Congress Padayatra ಕಾಂಗ್ರೆಸ್ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅನುಮತಿ!

Published : Jan 12, 2022, 08:04 PM IST
Congress Padayatra ಕಾಂಗ್ರೆಸ್ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಅನುಮತಿ!

ಸಾರಾಂಶ

* ಕಾಂಗ್ರೆಸ್ ಪಾದಯಾತ್ರೆಗೆ ಬಿಬಿಎಂಪಿ ಷರತ್ತುಬದ್ಧ ಅನುಮತಿ * ಪಾದಯಾತ್ರೆ ಸಮಾರೋಪಕ್ಕೆ ಬಿಬಿಎಂಪಿ ಅನುಮತಿ  * ಜನವರಿ 18,19ರಂದು ನಡೆಯಲಿರುವ ಪಾದಯಾತ್ರೆ ಸಮಾರೋಪ ಸಮಾರಂಭ

ಬೆಂಗಳೂರು, (ಜ.12): ಮೇಕೆದಾಟು ಯೋಜನೆ (Mekedatu Project) ಜಾರಿಗೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ(Karnataka Congress Padayatra) ನಡೆಸುತ್ತಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅನುಮತಿ ನೀಡಿದೆ. 

ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ  ನವರಿ 18 ಹಾಗೂ 19 ಎರಡು ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್ ಅನುಮತಿ ಕೋರಿತ್ತು. ಅದಕ್ಕೆ ಬಿಬಿಎಂಪಿ ಸಹ  ಬಿಬಿಎಂಪಿ ಸಮಾರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. 

Congress Padayatra ಪಾದಯಾತ್ರಗೆ ಬ್ರೇಕ್ ಬೀಳುತ್ತಾ? ಅರ್ಧಕ್ಕೆ ನಿಲ್ಲಿಸುತ್ತಾ ಕಾಂಗ್ರೆಸ್?

ಜ.4ರಂದು 30 ಸಾವಿರ ಡಿಡಿ ಪಡೆದು ಅನುಮತಿ ನೀಡಲಾಗಿದ್ದು, ಕೊವಿಡ್-19​ ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ಕೊಡಲಾಗಿದೆ. ಅಲ್ಲದೇ ಕೊರೋನಾ ಹೆಚ್ಚಾದ್ರೆ ಅನುಮತಿ ರದ್ದು ಮಾಡಲಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೇ ರದ್ದುಪಡಿಸಲಾಗುತ್ತದೆ ಸ್ಪಷ್ಟವಾಗಿ ಹೇಳಲಾಗಿದೆ.. ಆದ್ರೆ ಬಿಬಿಎಂಪಿಯಿಂದ ಅನುಮತಿ ವಿಚಾರವಾಗಿ ಮತ್ತೊಂದು ಮಾತು ಕೇಳಿಬಂದಿದೆ. 

ಕೊರೋನಾ ರೂಲ್ಸ್ ಜಾರಿಗೆ ಬರುವ ಮುನ್ನ ಕಾಂಗ್ರೆಸ್ ಅನುಮತಿ ಪಡೆದಿತ್ತು. ಜನವರಿ 18- 19 ರಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ಪಡೆದಿತ್ತು. ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ, ದಕ್ಷಿಣ ವಲಯ ಜಂಟಿ ಆಯುಕ್ತರ ಸೂಚನೆ ಮೇರೆಗೆ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕೊರೋನಾ ರೂಲ್ಸ್ ಜಾರಿಗೆ ಬಂದ ಕಾರಣ, ಅನುಮತಿ ರದ್ದುಪಡಿಸಲು ಬಿಬಿಎಂಪಿ ಮುಂದಾಗಿದೆ ಎಂದೂ ಮಾಹಿತಿ ಕೇಳಿಬಂದಿದೆ.

ಪಾದಯಾತ್ರೆಗೆ ಪೊಲೀಸರಿದಂಲೇ ಸಹಕಾರ
ಹೌದು...ಕಾಂಗ್ರೆಸ್ ಮೇಕೆದಾಟು ಪಾದಯಾತ್ರಗೆ ಬಿಜೆಪಿ ನಾಯಕರು ಹಾಗೂ ಸರ್ಕಾರ ತೀವ್ರ ವಿರೋಧಿಸುತ್ತಿದೆ. ಅಲ್ಲದೇ ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಕಾಂಗ್ರೆಸ್‌ನ ಪ್ರಮುಖ ನಾಯಕರ ವಿರುದ್ಧ ದೂರು ದಾಖಲಿಸಿದೆ.

ಅಷ್ಟೇ ಅಲ್ಲದೇ ಸುಳ್ಳಿನಜಾತ್ರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಾದಯಾತ್ರೆಯನ್ನು ಟ್ರಾಲ್ ಮಾಡುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಾಂಗ್ರೆಸ್ ಪಾದಯಾತ್ರಗೆ ಸಹಕಾರ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಯೆಸ್ ಇದಕ್ಕೆ ಪೂಕರವೆಂಬಂತೆ ಕಾಂಗ್ರೆಸ್ ಪಾದಯಾತ್ರೆಗೆಗಾಗಿ ಮೈಸೂರು-ಬೆಂಗಳೂರು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕಟಣೆ ಹೊರಡಿಸಿದೆ.

ಅರ್ಧಕ್ಕೆ ನಿಲ್ಲುತ್ತಾ ಪಾದಯಾತ್ರೆ?
ಕಾಂಗ್ರೆಸ್ ಪಾದಯಾತ್ರೆ ಚೆಂಡು ಹೈಕೋರ್ಟ್ ಅಂಗಳದಲ್ಲಿದ್ದು, ಕೋರ್ಟ್ ಈ ಪಾದಯಾತ್ರೆಗೆ ಬ್ರೇಕ್ ಹಾಕುತ್ತೋ ಅಥವಾ ಮುನ್ನಡೆಸುತ್ತೋ ಎನ್ನುವುದು ಕುತೂಹಲ ಮೂಡಿಸಿದೆ.

ಜನವರಿ 14ಕ್ಕೆ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಅರ್ಜಿ ವಿಚಾರಣೆಗೆ ಬರಲಿದ್ದು, ಅಂದು ಪಾದಯಾತ್ರೆಯ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ಸಂಗಮದಿಂದ ರಾಮನಗರಕ್ಕೆ ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯ್ಯಯ್ಯೋ.. ದೆವ್ವ ಹಿಡಿದಿದೆಯೆಂದು ಗೃಹಿಣಿಯನ್ನು ಬೇವಿನ ಕಟ್ಟಿಗೆಯಿಂದ ಥಳಿಸಿ ಕೊಲೆ!
ಹಳ್ಳಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ‘ಮಕ್ಕಳ ಮನೆ’: ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರಯೋಗ