪಾಲಿಕೆಗೆ
*   10 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌
*    ಆರ್ಟೀರಿಯಲ್‌ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್‌ ಹಿಸ್ಟರ್‌ ನಿರ್ವಹಣೆ ಮಾಡಬೇಕು 


ಬೆಳಗಾವಿ(ಡಿ.17): ಬೆಂಗಳೂರಿನ(Bengaluru) ಪ್ರಮುಖ ಆರ್ಟೀರಿಯಲ್‌ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್‌ ಹಿಸ್ಟರ್‌ ನಿರ್ವಹಣೆ ಮಾಡಬೇಕು. ನಗರದ ಬೀದಿ ದೀಪಗಳಿಗೆ ಎಲ್‌ಇಡಿ ಲೈಟ್‌ ಅಳವಡಿಸಲು ಮರು ಟೆಂಡರ್‌ ಆಗುವವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡಬೇಕೆಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. 

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌(Congress) ಸದಸ್ಯ ಪಿ.ಆರ್‌.ರಮೇಶ್‌(PR Ramesh) ಅವರ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಪದೇ ಪದೇ ರಿಪೇರಿ ಮಾಡುತ್ತಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಆರ್ಟೀರಿಯಲ್‌ ರಸ್ತೆಗಳಲ್ಲಿ ನಡೆಯುವ ಕಾಮಗಾರಿಗಳ ಹಿಸ್ಟರಿ ನಿರ್ವಹಣೆಗೆ ಈಗಾಗಲೇ ಆಯುಕ್ತರಿಗೆ ಸೂಚಿಸಲಾಗಿದೆ. ಸ್ಮಾರ್ಟ್‌ ಸಿಟಿ(Smartcity) ಯೋಜನೆಯಡಿ ಹಲವಾರು ಯೋಜನೆಗಳು ನಡೆಯುತ್ತಿದ್ದು, ಈ ಬಗ್ಗೆ ಪೂರ್ಣ ವಿವರದ ನಾಲ್ಕು ಸಾವಿರ ಪುಟಗಳ ಉತ್ತರವನ್ನು ಸಿಟಿಯಲ್ಲಿ ಒದಗಿಸಲಾಗಿದೆ. ಇದನ್ನು ಪರಿಶೀಲಿಸಿ ಸದಸ್ಯರು ಯಾವುದೇ ಸಲಹೆಗಳಿದ್ದರೆ ನೀಡಬಹುದು ಎಂದರು.

Latest Videos

undefined

Bengaluru: BBMP ಅಧಿಕಾರಿಗಳಿಗೆ ದಿನವಿಡೀ ಮೀಟಿಂಗ್‌: ಕೆಲಸ ನಾಸ್ತಿ..!

ಪಾಲಿಕೆ ವ್ಯಾಪ್ತಿಯ ಎಲ್ಲಾ ಬೀದಿ ದೀಪಗಳಿಗೆ(Streetlight) ಎಲ್‌ಇಡಿ ಲೈಟ್‌ ಅಳವಡಿಕೆಗೆ ಶಾಪೂರ್ಜಿ ಪೋಲಾಂಜಿ ಕಂಪನಿಗೆ ಟೆಂಡರ್‌ ನೀಡಲಾಗಿತ್ತು. ಆದರೆ, ಆ ಕಂಪನಿಯಿಂದ ಯೋಜನೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಮರು ಟೆಂಡರ್‌ ಆಗುವವರೆಗೂ ಕಾಯದೆ ಬಿಬಿಎಂಪಿಯೇ ಅಲ್ಲಿಯವರೆಗೂ ಬೀದಿ ದೀಪಗಳ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ. ಎಲ್‌ಇಡಿ ಲೈಟ್‌ ಯೋಜನೆಗೆ ಮರು ಟೆಂಡರ್‌(Tender) ಕರೆಯಬೇಕು. ಈ ಟೆಂಡರ್‌ನಲ್ಲಿ ಮೊದಲು ಯೋಜನೆ ಕೈಗೊಳ್ಳಲು ವಿಫಲವಾಗಿರುವ ಕಂಪನಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

10 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌:

ಅದೇ ರೀತಿ ನಗರದ 85 ರಸ್ತೆಗಳನ್ನು ಸ್ಮಾರ್ಟ್‌ ಪಾರ್ಕಿಂಗ್‌(Smart Parking) ಯೋಜನೆಗೆ ಗುರುತಿಸಲಾಗಿದ್ದು, ಈ ಪೈಕಿ 10 ರಸ್ತೆಗಳಲ್ಲಿ ಈಗಾಗಲೇ ಯೋಜನೆ ಪೂರ್ಣಗೊಂಡಿದೆ. ಉಳಿದ ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ವಾರ್ಷಿಕ ಬಿಬಿಎಂಪಿಗೆ 31 ಕೋಟಿ ರು.ಗೂ ಹೆಚ್ಚು ಅನುದಾನ ಬರಬಹುದೆಂದು ಅಂದಾಜಿಸಲಾಗಿದೆ ಎಂದರು.

ಹೆಚ್ಚು ಹದಗೆಟ್ಟ ರಸ್ತೆಗೆ ಮೊದಲು ಡಾಂಬರು

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ  ಆದ್ಯತೆ ಮೇರೆಗೆ ಹೆಚ್ಚು ಹದಗೆಟ್ಟಿರುವ ರಸ್ತೆಗಳನ್ನು ಗುರುತಿಸಿ ಡಾಂಬರೀಕರಣ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.  ನಗರದ ಹೆಣ್ಣೂರು ಮುಖ್ಯ ರಸ್ತೆ (1.8 ಕಿ.ಮೀ), ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ ರಸ್ತೆ (2.6 ಕಿ.ಮೀ), ಲಿಂಗರಾಜ ಪುರ ಮೇಲುಸೇತುವೆ ಬಳಿಯ ರಸ್ತೆ (0.75 ಕಿ.ಮೀ), ದಿಣ್ಣೂರು ಮುಖ್ಯ ರಸ್ತೆ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ.

ಜಲಮಂಡಳಿ ವತಿಯಿಂದ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಕುಡಿಯುವ ನೀರಿನ (water) ಪೈಪ್‌ಲೈನ್‌, ಒಳಚರಂಡಿ ಮಾರ್ಗ ಹಾಗೂ ಬೆಸ್ಕಾಂ ಸಂಸ್ಥೆ ವತಿಯಿಂದ ನೆಲದಡಿ ವಿದ್ಯುತ್‌ ಕೇಬಲ್‌ (Electric Cable) ಅಳವಡಿಸುವ ಕಾರ್ಯಗಳು ಈ ರಸ್ತೆಯಲ್ಲಿ ನಡೆಯುತ್ತಿದ್ದರಿಂದ ಈವರಗೆ ರಸ್ತೆ ದುರಸ್ತಿ ಕಾರ್ಯ ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಹಿಂದೆ ತಾತ್ಕಾಲಿಕವಾಗಿ ಜಲ್ಲಿಪುಡಿ ಹಾಕಿ ವಾಹನ (Vehicle) ಸಂಚಾರಕ್ಕೆ ಅನುವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು.

ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಸತತ ಮಳೆಯಿಂದ ರಸ್ತೆ ದುರಸ್ತಿ ಸಾಧ್ಯವಾಗಿರಲಿಲ್ಲ. ಇದೀಗ ಹೆಣ್ಣೂರು (Hennur) ಮುಖ್ಯ ರಸ್ತೆಯನ್ನು ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಿದ್ದು, ಡಾಂಬರೀಕರಣ ಕೆಲಸ ಪ್ರಗತಿಯಲ್ಲಿದೆ. ಜನವರಿ 15ರೊಳಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ಯೋಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಬರುವ ಪ್ರಮುಖ ರಸ್ತೆಗಳು, ವಾರ್ಡ್‌ಗಳ ರಸ್ತೆ ಗುಂಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚುವ ಕಾರ್ಯ ಹಾಗೂ ಅವಶ್ಯಕತೆಯಿರುವ ಕಡೆ ಡಾಂಬರೀಕರಣ ಕಾರ್ಯವೂ ಕೂಡ ಪಾಲಿಕೆ ವತಿಯಿಂದ ತ್ವರಿತವಾಗಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!